More

    ಹೆಣ್ಣನ್ನು ದೇವತಾ ಸ್ವರೂಪಿಯಾಗಿ ಕಾಣಬೇಕು 

     ಶೃಂಗೇರಿ: ಶಾಸ್ತ್ರದಲ್ಲಿ ಹೆಣ್ಣುಮಕ್ಕಳನ್ನು ಮಹಾಲಕ್ಷ್ಮೀ ಸ್ವರೂಪದಲ್ಲಿ ಕಾಣಲಾಗುತ್ತದೆ. ಸನಾತನ ಧರ್ಮದಲ್ಲಿ ಸ್ತ್ರೀಯರಿಗೆ ವಿಶೇಷ ಸ್ಥಾನ ನೀಡಿಲ್ಲ. ಅವರ ಶ್ರೇಯೋಭಿವೃದ್ಧಿಗೆ ಧರ್ಮ ಯಾವುದೇ ಕೊಡುಗೆ ನೀಡಲಿಲ್ಲ ಎಂಬ ಭ್ರಮೆಯಲ್ಲಿ ಕೆಲವರು ಅಪಪ್ರಚಾರ ಮಾಡುತ್ತಿದ್ದಾರೆ. ಇದು ಜಗತ್ತಿನ ಅತಿ ದೊಡ್ಡ ಅಸತ್ಯ ಎಂದು ಶೃಂಗೇರಿ ಶ್ರೀ ಶಾರದಾಪೀಠದ ಜಗದ್ಗುರು ಶ್ರೀ ವಿಧುಶೇಖರಭಾರತೀ ಸ್ವಾಮೀಜಿ ತಿಳಿಸಿದರು.

    ಅವರು ಶಾರದಾಪೀಠದ ಆವರಣದಲ್ಲಿರುವ ಶ್ರೀ ಚಂದ್ರಶೇಖರಭಾರತೀ ಸಭಾಂಗಣದಲ್ಲಿ ಭಾನುವಾರ ಶ್ರೀ ಜಗದ್ಗುರು ಅಭಿನವ ವಿದ್ಯಾತೀರ್ಥ ಪ್ರೌಢಶಾಲೆಯ ಸುವರ್ಣಮಹೋತ್ಸವದಲ್ಲಿ ಅನುಗ್ರಹಭಾಷಣ ಮಾಡಿದರು. ಧರ್ಮದಲ್ಲಿ ದೇವಿಯ ಆರಾಧನೆ ಮಾಡುವಾಗ ಸುವಾಸಿನೀ, ಕುಮಾರೀ ಪೂಜೆ ಸಲ್ಲಿಸಲಾಗುತ್ತಿದೆ. ಸಪ್ತಶತಿ ಪಾರಾಯಣದಲ್ಲಿ ಜ್ಞಾನ ನೀಡುವ ಚೈತನ್ಯ ಸ್ವರೂಪಿ ಜಗನ್ಮಾತೆ ಎಂದು ಸ್ತುತಿಸಲಾಗುತ್ತಿದೆ. ಪ್ರತಿಯೊಬ್ಬ ಹೆಣ್ಣುಮಕ್ಕಳಲ್ಲಿ ನಾವು ದೇವತಾಸ್ವರೂಪಿಯನ್ನು ಕಾಣಬೇಕು ಎಂದರು.

    ಸ್ತ್ರೀಯರನ್ನು ಕೇವಲವಾಗಿ ಶಾಸ್ತ್ರದಲ್ಲಿ ನೋಡಲಾಗಿದೆ ಎಂದು ಹಲವರು ಅಪಪ್ರಚಾರ ಮಾಡುತ್ತಿದ್ದಾರೆ. ಹೀಗೆ ಹೇಳಲು ಹೊರಟರೆ ಅದು ಶಾಸ್ತ್ರದ ದೋಷವಲ್ಲ. ಅದು ವ್ಯಕ್ತಿಯ ದೋಷ. ಶಾಸ್ತ್ರಗಳನ್ನು ಸರಿಯಾಗಿ ಅರ್ಥಮಾಡಿಕೊಳ್ಳದೇ ವ್ಯಕ್ತಿಗಳು ಶಾಸ್ತ್ರದ ಕುರಿತು ಅವಹೇಳನ ಮಾಡುತ್ತಿದ್ದರೆ ಅದು ಅವರ ಅಹಂಕಾರದ ದೃಷ್ಟಿಕೋನ. ಶಾಸ್ತ್ರದಲ್ಲಿ ಹೇಳಿರುವುದು ಬೇರೆ. ಆದರೆ ಹೊರಗೆ ಪ್ರಚಾರ ಮಾಡುವುದು ಬೇರೆ ರೀತಿಯಾಗಿದ್ದು ಇದು ಬದಲಾಗಬೇಕಿದೆ ಎಂದರು.

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts