More

    ಹುತಾತ್ಮರ ಸ್ಮಾರಕಕ್ಕೆ ಪೊಲೀಸರಿಂದ ಪುಷ್ಪನಮನ

    ಹನೂರು: ಕಾಡುಗಳ್ಳ ವೀರಪ್ಪನ್ ವಿರುದ್ಧದ ಕಾರ್ಯಾಚರಣೆಯಲ್ಲಿ ಧೈರ್ಯ ಸಾಹಸ ಮೆರೆದು ವೀರ ಮರಣ ಹೊಂದಿದ್ದ ಹುತಾತ್ಮ ಪೊಲೀಸ್ ಅಧಿಕಾರಿಗಳು ಹಾಗೂ ಸಿಬ್ಬಂದಿ ಸ್ಮರಣಾರ್ಥವಾಗಿ ಮಿಣ್ಯಂ ಸಮೀಪದ ಬೂದಿಕೆರೆ ರಸ್ತೆ ತಿರುವಿನಲ್ಲಿ ನಿರ್ಮಿಸಿರುವ ಸ್ಮಾರಕಕ್ಕೆ ಭಾನುವಾರ ಪೊಲೀಸರು ಪುಷ್ಪನಮನ ಹಾಗೂ ಗೌರವ ವಂದನೆ ಸಲ್ಲಿಸಿದರು.

    ಡಿವೈಎಸ್ಪಿ ನಾಗರಾಜು ಮಾತನಾಡಿ, ಕುಖ್ಯಾತ ವೀರಪ್ಪನ್‌ನನ್ನು ಸೆರೆ ಹಿಡಿಯುವ ಸಲುವಾಗಿ ದಕ್ಷ ಪೊಲೀಸ್ ಅಧಿಕಾರಿಯಾಗಿದ್ದ ಎಸ್ಪಿ ಹರಿಕೃಷ್ಣ ಹಾಗೂ ಇವರ ತಂಡವು ವೀರಪ್ಪನ್ ವಿರುದ್ಧ ವೀರಾವೇಶದಿಂದ ಹೋರಾಡಿದರೂ ಒಳಸಂಚಿನ ಗುಂಡಿನ ದಾಳಿಗೆ ಬಲಿಯಾದುದು ದುರದೃಷ್ಟಕರ. ಇವರ ಧೈರ್ಯ, ಸಾಹಸ ಮೆಚ್ಚುವಂತದಾಗಿದ್ದು, ಇತರರಿಗೆ ಮಾದರಿಯಾಗಿದ್ದಾರೆ. ಈ ದೆಸೆಯಲ್ಲಿ ಇವರ ನೆನಪಾರ್ಥವಾಗಿ ಸ್ಮಾರಕವನ್ನು ನಿರ್ಮಿಸಲಾಗಿದೆ. ಹಾಗಾಗಿ ಪ್ರತಿಯೊಬ್ಬರೂ ಇವರ ಕಾರ್ಯವೈಖರಿಯನ್ನು ಮನದಟ್ಟು ಮಾಡಿಕೊಂಡು ದಕ್ಷತೆಯಿಂದ ಕಾರ್ಯನಿರ್ವಹಿಸುವುದರ ಮೂಲಕ ಸಾಧನೆ ಮಾಡಬೇಕು ಎಂದು ತಿಳಿಸಿದರು.

    ನಿವೃತ್ತ ಡಿವೈಎಸ್ಪಿ ರಂಗಸ್ವಾಮಿ, ಇನ್ಸ್‌ಪೆಕ್ಟರ್ ಸಂತೋಷ್ ಕಶ್ಯಪ್, ಪಿಎಸೈ ಮಂಜುನಾಥ್ ಪ್ರಸಾದ್, ಸಿಬ್ಬಂದಿ ಕೆ.ಮಾದೇಶ್, ಲಿಂಗರಾಜು, ಸೈಯದ್ ಮುಷರಫ್, ಮಂಜು, ಮಹದೇವಸ್ವಾಮಿ, ರಮೇಶ್, ದುಂಡಪ್ಪ, ಮಹೇಂದ್ರ, ರವಿಪ್ರಸಾದ್, ಪರಮೇಶ್, ನಾಗರಾಜು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts