More

    ಹೆಸರು ಸೇರ್ಪಡೆ ಖಚಿತಪಡಿಸಿಕೊಳ್ಳಿ

    ದಾಂಡೇಲಿ: ಮತದಾರರ ಪಟ್ಟಿಗೆ ಹೆಸರು ನೋಂದಾಯಿಸಿಕೊಂಡ ಹೊಸ ಮತದಾರರು ತಮ್ಮ ಹೆಸರು ಸೇರ್ಪಡೆಗೊಂಡ ಬಗ್ಗೆ ಬೂತ್ ಮಟ್ಟದ ಚುನಾವಣೆ ಅಧಿಕಾರಿಗಳಿಂದ ಖಚಿತಪಡಿಸಿಕೊಳ್ಳಬೇಕು ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿ ಡಾ. ಸಂಜೀವಕುಮಾರ ಹೇಳಿದರು.

    ಜೊಯಿಡಾ ತಾಲೂಕಿನ ಮೌಳಂಗಿ ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಬುಧವಾರ ಆಯೋಜಿಸಿದ್ದ ಮತದಾರರ ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

    ಮತದಾನದ ಸಮಯದಲ್ಲಿ ಮತಗಟ್ಟೆಯಲ್ಲಿ ಹೆಸರು ಇರುವ ಬಗ್ಗೆ ತಪಾಸಣೆ ಮಾಡುವುದು ಸರಿಯಲ್ಲ ಎಂದು ಅವರು ಹೇಳಿದರು. ಬರುವ ದಿನಗಳಲ್ಲಿ ಮತದಾರರ ಗುರುತಿನ ಚೀಟಿಯನ್ನು (ಎಪಿಕ್ ಕಾರ್ಡ್) ಇ- ಎಪಿಕ್ ಆಪ್​ನಲ್ಲಿ ಪಡೆದು ಅದನ್ನೇ ಮತದಾನದ ಸಮಯದಲ್ಲಿ ಬಳಸುವ ವಿಧಾನ ಜಾರಿಗೆ ಬರಲಿದೆ ಎಂದರು.

    ಹೊಸದಾಗಿ ಮತದಾನದ ಹಕ್ಕು ಪಡೆದ ಯುವಕ- ಯುವತಿಯರಿಗೆ ಸಮಾರಂಭದಲ್ಲಿ ಮತದಾನದ ಗುರುತಿನ ಚೀಟಿ ವಿತರಿಸಿದರು. ನಂತರ ಮೌಳಂಗಿಯ ಮತಗಟ್ಟೆಯ ಅಧಿಕಾರಿ ಸಿದ್ಧಪಡಿಸಿದ ಮತದಾರರ ಪಟ್ಟಿ ಪರಿಷ್ಕರಣೆ ನಮೂನೆಗಳನ್ನು ಡಾ. ಸಂಜೀವಕುಮಾರ ಪರಿಶೀಲಿಸಿದರು.

    ಜಿಲ್ಲಾಧಿಕಾರಿ ಡಾ. ಹರೀಶ ಕುಮಾರ, ಅಪರ ಜಿಲ್ಲಾಧಿಕಾರಿ ಕೃಷ್ಣ ಮೂರ್ತಿ, ಜಿಪಂ ಸಿಇಒ ಪ್ರಿಯಾಂಗಾ ಎಂ., ಶಿರಸಿ ಉಪವಿಭಾಗಾಧಿಕಾರಿ ಆಕೃತಿ ಬನ್ಸಾಲ್, ಕಾರವಾರ ಉಪವಿಭಾಗಾಧಿಕಾರಿ ವಿದ್ಯಾಶ್ರೀ ಚಂದರಗಿ ಉಪಸ್ಥಿತರಿದ್ದರು.

    ಜೊಯಿಡಾ ತಹಸೀಲ್ದಾರ್ ಸಂಜು ಕಾಂಬಳೆ, ದಾಂಡೇಲಿ ತಹಸೀಲ್ದಾರ್ ಶೈಲೇಶ ಪರಮಾನಂದ ಮೌಳಂಗಿ, ಮತಗಟ್ಟೆ ಅಧಿಕಾರಿ ಶ್ರೀಕಾಂತ ಹೊನ್ನಪ್ಪ ನಾಯ್ಕ ಕಾರ್ಯಕ್ರಮ ನಡೆಸಿಕೊಟ್ಟರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts