More

    ಹುಬ್ಬಳ್ಳಿ ಗ್ರಾಮೀಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ನಾಳೆ

    ಹುಬ್ಬಳ್ಳಿ: ಹುಬ್ಬಳ್ಳಿ ಗ್ರಾಮೀಣ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಮಾ. 8ರಂದು ವರೂರ ಗ್ರಾಮದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಧಾರವಾಡ ಜಿಲ್ಲಾ ಕಸಾಪ ಅಧ್ಯಕ್ಷ ಡಾ. ಲಿಂಗರಾಜ ಅಂಗಡಿ ತಿಳಿಸಿದರು.

    ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಹಿರಿಯ ಸಾಹಿತಿ ಪ್ರೊ. ಜಿ.ಬಿ. ವೀರಭದ್ರಯ್ಯನವರ ಅವರು ಸಮ್ಮೇಳನ ಸರ್ವಾಧ್ಯಕ್ಷರಾಗಿದ್ದಾರೆ. ಗ್ರಾಮದ ದಿ. ದೇವಕ್ಕ ದ್ಯಾಮಪ್ಪ ಬಡಿಗೇರ ಸರ್ಕಾರಿ ಹಿ.ಪ್ರಾ. ಶಾಲೆ ಆವರಣದಲ್ಲಿ ನಡೆಯಲಿದೆ. ಬೆ. 9ಕ್ಕೆ ಜಗ್ಗಲಗಿ, ಡೊಳ್ಳು, ಕರಡಿ ಮಜಲು, ಅಲಂಕೃತ ಚಕ್ಕಡಿ, ಬುತ್ತಿಗಂಟು ಹೊತ್ತ ಗ್ರಾಮೀಣ ಮಹಿಳೆಯರು, ಶಾಲಾ ಮಕ್ಕಳ ಜಾನಪದ ನಡಿಗೆಯೊಂದಿಗೆ ಸರ್ವಾಧ್ಯಕ್ಷರ ಮೆರವಣಿಗೆ ನಡೆಸಲಾಗುವುದು ಎಂದರು.

    ಬೆ. 11ಕ್ಕೆ ಡಾ. ದ.ರಾ. ಬೇಂದ್ರೆ ರಾಷ್ಟ್ರೀಯ ಟ್ರಸ್ಟ್​ನ ಅಧ್ಯಕ್ಷ ಡಾ. ಡಿ.ಎಂ. ಹಿರೇಮಠ ಉದ್ಘಾಟಿಸುವರು. ಶಾಸಕಿ ಕುಸುಮಾ ಶಿವಳ್ಳಿ ಅಧ್ಯಕ್ಷತೆ ವಹಿಸುವರು. ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ನಿಮಿತ್ತ ಅಂದು ಮ. 2ಕ್ಕೆ ಗ್ರಾಮೀಣ ಮಹಿಳೆ-ಬದುಕು ಬವಣೆ ಕುರಿತು ವಿಚಾರ ಗೋಷ್ಠಿ ಏರ್ಪಡಿಸಲಾಗಿದೆ. ಮ. 3.30ಕ್ಕೆ ಕವಿ ಪುಟ್ಟು ಕುಲಕರ್ಣಿ ಅಧ್ಯಕ್ಷತೆಯಲ್ಲಿ ಕವಿ ಗೋಷ್ಠಿ ನಡೆಯಲಿದೆ. 14 ಜನ ಕವಿಗಳು ಕವನ ವಾಚನ ಮಾಡಲಿದ್ದಾರೆ. ಕವಿ ಮಹಾಂತಪ್ಪ ನಂದೂರ ಆಶಯ ಭಾಷಣ ಮಾಡುವರು ಎಂದು ತಿಳಿಸಿದರು. ಸಂ. 4.30ಕ್ಕೆ ಸರ್ವಾಧ್ಯಕ್ಷರೊಂದಿಗೆ ಸಂವಾದ, 5ಕ್ಕೆ ಸಮಾರೋಪ ಸಮಾರಂಭ ಏರ್ಪಡಿಸಲಾಗಿದೆ. ಸಾಹಿತಿ ಪ್ರೊ. ಎಸ್.ವಿ. ಪಟ್ಟಣಶೆಟ್ಟಿ ಅಧ್ಯಕ್ಷತೆ ವಹಿಸುವರು. ಜಾನಪದ ತಜ್ಞ ಡಾ. ಶ್ರೀಶೈಲ ಹುದ್ದಾರ ಸಮಾರೋಪ ಭಾಷಣ ಮಾಡುವರು. ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ 27 ಜನರನ್ನು ಸನ್ಮಾನಿಸಲಾಗುವುದು. ಸಂ. 6.30ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದೆ. ಹುಬ್ಬಳ್ಳಿಯ ಜಿ.ವಿ. ಕಲಾ ಬಳಗದವರು ಹೆಂಡತಿಯೇ ನಿನಗೆ ನಮೋ ನಮಃ ಹಾಸ್ಯ ನಾಟಕ ಪ್ರಸ್ತುತ ಪಡಿಸುವರು ಎಂದು ಹೇಳಿದರು.

    ಸುದ್ದಿಗೋಷ್ಠಿಯಲ್ಲಿ ಹುಬ್ಬಳ್ಳಿ ಗ್ರಾಮೀಣ ಕಸಾಪ ಅಧ್ಯಕ್ಷ ಡಾ. ರಾಮು ಮೂಲಗಿ, ಗೌರವ ಕಾರ್ಯದರ್ಶಿ ಮಹೇಶ ಪತ್ತಾರ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts