More

    ಮಂಗಳೂರಲ್ಲಿ 1,256 ಮಂದಿ ಹೆಸರು ರೌಡಿಶೀಟರ್​ ಪಟ್ಟಿಯಿಂದ ಮುಕ್ತ

    ಮಂಗಳೂರು: ವಿವಿಧ ಅಪರಾಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡು ಠಾಣೆಗಳಲ್ಲಿ ರೌಡಿಶೀಟರ್ ಆಗಿ ಗುರುತಿಸಿಕೊಂಡಿದ್ದ 1,256 ಮಂದಿಯನ್ನು ರೌಡಿ ಪಟ್ಟಿಯಿಂದ ಮಂಗಳೂರು ಪೊಲೀಸ್ ಕಮಿಷನರೇಟ್​ ವ್ಯಾಪ್ತಿಯಲ್ಲಿ ಮುಕ್ತಗೊಳಿಸಲಾಗಿದೆ.

    ಹಲವು ವರ್ಷಗಳಿಂದ ಅಪರಾಧ ಚಟುವಟಿಕೆಗಳಿಂದ ದೂರ ಉಳಿದು ಉತ್ತಮ ಜೀವನ ರೂಪಿಸಿಕೊಂಡ ಹಿನ್ನೆಲೆಯಲ್ಲಿ ಅವರನ್ನು ರೌಡಿಶೀಟರ್ ಪಟ್ಟಿಯಿಂದ ಮುಕ್ತ ಮಾಡಲಾಗಿದೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಶಶಿಕುಮಾರ್ ತಿಳಿಸಿದ್ದಾರೆ.

    ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಒಟ್ಟು 3263 ಜನ ರೌಡಿಶೀಟರ್​ಗಳಿದ್ದರು. ಅದರಲ್ಲಿ 80 ಜನರು ವಯಸ್ಸಾದವರು. 663 ಮಂದಿಯ ಪ್ರಕರಣಗಳು ಮುಗಿದಿವೆ. ಇತ್ತೀಚಿನ ವರ್ಷಗಳಲ್ಲಿ ಕ್ರೈಂನಲ್ಲಿ ಭಾಗಿಯಾಗದ 513 ಮಂದಿ ಸೇರಿ ಒಟ್ಟು 1256 ರೌಡಿಗಳ ಹೆಸರನ್ನು ರೌಡಿಶೀಟ್​ ಪಟ್ಟಿಯಿಂದ ಕ್ಲೋಸ್ ಮಾಡಿದ್ದಾರೆ.

    ಮಂಗಳೂರಲ್ಲಿ 1,256 ಮಂದಿ ಹೆಸರು ರೌಡಿಶೀಟರ್​ ಪಟ್ಟಿಯಿಂದ ಮುಕ್ತ

    ಈ ಹಿನ್ನೆಲೆ ಬುಧವಾರ ಮಂಗಳೂರಿನ ಟಿ.ಎನ್.ರಮಣ ಪೈ ಹಾಲ್​ನಲ್ಲಿ ರೌಡಿಶೀಟ್ ಕ್ಲೋಸ್ ಆದ ರೌಡಿಗಳಿಗೆ ‘ಪರಿವರ್ತನಾ ಕಾರ್ಯಕ್ರಮ’ ಹಮ್ಮಿಕೊಳ್ಳಲಾಗಿತ್ತು. ಉದ್ಯಮಿ ಡಾ.ಎ.ಜೆ.ಶೆಟ್ಟಿ, ಫಾದರ್ ಮುಲ್ಲರ್ ಆಸ್ಪತ್ರೆಯ ಆಡಳಿತಾಧಿಕಾರಿ ರುಡಾಲ್ಫ್ ರವಿ ಡೇಸಾ, ಯುನಿಟಿ ಆಸ್ಪತ್ರೆಯ ಅಧ್ಯಕ್ಷ ಹಬೀಬ್ ರೆಹಮಾನ್ ಅವರು ಸನ್ನಡತೆ ಕುರಿತು ಉಪನ್ಯಾಸ ಕೊಟ್ಟರು.

    ಒಕ್ಕಲಿಗರ ಸಂಘದ ಚುನಾವಣೆ: 3 ಜಿಲ್ಲೆಯ ಫಲಿತಾಂಶ ತಡರಾತ್ರಿ ಪ್ರಕಟ, 35 ಸ್ಥಾನಕ್ಕೆ ಗೆದ್ದವರ ಲಿಸ್ಟ್ ಇಲ್ಲಿದೆ

    ಸ್ನಾನಕ್ಕೆ ನೀರು ಕಾಯಿಸುತ್ತಿದ್ದಾಗ ಹೀಟರ್ ರೂಪದಲ್ಲಿ ಬಂದ ಜವರಾಯ ಯುವತಿಯ ಪ್ರಾಣ ಹೊತ್ತೊಯ್ದ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts