More

    ಹೃದಯಾಘಾತದಿಂದ ಕಾಡುಕೋಣ ಸಾವು


    ಯಾದಗಿರಿ: ಶಹಾಪುರ ತಾಲೂಕಿನ ಹೊಸಕೇರಾ ಗ್ರಾಮದ ಬಳಿಯ ಎಸ್ಬಿಸಿ ಕಾಲುವೆಯಲ್ಲಿ ದೈತ್ಯ ಕಾಡುಕೋಣ ಬುಧವಾರ ಪ್ರತ್ಯಕ್ಷವಾಗಿದ್ದು, ಅರಣ್ಯ ಇಲಾಖೆ ಅಕಾರಿಗಳ ತಂಡ ಹೊರಗಡೆ ತೆಗೆದು ಪಶು ಆಸ್ಪತ್ರಗೆ ಸೇರಿಸುವ ವೇಳೆ ಹೃದಯಾಘಾತದಿಂದ ಸಾವನ್ನಪ್ಪಿದ ಘಟನೆ ನಡೆದಿದೆ.

    ಎಸ್ಬಿಸಿ ಕಾಲುವೆಯಲ್ಲಿ ದೈತ್ಯ ಪ್ರಾಣಿ ಕಂಡ ಜನತೆ ಮೊದಮೊದಲು ಆತಂಕಗೊಂಡಿದ್ದರು. ಅದು ಕಾಡುಕೋಣ ಎಂದು ತಿಳಿದ ತಕ್ಷಣ ಹಗ್ಗದಿಂದ ಅದನ್ನು ತಡೆದು, ಅರಣ್ಯ ಇಲಾಖೆ ಅಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದ ಸುರಪುರ ಪ್ರಾದೇಶಿಕ ಅರಣ್ಯ ಇಲಾಖೆಯ ವಲಯ ಅರಣ್ಯ ಅಕಾರಿ ಮೌಲಾಲಿಸಾಬ ನೇತೃತ್ವದ ತಂಡ ಗ್ರಾಮಸ್ಥರೊಂದಿಗೆ ಹರಸಾಹಸ ಪಟ್ಟು ಕೋಣ ಸೆರೆ ಹಿಡಿದರು. ಚಿಕಿತ್ಸೆಗೆಂದು ಸಾಗಿಸುವ ಮಾರ್ಗ ಮಧ್ಯದಲ್ಲಿ ಸಾವನ್ನಪ್ಪಿದೆ ಎಂದು ಅಕಾರಿಗಳು ತಿಳಿಸಿದ್ದಾರೆ.

    ಕಾಡುಕೋಣ ಈ ಭಾಗದಲ್ಲಿ ಎಲ್ಲೂ ಕಂಡು ಬರುವದಿಲ್ಲ. ಅಂಥ ಅರಣ್ಯ ಸಹ ನಮ್ಮಲ್ಲಿಲ್ಲ. ಇದು ಎಲ್ಲೋ ಬೇರೆ ಕಡೆಯಿಂದ ಕಾಲುವೆಯಲ್ಲಿ ಬಿದ್ದು, ಮೇಲೇರಲು ಆಗದೆ ಸುಮಾರು ಕೀ.ಮೀಟರ್ನಿಂದ ಹರಿದುಕೊಂಡು, ಈಜುತ್ತಾ ಬಂದಿದೆ. ಬಹಳ ಸೂಕ್ಷ್ಮ ಪ್ರಾಣಿ ಇದಾಗಿದ್ದರಿಂದ ಜನರ ಗದ್ದಲಕ್ಕೆ ಗಾಬರಿಗೊಂಡಿದ್ದು, ಹೃದಯಾಘಾತವಾಗಿ ಮೃತಪಟ್ಟಿದೆ. ದೇಹವನ್ನು ಅರಣ್ಯ ಇಲಾಖೆ ನಿಯಮದಂತೆ ದಹನ ಮಾಡಲಾಗುವುದು ಎಂದು ಉಪ ಅರಣ್ಯ ವಲಯಾಕಾರಿ ಕಾಶಪ್ಪ ತಿಳಿಸಿದರು.

    ಪಶು ವೈದ್ಯಾಕಾರಿ ರಾಜು ರಾಠೋಡ್, ಸಿಬ್ಬಂದಿ ಸಿದ್ದಣ್ಣ, ದುರ್ಗಣ್ಣ, ಭೀಮರಡ್ಡಿ ಹಾಗೂ ಗ್ರಾಮಸ್ಥರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts