More

    ಉಚಗೇರಿ ಭಾಗದಲ್ಲಿ ಬೀಡು ಬಿಟ್ಟಿವೆ 14 ಆನೆಗಳು

    ಯಲ್ಲಾಪುರ: ತಾಲೂಕಿನ ಉಚಗೇರಿ- ಚಿಪಗೇರಿ ಭಾಗದಲ್ಲಿ ಕಾಡಾನೆಗಳ ಹಾವಳಿ ಮುಂದುವರಿದಿದ್ದು, ರೈತರ ಜಮೀನುಗಳಿಗೆ ನುಗ್ಗಿ ಬೆಳೆ ಹಾನಿ ಮಾಡುತ್ತಿವೆ. ಕಳೆದ 8-10 ದಿನಗಳಿಂದ ಉಚಗೇರಿ ಭಾಗದಲ್ಲಿ ಒಟ್ಟು 14 ಆನೆಗಳ ಗುಂಪು ರಾತ್ರಿ ಕೃಷಿ ಭೂಮಿಗೆ ನುಗ್ಗಿ ಹತ್ತಾರು ಎಕರೆಯಲ್ಲಿ ಬೆಳೆದ ಭತ್ತದ ಬೆಳೆ ಹಾಳು ಮಾಡಿವೆ.

    ಏಳು ಆನೆಗಳು ಕಾತೂರು ವಲಯದ ಅಟಬೈಲ್, ತೊಗರಳ್ಳಿ, ಕಂಚಿಕೊಪ್ಪ ಭಾಗದಲ್ಲಿ ಸಂಚರಿಸುತ್ತಿದ್ದು, ಇದರಲ್ಲಿ ಒಂದು ಆನೆ ಮರಿ ಹಾಕಿದೆ. 7 ಆನೆಗಳ ಇನ್ನೊಂದು ತಂಡ ಉಚಗೇರಿ, ಕಸಗೆಜಡ್ಡಿ, ಜಾರಗಲ್ಲು ಭಾಗದಲ್ಲಿ ಸಂಚರಿಸುತ್ತಿವೆ. ಇಷ್ಟು ದಿನಗಳ ಕಾಲ ರಾತ್ರಿ ವೇಳೆ ಜಮೀನಿಗೆ ನುಗ್ಗುತ್ತಿದ್ದು, ಆನೆಗಳು ಕಳೆದ 2-3 ದಿನಗಳಿಂದ ಹಗಲಿನಲ್ಲಿಯೂ ಕಂಡುಬರುತ್ತಿವೆ. ರಸ್ತೆಯಲ್ಲಿ ಸಂಚರಿಸುತ್ತಿರುವ ಆನೆಗಳು ಜನರನ್ನು ಅಟ್ಟಿಸಿಕೊಂಡು ಬರುತ್ತಿದ್ದು, ಬೈಕ್ ಒಂದನ್ನು ನಜ್ಜುಗುಜ್ಜಾಗಿಸಿದ ಘಟನೆಯೂ ನಡೆದಿದೆ.

    ಕಸಗೆಜಡ್ಡಿ, ಜಾರಗಲ್ಲು ಭಾಗದಲ್ಲಿ ಉಮ್ಮಚಗಿ ಕಾತೂರು ರಸ್ತೆಯ ಮೇಲೆ ಆನೆಗಳು ಸಂಚರಿಸುತ್ತಿರುವುದು ಕಂಡುಬಂದಿದ್ದು, ಸ್ಥಳೀಯರು ಓಡಾಡಲು ಭಯಪಡುವಂತಾಗಿದೆ. ಅರಣ್ಯ ಇಲಾಖೆ ಆನೆಗಳ ಹಾವಳಿ ನಿಯಂತ್ರಿಸಲು ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts