More

    ಹೆಣ್ಣು ಮಕ್ಕಳ ನಿರ್ಲಕ್ಷ್ಯ ಸಲ್ಲದು

    ಬಂಕಾಪುರ: ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆ ಜಾಗೃತಿ ಕಾರ್ಯಕ್ರಮದ ಅಂಗವಾಗಿ ಹೋತನಹಳ್ಳಿ ಗ್ರಾಮದ ಅಂಗನವಾಡಿ ಕೇಂದ್ರದಲ್ಲಿ ಹೆಣ್ಣು ಮಗುವಿನ ಜನ್ಮ ದಿನಾಚರಣೆ ಮತ್ತು ಮಗುವಿನ ಹೆಸರಿನಲ್ಲಿ ಸಸಿ ನೆಡುವ ಕಾರ್ಯಕ್ರಮ ಗುರುವಾರ ಜರುಗಿತು.

    ಹೋತನಹಳ್ಳಿ ಪಿಡಿಒ ಶಾಂತಿನಾಥ ನ್ಯಾಮಗೌಡ್ರ ಮಾತನಾಡಿ, ಮಕ್ಕಳ ಪಾಲಕರು ಗಂಡು, ಹೆಣ್ಣು ಎಂದು ಭೇದ ಮಾಡದೇ ಎಲ್ಲರನ್ನೂ ಒಂದೇ ಭಾವನೆಯಿಂದ ನೋಡಬೇಕು. ಗಂಡು ಮಕ್ಕಳ ಪಾಲನೆ, ಪೋಷಣೆಯತ್ತ ಹೆಚ್ಚು ಗಮನ ಹರಿಸಬೇಕು. ಹೆಣ್ಣು ಮಕ್ಕಳನ್ನು ನಿರ್ಲಕ್ಷಿಸುವುದು ಬೇಡ. ಬೇಟಿ ಪಡಾವೋ ಬೇಟಿ ಬಚಾವೋ ಯೋಜನೆಯಡಿ ಹೆಣ್ಣು ಮಕ್ಕಳನ್ನು ಓದಿಸಿ, ಉಳಿಸಿ, ಬೆಳೆಸುವ ಜವಾಬ್ದಾರಿ ನಮ್ಮೆಲ್ಲರದ್ದಾಗಿದೆ ಆಗಿದೆ ಎಂದರು.

    ಸರ್ಕಾರಿ ಪ್ರಾಥಮಿಕ ಶಾಲೆ, ಪ್ರೌಢಶಾಲೆ ಮಕ್ಕಳಿಂದ ಯೋಜನೆ ಕುರಿತು ಸೈಕಲ್ ಜಾಥಾ ನಡೆಯಿತು. ಎಸ್​ಡಿಎಂಸಿ ಅಧ್ಯಕ್ಷ ಸುರೇಶ ಗುಳಣ್ಣವರ ಅಧ್ಯಕ್ಷತೆ ವಹಿಸಿದ್ದರು. ಅಂಗನವಾಡಿ ಮೇಲ್ವಿಚಾರಕಿ ಜಯಶ್ರೀ ಕಾವಲಕೊಪ್ಪ, ವಿ.ಎಂ. ಆವುಜಿ, ನಾಗರಾಜ ರಾಯಣ್ಣವರ, ಅಂಗನವಾಡಿ, ಆಶಾ ಕಾರ್ಯಕರ್ತೆಯರು, ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts