More

    ಹಾಲು ಡೇರಿಗೆ ವೆಬ್ ಆಪ್ ರೂಪಿಸಿದ ಯುವಕ


    ಕಾರವಾರ: ವರ್ಕ್ ಫ್ರಾಂ ಹೋಂನ ಬಿಡುವಿನ ಸಮಯ ಬಳಸಿಕೊಂಡು ಯುವ ಸಾಫ್ಟ್​ವೇರ್ ಇಂಜಿನಿಯರ್ ಹೈನುಗಾರರಿಗೆ ಅನುಕೂಲವಾಗುವ ಆಪ್ ಒಂದನ್ನು ತಯಾರಿಸಿದ್ದಾರೆ.

    ಶಿರಸಿ ತಾಲೂಕಿನ ಸೋಂದಾ ಸ್ವರ್ಣವಲ್ಲೀಯ ಚಂದನ ಶಾಸ್ತ್ರಿ ಎಂಬ ಇಂಜಿನಿಯರ್ ಹಾಲಿನ ಡೇರಿ ದಾಖಲೆಗಳನ್ನು ನಮೂದು ಮಾಡಲು ಅನುಕೂಲವಾಗುವ ವೆಬ್ ಆಪ್ ತಯಾರಿಸಿದ್ದಾರೆ. ಇದರಿಂದ ಹಾಲು ಉತ್ಪಾದಕ ಸಹಕಾರ ಸಂಘಗಳನ್ನು ಕಾಗದ ರಹಿತವಾಗಿ ಡಿಜಿಟಲ್ ಡೇರಿಯಾಗಿ ಮಾರ್ಪಡಿಸಬಹುದಾಗಿದೆ ಎಂಬುದು ಚಂದನ್ ಅವರ ಅಭಿಪ್ರಾಯ.

    ಏನಿದರ ವಿಶೇಷ..?: ಕೆಎಂಎಫ್ ಡೇರಿಗಳಲ್ಲಿ ಪ್ರತಿ ದಿನ ಹಾಲು ಕೊಡಲು ಬರುವ ಸದಸ್ಯರ ವಿವರಗಳನ್ನು ರಜಿಸ್ಟರ್ ಪುಸ್ತಕದಲ್ಲಿ ದಾಖಲಿಸಬೇಕು. ಅಲ್ಲದೆ, ಆ ವಿವರವನ್ನು ಸದಸ್ಯರ ಖಾತೆ ಪುಸ್ತಕದ ಮೇಲೂ ದಾಖಲಿಸಿಕೊಡಬೇಕು. ಪ್ರತಿ ದಿನ ಅರ್ಧ ಅಥವಾ ಒಂದು ಗಂಟೆಯಲ್ಲಿ ಹಾಲು ಸಂಗ್ರಹಿಸಿ ಹತ್ತಾರು ಜನರ ವಿವರವನ್ನು ಸಮರ್ಪಕವಾಗಿ ದಾಖಲಿಸಬೇಕಿದೆ. ಈ ಸಂದರ್ಭದಲ್ಲಿ ಲೆಕ್ಕ ಬರೆಯುವಾಗ ತಪ್ಪಾಗುತ್ತದೆ. ಮಾಸಾಂತ್ಯಕ್ಕೆ ಲೆಕ್ಕಾಚಾರ ಮಾಡುವಾಗ ಗೊಂದಲ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಸಮಸ್ಯೆ ತಪ್ಪಿಸಲು ಚಂದನ್ ವೆಬ್ ಆಪ್ ಸಿದ್ಧಪಡಿಸಿದ್ದಾರೆ. ಇದರಲ್ಲಿ ಕನ್ನಡದಲ್ಲಿಯೇ ವಿವರಗಳು ಬರಲಿವೆ. ಒಟ್ಟು 6 ತಿಂಗಳ ಡೇಟಾ ಸಂಗ್ರಹಿಸಿಟ್ಟುಕೊಳ್ಳಬಹುದು.

    ಡೇರಿಯ ಮೇಲ್ವಿಚಾರಕ ಇದರಲ್ಲಿ ಯೂಸರ್ ನೇಮ್ ಪಾಸ್​ವರ್ಡ್ ಹಾಕಿ ಲಾಗಿನ್ ಆಗಬೇಕು. ನಂತರ ಪ್ರತಿ ಸದಸ್ಯರ ಕಾರ್ಡ್ ಸಂಖ್ಯೆ ಹಾಕಿ ಅವರು ಪ್ರತಿ ದಿನ ನೀಡುವ ಹಾಲಿನ ಪ್ರಮಾಣದ ವಿವರ ಅಪ್​ಡೇಟ್ ಮಾಡಿದರಾಯಿತು. ಡೇರಿಗೆ ಹಾಲು ಹಾಕುವ ಸದಸ್ಯರು ಆಪ್ ತೆರೆದು ತಮ್ಮ ಕಾರ್ಡ್ ಸಂಖ್ಯೆ ಹಾಕಿದರೆ ಪ್ರತಿ ದಿನದ ವಿವರ ಲಭ್ಯವಾಗುತ್ತದೆ. ಪಾರದರ್ಶಕ ಹಾಗೂ ಸುಲಭವಾಗಿ ಡೇರಿ ಲೆಕ್ಕಪತ್ರಗಳನ್ನು ಅಭಿವೃದ್ಧಿಪಡಿಸಬಹುದಾಗಿದೆ.

    ಸದ್ಯ ಇದನ್ನು ಚಂದನ್ ತಮ್ಮ ಸ್ವರ್ಣವಲ್ಲೀ ಡೇರಿಗೆ ಮಾತ್ರ ಅನ್ವಯಿಸಿದ್ದಾರೆ. ಇತರ ಡೇರಿಯ ಸದಸ್ಯರೂ ಮುಂದೆ ಬಂದರೆ ಸಲಹೆ ನೀಡಲು ಸಿದ್ಧರಿದ್ದಾರೆ. ಕೆಎಂಎಫ್ ಇದನ್ನು ಪರಿಗಣಿಸಿ ಎಲ್ಲ ಡೇರಿಗಳಿಗೆ ಒದಗಿಸಬೇಕು ಎಂಬುದು ಹಾಲು ಉತ್ಪಾದಕರ ಆಗ್ರಹ.

    ಕೆಲ ದಿನದಿಂದ ವರ್ಕ್ ಫ್ರಂ ಹೋಂ ಮಾಡುತ್ತಿದ್ದೆ. ಇಲ್ಲಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಏನಾದರೂ ಕಾರ್ಯ ಮಾಡಬೇಕು ಎಂಬ ಇಚ್ಛೆಯಿಂದ ಇದನ್ನು ಸಿದ್ಧ ಮಾಡಿದ್ದೇನೆ. ಇದು ಪ್ರಾಥಮಿಕ ಹೆಜ್ಜೆಯಾಗಿದ್ದು, ಅಗತ್ಯಕ್ಕೆ ತಕ್ಕಂತೆ ಕೆಲ ಪಾರ್ವಟು ಮಾಡಿಕೊಳ್ಳಬಹುದಾಗಿದೆ.
    | ಚಂದನ ಶಾಸ್ತ್ರಿ ಸ್ವರ್ಣವಲ್ಲೀ

    ಸೋಂದಾ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts