More

    ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಸೇವೆ ಅನನ್ಯ


    ಚಿತ್ರದುರ್ಗ: ಮಹಿಳೆಯರು ಇಂದು ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ ಎಂದು ಶ್ರೀ ಮುರುಘಾಮಠದ ಆಡಳಿತಾಧಿಕಾರಿ,ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶೆ ಬಿ.ಎಸ್.ರೇಖಾ ಹೇಳಿದರು.
    ಶರಣ ಸಂಸ್ಕೃತಿ ಉತ್ಸವದ ಅಂಗವಾಗಿ ಸೋಮವಾರ ಮಹಿಳಾ ಸಮಾವೇಶದಲ್ಲಿ ಮಾತನಾಡಿದ ಅವರು, 12ನೇ ಶತಮಾನದಲ್ಲಿ ಮಹಿಳೆಯರಿಗೆ ಹೆಚ್ಚಿನ ಪ್ರಾಮುಖ್ಯತೆ ದೊರೆಯಿತು. ಕುಟುಂಬದ ಜವಾಬ್ದಾರಿ ಮಹಿಳೆಯರ ಮೇಲಿದೆ ಎಂದು ತಿಳಿಸಿದರು.
    ಶ್ರೀ ಮಠದ ಸಿಬ್ಬಂದಿ ವೇತನ ಹೆಚ್ಚಿಸುವ ಜವಾಬ್ದಾರಿ ನಿಭಾಯಿಸಲಾಗಿದೆ. ಮಠದ ಸಿಇಒ ಎಂ.ಭರತ್‌ಕುಮಾರ್ ಹಾಗೂ ಎಚ್‌ಆರ್ ಅಧಿಕಾರಿ ವಿಜಯ ಕೆ.ಮಠ ಅವರು ಈ ಯೋಜನೆಗೆ ಸಹಕಾರ ನೀಡಿದ್ದಾರೆ. ಸಾರ್ವಜನಿಕರ ಹಣ ಸಾರ್ವಜನಿಕರಿಗೆ ಮೀಸಲು. ಶರಣ ಸಂಸ್ಕೃತಿ ಉಳಿಸಬೇಕಿದೆ. ಸತ್ಯ ನಿಷ್ಠೆಯಿಂದ ಕೆಲಸ ಮಾಡುವವರು ಬೇಕಿದೆ. ಆಡಳಿತಾಧಿಕಾರಿಯಾಗಿ ಉತ್ತಮ ಸೇವೆ ಮಾಡುತ್ತೇನೆ ಎಂದರು.
    ಲೈಂಗಿಕ ಅಲ್ಪಸಂಖ್ಯಾತರ ಪರ ಹಕ್ಕುಗಳ ಹೋರಾಟಗಾರ್ತಿ ಡಾ.ಅಕ್ಕೈಪದ್ಮಶಾಲಿ ಅವರು ಮಾತನಾಡಿ, ಲಿಂಗತ್ವದ ಆಧಾರದ ಮೇಲೆ ಸಮಾಜದಲ್ಲಿ ಶೋಷಣೆ ಅನುಭವಿಸುತ್ತಿರುವ ನಮ್ಮಂಥವರನ್ನು ನ್ಯಾಯಾಧೀಶೆ ರೇಖಾ ಅವರು ಗುರುತಿಸಿ ಗೌರವಿಸಿರುವುದು ಹರ್ಷ ತರಿಸಿದೆ. ಸಾಂಸ್ಕೃತಿಕ ಚೌಕಟ್ಟಿನಿಂದ ನಮ್ಮನ್ನು ದೂರವಿಡಲಾಗಿದೆ. ನಮ್ಮಗಳದು ನಿಷ್ಕಲ್ಮಷ ಮನಸ್ಸು. ಮಹಿಳೆಯರನ್ನು ಶೋಷಿಸುವಂಥವರಿಗೆ ಧಿಕ್ಕಾರ ಹೇಳ ಬೇಕಿದೆ. ಸಮಾಜದಲ್ಲಿ ಶೋಷಿತರ ಜೀವನದಲ್ಲಿ ಸುಧಾರಣೆ ತರಲು ಶ್ರಮಿಸುತ್ತೇವೆ ಎಂದರು.
    ‘ವಚನಕಾರ್ತಿಯರ ಅರಿವಿನ ನೆಲೆಗಳು’ವಿಷಯಾವಲೋಕನ ಕುರಿತು ಚಿಂತಕಿ ಡಾ.ಶುಭಾಮರವಂತೆ ಮಾತನಾಡಿದರು.
    ವೈದ್ಯೆ ಡಾ.ಜಿ.ಬಿ.ಶಿಲ್ಪಾ, ಅ.ಭಾ.ವಿ.ಮ.ಉದ್ಯಮಿಗಳ ಘಟಕದ ರಾಜ್ಯಾಧ್ಯಕ್ಷೆ ಕೆ.ಸಿ.ವೀಣಾಸುರೇಶ್‌ಬಾಬು ಮಾತನಾಡಿದರು.
    ಮಾಜಿ ಸಚಿವ ಎಚ್.ಆಂಜನೇಯ, ಉತ್ಸವ ಸಮಿತಿ ಗೌರವಾಧ್ಯಕ್ಷರಾದ ಅಥಣಿ ಗಚ್ಚಿನಮಠದ ಶ್ರೀ ಶಿವಬಸವ ಸ್ವಾಮೀಜಿ, ಕಾರ್ಯಾಧ್ಯಕ್ಷ ಕೆ.ಸಿ.ನಾಗರಾಜ್, ಉಸ್ತುವಾರಿ ಶ್ರೀ ಬಸವಪ್ರಭುಸ್ವಾಮೀಜಿ, ಬಸವತತ್ತ್ವಪ್ರಸಾರಕಿರಾದ ಬೀದರ್‌ನ ಶರಣೆ ಸತ್ಯಕ್ಕ, ಎಸ್‌ಜೆಎಂ ವಿದ್ಯಾಪೀಠದ ಸಿಇಒ ಎಂ.ಭರತ್‌ಕುಮಾರ್ ಇತರರು ಇದ್ದರು.
    ಸಮಾಜ ಸೇವಕಿ ಕೆ.ಅರ್ಪಿತಾ ಹಾಗೂ ಸಿ.ಪಿ.ಗಾನಶ್ರೀ ಅವರನ್ನು ಸನ್ಮಾನಿಸಲಾಯಿತು.ಬಾಪೂಜಿ ವಿದ್ಯಾಸಂಸ್ಥೆ,ಎಸ್‌ಜೆಎಂ ನರ್ಸಿಂಗ್ ಕಾಲೇಜು,ದೊಡ್ಡಸಿದ್ದವ್ವನಹಳ್ಳಿ ಜ್ಞಾನಪೂರ್ಣ ಸಂಸ್ಥೆ ಹಾಗೂ ಎಸ್‌ಜೆಎಂ ಮಹಿಳಾ ಮಹಾವಿದ್ಯಾಲಯದ ವಿದ್ಯಾರ್ಥಿಗಳು ನೃತ್ಯಪ್ರದರ್ಶನ ನಡೆಸಿಕೊಟ್ಟರು.
    ಮಜಾಟಾಕೀಸ್ ರೆಮೋ ತಂಡದವರು ಗಾಯನ ಕಾರ‌್ಯಕ್ರಮ ನಡೆಸಿಕೊಟ್ಟರು. —–
    ಕೋಟ್
    ಬಸವಾದಿ ಶರಣರು ಸಮ ಸಮಾಜದ ಪರಿಕಲ್ಪನೆ ಕಟ್ಟಿಕೊಟ್ಟರು. ಸತಿಪತಿಯರು ಅನ್ಯೂನ್ಯವಾಗಿದ್ದರೆ ಸಂಸಾರ ಸರಿದಾರಿಯಲ್ಲಿ ಸಾ ಗುತ್ತದೆ. ಮಾಧ್ಯಮಗಳು ಜನರ ಜೀವನ ಪರಿವರ್ತನೆಗೆ ಕಾರಣವಾಗುತ್ತಿವೆ. ನ್ಯಾಯಾಲಯಗಳು ಹೆಚ್ಚಿನ ಜವಾಬ್ದಾರಿ ನಿರ್ವಹಿಸುತ್ತಿವೆ. ಮಹಿಳಾ ವಕೀಲರ ಸಹಿತ ಅನೇಕರ ಸಾಧಕಿಯರಿಂದು ಮಹಿಳಾ ಸಬಲೀಕರಣಕ್ಕೆ ಶ್ರಮಿಸುತ್ತಿದ್ದಾರೆ.
    ಎಚ್.ಆಂಜನೇಯ,ಮಾಜಿ ಸಚಿವ



    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts