More

    ಹಲವು ಸಮಸ್ಯೆಗಳಿಗೆ ಸಚಿವರಿಂದ ಸ್ಥಳದಲ್ಲೇ ಪರಿಹಾರ

    ಔರಾದ್: ತಾಲೂಕು ಪಂಚಾಯಿತಿ ಕಚೇರಿಯಲ್ಲಿ ಸೋಮವಾರ ಸ್ವಕ್ಷೇತ್ರದ ಜನರ ಸಮಸ್ಯೆ ಆಲಿಸಿದ ಪಶು ಸಂಗೋಪನೆ ಸಚಿವ ಪ್ರಭು ಚವ್ಹಾಣ್, ಹಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದರು.

    ಚಿಂತಾಕಿ, ನಾಗನಪಲ್ಲಿ, ಬಾದಲಗಾಂವ್, ಸುಂದಾಳ, ವಡಗಾಂವ, ಜೋಜನಾ, ಉಜನಿ, ಬರ್ದಾಪುರ, ಠಾಣಾಕುಶನೂರ, ಕೌಠಾ(ಕೆ), ಸೋರಳ್ಳಿ, ಲಾಧಾ, ಖೇಡ, ಮುರ್ಕಿ, ಬೆಂಬ್ರಾ, ಜಮಗಿ, ಬೋರ್ಗಿ(ಜೆ), ಸಂತಪುರ, ಚಿಕ್ಲಿ(ಜೆ), ಕೊಳ್ಳೂರ್, ಹೆಡಗಾಪುರ ಇತರ ಗ್ರಾಮಗಳಿಂದ ಆಗಮಿಸಿದ್ದ ಜನತೆ ತಮ್ಮೂರಿನ ಸಮಸ್ಯೆಗಳ ಬಗ್ಗೆ ಸಚಿವರ ಗಮನಕ್ಕೆ ತಂದರು. ಎಲ್ಲರ ಅಹವಾಲು ಆಲಿಸಿದ ಚವ್ಹಾಣ್, ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚಿಸುವ ಮೂಲಕ ಕೆಲವುಗಳಿಗೆ ಪರಿಹಾರ ಒದಗಿಸಿಕೊಟ್ಟರು.

    ಸಭೆಯಲ್ಲಿ ಕುಡಿಯುವ ನೀರಿನ ಕುರಿತು ಸುದೀರ್ಘ ಚರ್ಚೆ ನಡೆಯಿತು. ಸಾರ್ವಜನಿಕರು ಹಾಗೂ ಗ್ರಾಪಂ ಪಿಡಿಒ ಅವರಿಂದ ಯಾವ ಊರಲ್ಲಿ ಕುಡಿಯುವ ನೀರಿನ ತೀವ್ರ ಸಮಸ್ಯೆಯಿದೆ ಎಂಬ ಬಗ್ಗೆ ಸಚಿವರು ಮಾಹಿತಿ ಪಡೆದರು. ತೀವ್ರ ಸಮಸ್ಯೆ ಇರುವ ಕಡೆ ಖಾಸಗಿ ಮೂಲಗಳಿಂದ ನೀರು ಪಡೆದು ತುರ್ತಾಗಿ ಪೂರೈಸಬೇಕು. ಮೋಟಾರ್ ಕೆಟ್ಟು ಹೋಗುವುದು, ವಿದ್ಯುತ್ ತಂತಿಯಂಥ ಸಣ್ಣಪುಟ್ಟ ಸಮಸ್ಯೆಗಳನ್ನು ತ್ವರಿತ ಸರಿಪಡಿಸಿ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

    ಬಾದಲಗಾಂವ್ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ಎದುರಾಗುತ್ತಿದೆ ಎಂದು ಗ್ರಾಪಂ ಸದಸ್ಯ ಪ್ರವೀಣ ತಿಳಿಸಿದಾಗ, ಗ್ರಾಮದಲ್ಲಿ ಬೋರ್ವೆಲ್ ಕೊರೆಸಿ ತಿಂಗಳಾದರೂ ಮೋಟಾರ್ ಅಳವಡಿಸದ ಪಿಡಿಒ ವಿರುದ್ಧ ಬೇಸರ ವ್ಯಕ್ತಪಡಿಸಿದರು. ತಕ್ಷಣ ಮೋಟಾರ್ ಅಳವಡಿಸಬೇಕು ಎಂದು ನಿರ್ದೇಶನ ನೀಡಿದರು.

    ತಹಸೀಲ್ದಾರ್ ಅರುಣಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ್, ಕಮಲನಗರ ತಹಸೀಲ್ದಾರ್ ರಮೇಶ ಪೆದ್ದೆ, ತಾಪಂ ಇಒ ಸೈಯದ್ ಫೈಜಲ್ ಸೇರಿ ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

    ಮದನೂರು ಗ್ರಾಮಕ್ಕೆ ಬಸ್: ಮದನೂರು ಗ್ರಾಮಕ್ಕೆ ಒಂದು ವರ್ಷದಿಂದ ಬಸ್ ಬಾರದ್ದರಿಂದ ಶಾಲಾ-ಕಾಲೇಜುಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರಿಗೆ ಸಾಕಷ್ಟು ಸಮಸ್ಯೆಯಾಗುತ್ತಿದೆ ಎಂದು ಗ್ರಾಮಸ್ಥರು ಸಚಿವ ಚವ್ಹಾಣ್ ಗಮನಕ್ಕೆ ತಂದರು. ಕಲ್ಯಾಣ ಕರ್ನಾಟಕ ಸಾರಿಗೆ ನಿಗಮದ ಅಧಿಕಾರಿಯನ್ನು ಸಂಪರ್ಕಿಸಿದ ಸಚಿವರು, ತಕ್ಷಣವೇ ಮದನೂರಗೆ ಬಸ್ ಓಡಿಸಬೇಕು ಎಂದು ಸೂಚಿಸಿದರಲ್ಲದೆ ಸಭೆ ನಂತರ ಔರಾದ್​ನಿಂ​ದ ಮದನೂರ ಬಸ್​ಗೆ ಹಸಿರು ನಿಶಾನೆ ತೋರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts