More

    15 ಸಾಧಕರಿಗೆ ಗ್ರಾಮೀಣ ಸಿರಿ, ನಗರಿ ಸಿರಿ ಪ್ರಶಸ್ತಿ  -ಜಿಲ್ಲಾ ಕಸಾಪದಿಂದ ನಾಳೆ ಪ್ರದಾನ 

    ದಾವಣಗೆರೆ: ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕ ನೀಡುವ, 2022 ಹಾಗೂ 2023ನೇ ವರ್ಷದ ಜಿಲ್ಲಾ ಮಟ್ಟದ ಗ್ರಾಮೀಣ ಸಿರಿ ಹಾಗೂ ನಗರ ಸಿರಿ ಪ್ರಶಸ್ತಿಗೆ 15 ಮಂದಿ ಸಾಧಕರು ಆಯ್ಕೆಯಾಗಿದ್ದಾರೆ.
    ಗ್ರಾಮೀಣ ಸಿರಿ ಪುರಸ್ಕೃತರು: ಹೊನ್ನನಾಯಕನಹಳ್ಳಿಯ ಎಚ್.ಎಸ್. ಮುರುಗೇಂದ್ರಪ್ಪ (ಪ್ರವಚನ), ಬಿ.ಎಂ. ಪರಿಮಳಾ ಕುರ್ಕಿ (ಕೌಶಲಾಭಿವೃದ್ಧಿ), ಕೆ. ಕೃಷ್ಣಮೂರ್ತಿ ಬಸಪ್ಪನಹಟ್ಟಿ (ಸಾಹಿತ್ಯ ಮತ್ತು ಸಾಂಸ್ಕೃತಿಕ), ಎಂ.ಬಿ. ಉಷಾ ಮರಿಕುಂಟೆ, ಎಂ.ಜಿ. ಶಶಿಕಲಾ ನಲ್ಕುದುರೆ, ನಾಗರಾಜಪ್ಪ ಕತ್ತಿಗೆ (ಸಮಾಜಸೇವೆ), ಟಿ. ನಾಗಭೂಷಣ (ಕನ್ನಡಪರ ಚಳವಳಿ), ವಿ.ಟಿ. ಮಂಜಮ್ಮ ಹೊಳೆಸಿರಿಗೆರೆ (ಉದಯೋನ್ಮುಖ ಸಾಹಿತ್ಯ), ಎಂ.ಟಿ. ತಿಮ್ಮಪ್ಪ ಮಾದಾಪುರ (ರಂಗಭೂಮಿ), ದುರ್ಗಮ್ಮ ದೊಡ್ಡೇರಿ ಹಾಗೂ ಮಾಳೇರ ದುರ್ಗಪ್ಪ (ನಾಟಿ ವೈದ್ಯರು), ಟಿ. ನಾಗರತ್ನಾ (ಆರೋಗ್ಯ ಕ್ಷೇತ್ರ),
    ನಗರ ಸಿರಿ ಪುರಸ್ಕೃತರು: ಕೆ. ಇಮಾಂ (ಶಿಕ್ಷಣ), ನಾ. ರೇವನ್ (ಚಿತ್ರಕಲೆ), ಡಿ.ಕೆ. ಮಾಧವಿ (ನೃತ್ಯಕಲೆ).
    ಕುವೆಂಪು ಕನ್ನಡ ಭವನದಲ್ಲಿ ಸೆ.9 ರ ಬೆಳಗ್ಗೆ 11 ಗಂಟೆಗೆ ನಡೆಯಲಿರುವ ಕಾರ್ಯಕ್ರಮದಲ್ಲಿ ಸಿದ್ಧನಮಠದ ಆಶುಕವಿ ಯುಗಧರ್ಮ ರಾಮಣ್ಣ ಪ್ರಶಸ್ತಿ ವಿತರಿಸುವರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರವಿಚಂದ್ರ ಕಾರ್ಯಕ್ರಮ ಉದ್ಘಾಟಿಸುವರು. ಕಸಾಪ ಜಿಲ್ಲಾಧ್ಯಕ್ಷ ಬಿ.ವಾಮದೇವಪ್ಪ, ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ವೀರೇಶ್ ಎಸ್. ಒಡೇನಪುರ, ಜಗಳೂರಿನ ಸಾಹಿತಿ ಎನ್.ಟಿ. ಎರ‌್ರಿಸ್ವಾಮಿ ಭಾಗವಹಿಸುವರು.
    ಸರ್ಕಾರಿ ಶಾಲೆಯಲ್ಲಿ ಕನ್ನಡ ಮಾಧ್ಯಮದಲ್ಲಿ ಅಭ್ಯಾಸ ಮಾಡಿ ಎಸ್ಸೆಸ್ಸೆಲ್ಸಿ-ಪಿಯು ಪರೀಕ್ಷೆಯಲ್ಲಿ ಜಿಲ್ಲೆಗೆ ಅತಿ ಹೆಚ್ಚು ಅಂಕ ಗಳಿಸಿ ಪ್ರಥಮ ಸ್ಥಾನ ಪಡೆದ ತಲಾ ಮೂವರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts