More

    150 ಟ್ರಾೃಕ್ಟರ್ ಪ್ಲಾಸ್ಟಿಕ್ ತ್ಯಾಜ್ಯ ಸಂಗ್ರಹ

    ಹನೂರು: ತಾಲೂಕಿನ ಶ್ರೀ ಮಲೆಮಹದೇಶ್ವರ ಸ್ವಾಮಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಯಲ್ಲಿ ಮಹಾ ಶಿವರಾತ್ರಿ ಜಾತ್ರಾ ವೇಳೆ ಸಂಗ್ರಹವಾಗಿದ್ದ 150 ಟ್ರಾೃಕ್ಟರ್ ಪ್ಲಾಸ್ಟಿಕ್ ತ್ಯಾಜ್ಯವನ್ನು 190 ಸಿಬ್ಬಂದಿ ತೆರವುಗೊಳಿಸಿದ್ದು ಈ ಬಗ್ಗೆ ಭಕ್ತರಿಂದ ತೀವ್ರ ಮೆಚ್ಚುಗೆ ವ್ಯಕ್ತವಾಗಿದೆ.


    ಮಹಾ ಶಿವರಾತ್ರಿ ಜಾತ್ರೆ ವೇಳೆ ಲಕ್ಷಾಂತರ ಭಕ್ತರು ಕಾಲ್ನಡಿಗೆ ಮೂಲಕ ಮ.ಬೆಟ್ಟಕ್ಕೆ ಆಗಮಿಸಿದ್ದರು. ಈ ವೇಳೆ ತಾಳುಬೆಟ್ಟ, ಪಾಲಾರ್ ರಸ್ತೆ ಹಾಗೂ ಮ.ಬೆಟ್ಟದ ಮಾರ್ಗದುದ್ದಕ್ಕೂ ಭಕ್ತರು ಪ್ಲಾಸ್ಟಿಕ್ ನೀರಿನ ಬಾಟಲಿ, ಊಟದ ತಟ್ಟೆ, ಲೋಟ, ಕೈಚೀಲ ಸೇರಿದಂತೆ ಇನ್ನಿತರ ತ್ಯಾಜ್ಯವನ್ನು ಎಲ್ಲೆಂದರಲ್ಲಿ ಬಿಸಾಡಿದ್ದರು. ಜತೆಗೆ ದಾನಿಗಳು ನೀಡಿದ್ದ ನೀರಿನ ಬಾಟಲಿಗಳು ಅಲ್ಲಲ್ಲಿ ರಾಶಿ ಬಿದ್ದಿದ್ದವು. ಇದರಿಂದ ಅನೈರ್ಮಲ್ಯಕ್ಕೆ ಕಾರಣವಾಗಿತ್ತು. ಈ ದಿಸೆಯಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಿದ ಪ್ರಾಧಿಕಾರದ ಕಾರ್ಯದರ್ಶಿ ರಘು ಅವರು ಜಾತ್ರಾ ಸಂದರ್ಭದಲ್ಲೇ ಆಗ್ಗಾಗ್ಗೆ ಸಿಬ್ಬಂದಿ ತ್ಯಾಜ್ಯ ತೆರೆವು ಕಾರ್ಯಕ್ಕೆ ಮುಂದಾಗಿದ್ದರು. ಜತೆಗೆ ಕಳೆದ ಒಂದು ವಾರದಿಂದ ನಿರಂತರ ಸ್ವಚ್ಛತಾ ಕಾರ್ಯದಿಂದ 150 ಟ್ರಾೃಕ್ಟರ್ ಪ್ಲಾಸ್ಟಿಕ್ ತ್ಯಾಜ್ಯವನ್ನು ತೆರೆವುಗೊಳಿಸಲಾಗಿದೆ. ಭಾನುವಾರ ವಿವಿಧೆಡೆ ತೆರಳಿದ ಅವರು ಸ್ವಚ್ಛತಾ ಕಾರ್ಯಗಳನ್ನು ಪರಿಶೀಲಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts