More

    ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ; ಕನ್ನಡ ಚಿತ್ರರಂಗವನ್ನು ಹೊಗಳಿದ ವಿಜಯೇಂದ್ರ ಪ್ರಸಾದ್

    ಬೆಂಗಳೂರು: ಬಾಹುಬಲಿ ಸಿನಿಮಾ ಖ್ಯಾತಿಯ ಬರಹಗಾರ ವಿಜಯೇಂದ್ರ ಪ್ರಸಾದ್, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೋವಿಂದ್ ನಿಹಲಾನಿ, ಸಚಿವ ಆರ್. ಅಶೋಕ್, ನಟ ಅಭಿಷೇಕ್ ಅಂಬರೀಶ್ ದೀಪ ಬೆಳಗಿಸುವ ಮೂಲಕ 14ನೇ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಚಾಲನೆ ನೀಡಿದ್ದಾರೆ. ಇದೇ ವೇಳೆ ಚಿತ್ರೋತ್ಸವದ ಸ್ಮರಣೆ ಸಂಚಿಕೆಯನ್ನು ವಿಜಯೇಂದ್ರ ಪ್ರಸಾದ್ ಬಿಡುಗಡೆಗೊಳಿಸಿದರು.

    ವಿಜಯೇಂದ್ರ ಪ್ರಸಾದ್ ಮಾತನಾಡುತ್ತಾ, ಹುಟ್ಟಿದರೆ ಕನ್ನಡ ನಾಡಲ್ಲಿ ಹುಟ್ಟಬೇಕು. ಮೆಟ್ಟಿದರೆ ಕನ್ನಡ ಮಣ್ಣಲ್ಲಿ ಮೆಟ್ಟಬೇಕು ಎಂದು ಅಣ್ಣಾವ್ರು ಹೇಳಿದ್ದಾರೆ. ಅದು ನಿಜ. ಆದರೆ ಆ ಅದೃಷ್ಟ ನನಗಿಲ್ಲ. ಆದರೆ ನನ್ನ ಮಗ ಕನ್ನಡ ನಾಡಿನಲ್ಲಿ ಜನಿಸಿ ಸಾಕಷ್ಟು ಸಾಧನೆ ಮಾಡಿದ್ದಾನೆ. ನನ್ನ ಮಗನಿಗೆ ಸಾಧನೆ ಮಾಡಲು ಸಿಕ್ಕಂತಹ ಅವಕಾಶಗಳೆಲ್ಲ, ಕರ್ನಾಕದಲ್ಲಿ ಹುಟ್ಟಿದ ಪ್ರತಿಯೊಬ್ಬನಿಗೂ ದೇವರು ಕರುಣಿಸಲಿ ಎಂದು ಹೇಳಿದರು.

    ಇದೇ ವಳೆ ಸಿಎಂ ಬಸವರಾಜ ಬೊಮ್ಮಾಯಿ ಅವರು ಸಿನಿಮಾ ಕ್ಷೇತ್ರಕ್ಕೆ ಸಾಕಷ್ಟು ಕೊಡುಗೆ ನೀಡಿದ್ದಾರೆ. ಹಾಗೆಯೇಕೆಜಿಎಫ್ ಸಿನಿಮಾ ಮೂಲಕ ಕನ್ನಡ ಚಿತ್ರರಂಗ ಎಲ್ಲೆಡೆ ಸದ್ದು ಮಾಡುತ್ತಿದೆ ಎಂದು ವಿಜಯೇಂದ್ರ ಪ್ರಸಾದ್ ಹೇಳಿದರು.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಚಿತ್ರೋತ್ಸವ ಜಗತ್ತಿನ ಕೆಲವೇ ಕೆಲವು ನಗರದಲ್ಲಿ ನಡೆಯುತ್ತವೆ. ಅದರಲ್ಲಿ ನಮ್ಮ ಬೆಂಗಳೂರು ಒಂದಾಗಿರುವುದು ಹೆಮ್ಮೆ. ಬೆಂಗಳೂರು ಅಂತರಾಷ್ಟ್ರೀಯ ನಗರವಾಗಿದ್ದು, 500 ಫಾರ್ಚನ್ ಕಂಪೆನಿಯಲ್ಲಿ 400 ನಮ್ಮಲಿವೆ. ಬರುವ ದಿನಗಳಲ್ಲಿ ಫೈನಾನ್ಸ್ ಕ್ಯಾಪಿಟಲ್ ಆಗಲಿದೆ. ಇಂಟರ್​​ನ್ಯಾಶನಲ್ ಕಾಸ್ನೋ ಪಾಲಿಟನ್ ಸಿಟಿಯಾದ ಬೆಂಗಳೂರಿನಲ್ಲಿ ಚಿತ್ರೊತ್ಸವ ಆಗದೆ ಹೋದ್ರೆ ಹೇಗೆ? ಮಾತಿಲ್ಲದ ಸಿನಿಮಾದಿಂದ ಹಿಡಿದು ಅತ್ಯಂತ ಅದ್ಭುತ ತಂತ್ರಜ್ಞಾನ ಬಳಕೆ ಮಾಡಿದ ಸಿನಿಮಾ ನಮ್ಮಲ್ಲಿದೆ ಎಂದರು.

    ಸಿನಿಮಾ ಸ್ಟುಡಿಯೋಗಳ ಮೇಕಿಂಗ್ ಬದಲಾಗಿದ್ದು, ವೀಕ್ಷಕರೂ ಬದಲಾಗಿದ್ದಾರೆ. ದಕ್ಷಿಣ ಭಾರತೀಯ ಸಿನಿಮಾಗಳಲ್ಲಿ ಕನ್ನಡ ಸಿನಿಮಾಗಳು ಅಂತಾರಾಷ್ಟ್ರೀಯ ಮಟ್ಟದಲ್ಲಿ ಹೆಸರು ಮಾಡುತ್ತಿವೆ. ಕೆಜಿಎಫ್ ಸಿನಿಮಾ ತಾಂತ್ರಿಕವಾಗಿ ಸದ್ದು ಮಾಡಿದೆ. ಸ್ಥಳಿಯ ಆಚರಣೆ ಹಾಗೂ ಕಥೆಯನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕಾಂತಾರ ಸಿನಿಮಾ ತೆಗೆದುಕೊಂಡು ಹೋಗಿದೆ. ಸಿನಿಮಾ ಇಲ್ಲದೆ ನಮ್ಮ ಬದುಕಿಲ್ಲ. ಹೀಗಾಗಿ ಸಿನಿಮಾ ರಂಗಕ್ಕೆ ಎನು ಬೇಕೋ ಎಲ್ಲವನ್ನೂ ಮಾಡಿದ್ದೇನೆ. ಮಿನಿ ಥಿಯೇಟರ್ ನಿರ್ಮಾಣಕ್ಕೆ ಮುಂದಾಗಿದ್ದೇವೆ. ಶೀಘ್ರದಲ್ಲೇ ಫಿಲ್ಮ್ ಸಿಟಿ ನಿರ್ಮಾಣ ಆಗುತ್ತದೆ. ಅದನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಮಾಡಲು ತಯಾರಿ ನಡೆಯುತ್ತಿದೆ ಎಂದು ಸಿಎಂ ಬೊಮ್ಮಾಯಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts