More

    ಹಾನಿ ತಪ್ಪಿಸುವುದೇ ಬೆಳೆಗಾರರಿಗೆ ಸವಾಲು

    ಐಗಳಿ: ಹವಾಮಾನ ಬದಲಾವಣೆ ಹಾಗೂ ದ್ರಾಕ್ಷಿಗೆ ಯೋಗ್ಯ ಬೆಲೆ ಸಿಗದೆ ರೈತರಿಗೆ ಪ್ರತಿ ವರ್ಷವು ಹಾನಿಯಾಗುತ್ತಿದ್ದು, ದ್ರಾಕ್ಷಿ ಬೆಳೆಗಾರರು ಕೂಡಿಕೊಂಡು ಪ್ರಾರಂಭಿಸಲಾದ ದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಬೇರೆ ಉತ್ಪನ್ನ ಸಂಸ್ಕರಣೆ ಮಾಡುವ ಅನಿವಾರ್ಯತೆ ಎದುರಾಗಿದೆ ಎಂದು ದ್ರಾಕ್ಷಿ ಸಂಸ್ಕರಣಾ ಘಟಕದ ಅಧ್ಯಕ್ಷ ಶಹಜಹಾನ ಡೊಂಗರಗಾಂವ ಹೇಳಿದರು.

    ಇಲ್ಲಿನ ಕಲ್ಯಾಣ ನಗರದ ದ್ರಾಕ್ಷಿ ಸಂಸ್ಕರಣಾ ಘಟಕದಲ್ಲಿ ಭಾನುವಾರ ದ್ರಾಕ್ಷಿ ಬೆಳೆಗಾರರಿಗೆ ಆಯೋಜಿಸಿದ್ದ ಗಿಡ ಚಾಟ್ನಿ ಮಾಹಿತಿ ಮತ್ತು ವಾರ್ಷಿಕ ಸರ್ವ ಸಾಧಾರಣಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಬೆಳೆಗಾರರು ಸಾಕಷ್ಟು ಮುಂಜಾಗ್ರತೆ ವಹಿಸಿದರೂ ಪ್ರಕೃತಿ ವಿಕೋಪದಿಂದಾಗಿ ದ್ರಾಕ್ಷಿ ಬೆಳೆ ಹಾನಿಯಾಗುತ್ತಿದೆ ಎಂದರು. ರೈತ ಮುಖಂಡ ಸಿ.ಎಸ್.ನೇಮಗೌಡ, ಎ.ಎಸ್.ಪಾಟೀಲ, ಆರ್.ಆರ್.ತೆಲಸಂಗ, ನೂರ್‌ಅಹಮ್ಮದ್ ಡೊಂಗರಗಾಂವ ಮಾತನಾಡಿ, ಅಕಾಲಿಕ ಮಳೆಯಿಂದಾದ ನಷ್ಟಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ವಿಮೆ ಕಂಪನಿ ಹಾಗೂ ಸರ್ಕಾರಕ್ಕೆ ಒತ್ತಾಯಿಸಿದರು. ಘಟಕ ಮಾರ್ಗದರ್ಶಕ ಎಂ.ಎಲ್.ಹಾಲಳ್ಳಿ ವಾರ್ಷಿಕ ವರದಿ ವಾಚಿಸಿದರು. ರೈತ ಮುಖಂಡರಾದ ಪ್ರಕಾಶ ಪಾಟೀಲ, ಮೈನುದ್ದೀನ್ ಡೊಂಗರಗಾಂವ, ಮಲ್ಲಿಕಾರ್ಜುನ ಸಿಂಧೂರ, ಮುಬಾರಕ್ ಮುಜಾವರ, ಎನ್.ಎಂ.ಸಿಂಧೂರ, ಶ್ರೀಮಂತ ಮುಧೋಳ, ಕಾಶೀರಾಮ ಕುಂಬಾರಕರ, ಅಪ್ಪಾಸಾಬ ಮಾಕಾಣಿ, ಈರಗೌಡ ಪಾಟೀಲ, ಗುರುಪಾದ ಚೌಗಲಾ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts