More

    ಹನಿ ನೀರನ್ನೂ ಸದ್ಬಳಕೆ ಮಾಡಿಕೊಳ್ಳಬೇಕಿದೆ

    ವಿಜಯವಾಣಿ ಸುದ್ದಿಜಾಲ ಹಳಿಯಾಳ: ನೀರಿನ ಒಂದು ಹನಿಯಿಂದ ಕ್ಯೂಸೆಕ್ ಮಟ್ಟದ ತನಕ ನೀರು ಸದ್ಬಳಕೆ ಮಾಡದಿದ್ದರೆ ಭವಿಷ್ಯದಲ್ಲಿ ನೀರಿನ ಅವಶ್ಯಕತೆ ಪೂರೈಸುವುದು ಕಷ್ಟಸಾಧ್ಯವಾಗುತ್ತದೆ. ಅದಕ್ಕಾಗಿ ನೀರಿನ ಬಳಕೆಯಲ್ಲಿ ನಾವು ತೀರಾ ಕಂಜೂಸತನ ಮಾಡಬೇಕು ಎಂದು ಧಾರವಾಡದ ವಾಲ್ಮಿ ಸಂಸ್ಥೆಯ ನಿರ್ದೇಶಕ ಡಾ.ರಾಜೇಂದ್ರ ಪೊದ್ದಾರ್ ಹೇಳಿದರು.

    ಕರ್ನಾಟಕ ಲಾ ಸೊಸೈಟಿಯ ವಿಶ್ವನಾಥರಾವ್ ದೇಶಪಾಂಡೆ ತಾಂತ್ರಿಕ ಮಹಾವಿದ್ಯಾಲಯ ಹಳಿಯಾಳ ಹಾಗೂ ಕರ್ನಾಟಕ ಸರ್ಕಾರದ ಜಲಸಂಪನ್ಮೂಲ ಇಲಾಖೆಯ ಜಲ ಮತ್ತು ನೆಲ ನಿರ್ವಹಣಾ ಸಂಸ್ಥೆ ವತಿಯಿಂದ ನೀರಾವರಿ ನಿರ್ವಹಣೆಯ ಕುರಿತಾಗಿ ಸಿವಿಲ್ ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಒಂದು ದಿನದ ತರಬೇತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

    ವಾಲ್ಮಿ ಸಂಸ್ಥೆಯು ಜಲ ನಿರ್ವಹಣಾ ಕ್ಷೇತ್ರದಲ್ಲಿ ಕೆಲಸ ಮಾಡುವವರಿಗೆ ಅಗತ್ಯ ತರಬೇತಿ ನೀಡುತ್ತದೆ ಎಂದರು.

    ವಾಲ್ಮಿ ಸಂಸ್ಥೆಯ ಬಿ.ವೈ. ಭಂಡಿವಡ್ಡರ ಸಂಸ್ಥೆಯಲ್ಲಿ ಲಭ್ಯವಿರುವ ಸೌಲಭ್ಯ ಮತ್ತು ತರಬೇತಿ ಕುರಿತು ಮಾಹಿತಿ ನೀಡಿದರು. ಪ್ರಾಂಶುಪಾಲ ಡಾ.ವಿ.ವಿ. ಕಟ್ಟಿ ಅಧ್ಯಕ್ಷತೆ ವಹಿಸಿದ್ದರು. ಕಾರ್ಯಾಗಾರದಲ್ಲಿ ವಾಲ್ಮಿ ಸಂಸ್ಥೆಯ ಸಿಬ್ಬಂದಿ ಹವಾಮಾನ ಬದಲಾವಣೆ ಹಾಗೂ ಜಲ ನಿರ್ವಹಣೆ, ಬಿಕ್ಕಟ್ಟಿನ ಸಂದರ್ಭಗಳಲ್ಲಿ ನೀರಾವರಿ ನಿರ್ವಹಣೆ, ಮಳೆ ಕೊಯ್ಲು ನಿರ್ವಹಣೆ ಮತ್ತು ವ್ಯಕ್ತಿತ್ವ ವಿಕಸನ ಮುಂತಾದ ವಿಷಯಗಳ ಕುರಿತು ತರಬೇತಿ ಮತ್ತು ಉಪನ್ಯಾಸ ನೀಡಿದರು. ವಾಲ್ಮಿ ಸಂಸ್ಥೆಯ ಡಿ.ಎಸ್. ಮಾದ್ಲಿ, ಸುರೇಶ ಕುಲಕರ್ಣಿ, ಸಂಸ್ಥೆಯ ಸಹಾಯಕ ನಿರ್ದೇಶಕ ಎಸ್.ಡಿ. ಬಾದಾಮಿ, ಮಹಾವಿದ್ಯಾಲಯದ ಸಿವಿಲ್ ವಿಭಾಗ ಮುಖ್ಯಸ್ಥ ಸಿ.ಕೆ. ಶ್ರೀಧರ್, ಎಸ್.ಜಿ. ಹಿರೇಮಠ, ಪಾರ್ವತಿ ಓಣಿ ಉಪಸ್ಥಿತರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts