More

    ಮಾರ್ಚ್ ಅಂತ್ಯಕ್ಕೆ ರಸ್ತೆ ಕಾಮಗಾರಿ ಪೂರ್ಣ

    ಚಿಕ್ಕಮಗಳೂರು: 11 ಕೋಟಿ ರೂ. ವೆಚ್ಚದಲ್ಲಿ ನಗರದ ರಸ್ತೆ ಡಾಂಬರೀಕರಣ ಯೋಜನೆಗೆ ಕಾರ್ಯಾದೇಶ ನೀಡಲಾಗಿದ್ದು, ಮಾರ್ಚ್ ಅಂತ್ಯದೊಳಗೆ ಕೆಲಸ ಪೂರ್ಣವಾಗುವ ನಿರೀಕ್ಷೆಯಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ.ರವಿ ಹೇಳಿದರು.

    ನಗರಸಭೆ ಆವರಣದಲ್ಲಿ ಆನ್​ಲೈನ್ ಸೇವಾ ಕೊಠಡಿ ಉದ್ಘಾಟನೆ, ಸಿಬ್ಬಂದಿಗೆ ವಾಕಿಟಾಕಿ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

    ಎಐಟಿ ವೃತ್ತದಿಂದ ಹಿರೇಮಗಳೂರುವರೆಗೆ ಸೇವಾ ರಸ್ತೆ ಸೇರಿ ರಾಷ್ಟ್ರೀಯ ಹೆದ್ದಾರಿಯ ಬೈಪಾಸ್ ರಸ್ತೆ ಅಭಿವೃದ್ಧಿಗೆ 29 ಕೋಟಿ ರೂ. ವೆಚ್ಚದ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದೆ. ಈ ಕಾಮಗಾರಿ ಕೂಡ ಏಪ್ರಿಲ್ ಅಂತ್ಯದೊಳಗೆ ಪೂರ್ಣಗೊಳ್ಳುತ್ತದೆ. ನಗರೋತ್ಥಾನ ಯೋಜನೆಯಲ್ಲಿ ಓವರ್​ಲ್ಯಾಪ್ ಆಗಿ ಉಳಿದಿರುವ 6 ಕೋಟಿ ರೂ. ವೆಚ್ಚದ ವಿವಿಧ ರಸ್ತೆ ಡಾಂಬರೀಕರಣಕ್ಕೆ ಕ್ರಿಯಾಯೋಜನೆ ಸಲ್ಲಿಸಲಾಗಿದೆ. ಅನುಮೋದನೆ ನಂತರ ಕಾಮಗಾರಿ ಆರಂಭಿಸಲಾಗುತ್ತದೆ ಎಂದರು.

    ಹನುಮಂತಪ್ಪ ವೃತ್ತದಿಂದ ಕೆಂಪನಹಳ್ಳಿವರೆಗೆ 3 ಕೋಟಿ ರೂ., ಮಲ್ಲಂದೂರು ವೃತ್ತದಿಂದ ಖಾಸಗಿ ಬಸ್ ನಿಲ್ದಾಣದವರೆಗೆ ಚರಂಡಿ ಅಭಿವೃದ್ಧಿಗೆ 1 ಕೋಟಿ ರೂ., ಮೌಂಟೆನ್ ವ್ಯೂವರೆಗೆ ಡಾಂಬರೀಕರಣಕ್ಕೆ 3 ಕೋಟಿ ರೂ., ಮಂಜೂರಾಗಿದೆ. ಕತ್ರಿಮಾರಮ್ಮ ದೇವಾಲಯದ ಬಳಿ ಲೋಕೋಪಯೋಗಿ ಇಲಾಖೆಯಿಂದ 1 ಕೋಟಿ ರೂ. ವೆಚ್ಚದಲ್ಲಿ ವಾಣಿಜ್ಯ ಮಳಿಗೆ ನಿರ್ಮಾಣ ಮಾಡಲಾಗುತ್ತದೆ ಎಂದರು.

    ಕಲಸ ವಿಲೇ ಘಟಕಕ್ಕೆ 6.22 ಕೋ ರೂ.: ಘನತ್ಯಾಜ್ಯ ವಿಲೇ ಘಟಕದಲ್ಲಿ 6.22 ಕೋಟಿ ರೂ. ವೆಚ್ಚದಲ್ಲಿ ವಿವಿಧ ಸಿವಿಲ್ ಕಾಮಗಾರಿ ಪ್ರಗತಿಯಲ್ಲಿದೆ. 1.35 ಕೋಟಿ ರೂ.ನಲ್ಲಿ 22 ಆಟೋ ಟಿಪ್ಪರ್ ಖರೀದಿ, 1.13 ಕೋಟಿ ರೂ.ನಲ್ಲಿ 3 ಟ್ರಾಮೇಲ್, 36 ಲಕ್ಷದ ರೂ., ವೆಚ್ಚದ ಒಂದು ಕಾಂಪ್ಯಾಕ್ಟರ್ ಸೇರಿ 3.11 ಕೋಟಿ ರೂ. ಅನುದಾನದಲ್ಲಿ ವಿವಿಧ ವಾಹನ, ಯಂತ್ರೋಪಕರಣ ಖರೀದಿಗೆ ಟೆಂಡರ್ ಕರೆಯಲಾಗಿದೆ ಎಂದು ಸಿ.ಟಿ.ರವಿ ಹೇಳಿದರು.

    ನೈರ್ಮಲ್ಯ ಮತ್ತು ಸ್ವಚ್ಛತೆಗೆ ಆದ್ಯತೆ ಕೊಟ್ಟು ಎರಡು ಕಡೆ ಫುಡ್​ಕೋರ್ಟ್ ನಿರ್ವಿುಸಲು ಉದ್ದೇಶಿಸಲಾಗಿದೆ. ನಗರದ ಬೀದಿ ಬದಿ ವ್ಯಾಪಾರಸ್ಥರ ಅನುಕೂಲಕ್ಕಾಗಿ ಸಂತೆ ಮೈದಾನದಲ್ಲಿ ಸುಸಜ್ಜಿತ ಮಾರುಕಟ್ಟೆ ನಿರ್ವಣಕ್ಕೆ ಡಿಪಿಆರ್ ತಯಾರಾಗುತ್ತಿದೆ. ಎಂ.ಜಿ. ರಸ್ತೆಯ ಹಿಂದು ಮುಸಾಫಿರ್ ಖಾನ್ ಜಾಗದಲ್ಲಿ ವಾಣಿಜ್ಯ ಸಂಕೀರ್ಣ ನಿರ್ವಣಕ್ಕೆ ಕ್ರಮ ಕೈಗೊಳ್ಳಲಾಗಿದೆ. ಆದಾಯದ ಜೊತೆ ನಮ್ಮ ಷರತ್ತಿಗೆ ಒಪ್ಪಿ ಶೇರು ಬಂಡವಾಳ ತೊಡಗಿಸುವ ಖಾಸಗಿ ಹೂಡಿಕೆದಾರರು ಮುಂದೆ ಬಂದಲ್ಲಿ ಯೋಚಿಸುತ್ತೇವೆ. ಇಲ್ಲವಾದಲ್ಲಿ ಸಾಲ ಪಡೆದು ನಗರಸಭೆಯಿಂದಲೆ ಕಟ್ಟಡ ನಿರ್ವಿುಸಲಾಗುವುದು ಎಂದರು.

    ಆನ್​ಲೈನ್-ಟೋಲ್ ಫ್ರೀ ಸಂಖ್ಯೆ: ಖಾತಾ ಬದಲಾವಣೆ, ಉದ್ದಿಮೆ, ಕಟ್ಟಡ ಪರವಾನಗಿ ಸೇರಿ ವಿವಿಧ ಕೆಲಸಗಳಿಗೆ ನಾಗರಿಕರು ದಲ್ಲಾಳಿಗಳ ಮೇಲೆ ಅವಲಂಬನೆಯಾಗುವುದನ್ನು ಮತ್ತು ಕಚೇರಿಗೆ ಅನಗತ್ಯ ಅಲೆದಾಟ ತಪ್ಪಿಸಲು ಆನ್​ಲೈನ್ ವ್ಯವಸ್ಥೆ ಮಾಡಲಾಗಿದೆ ಎಂದು ಸಚಿವ ಸಿ.ಟಿ.ರವಿ ಹೇಳಿದರು. ಯಾವ ಕೆಲಸಕ್ಕೆ ಎಷ್ಟು ದಿನ ಎಂದು ನಿಗದಿಪಡಿಸಲಾಗಿದ್ದು, ಮಧ್ಯವರ್ತಿಗಳ ಅವಲಂಬನೆ ತಪ್ಪಿಸಲು ಇದು ಸಹಕಾರಿಯಾಗುತ್ತದೆ. ಸಾರ್ವಜನಿಕರಿಗಾಗಿ ಟೋಲ್ ಫ್ರೀ ದೂರವಾಣಿ ಆರಂಭಿಸಿದ್ದು, ಎಲ್ಲೆಂದಲ್ಲಿ ಕಸ ವಿಲೇವಾರಿ ಮಾಡುವುದನ್ನು ತಪ್ಪಿಸಲು 8262233136ಗೆ ದೂರು ಸಲ್ಲಿಸಿದರೆ ನಗರಸಭೆ ವಾಹನ ಸ್ಥಳಕ್ಕೆ ತೆರಳಿ ಕಸ ಸ್ವೀಕರಿಸಿ ಇಂತಿಷ್ಟು ಶುಲ್ಕ ಪಡೆಯಲಾಗುವುದು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts