More

    ಹದಗೆಟ್ಟ ಗ್ರಾಮೀಣ ರಸ್ತೆಗಳು

    ವಾಹನ ಸಂಚಾರ ದುಸ್ತರ, ಜನಪ್ರತಿನಿಗಳಿಲ್ಲ ಜನರ ಕಾಳಜಿ

    ಅಥಣಿ ಗ್ರಾಮೀಣ: ಅಥಣಿ ತಾಲೂಕಿನ ಬಹುತೇಕ ಗ್ರಾಮೀಣ ಹಾಗೂ ಕೆಲ ಮುಖ್ಯ ರಸ್ತೆಗಳು ಹದಗೆಟ್ಟು ಹೋಗಿದ್ದು, ಈಗ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಸಂಚರಿಸುವಂತ ಸನ್ನಿವೇಶ ನಿರ್ಮಾಣವಾಗಿದೆ.


    ಜಿಪಂ ಹಾಗೂ ಲೋಕೋಪಯೋಗಿ ಇಲಾಖೆಗೊಳಪಡುವ ತಾಲೂಕಿನ ಬಡಚಿಯಿಂದ ಐಗಳಿ ಗ್ರಾಮದವರೆಗಿನ 6 ಕಿ.ಮೀ, ಯಲ್ಲಮ್ಮವಾಡಿಯಿಂದ ತುಬಚಿ ಕ್ರಾಸ್‌ವರೆಗಿನ 4 ಕಿ.ಮೀ, ಖೋತನಹಟ್ಟಿಯಿಂದ ಯಲ್ಲಮ್ಮವಾಡಿವರೆಗಿನ 8 ಕಿ.ಮೀ, ಕೊಕಟನೂರನಿಂದ ಖೋತನಹಟ್ಟಿವರೆಗಿನ 7ಕಿ.ಮೀ, ಐಗಳಿ ಕ್ರಾಸ್‌ನಿಂದ ಯಲ್ಲಮ್ಮವಾಡಿ ಕಾವರೆ ತೋಟದವರೆಗಿನ 3 ಕಿ.ಮೀ, ಕೊಕಟನೂರನಿಂದ ಯಲ್ಲಮ್ಮವಾಡಿವರೆಗಿನ 3 ಕಿ.ಮೀ, ನಂದಗಾಂವನಿಂದ ಘಟನಟ್ಟಿ ಸಂಪರ್ಕ ರಸ್ತೆವರೆಗಿನ 1ಕಿ.ಮೀ, ಸವದಿಯಿಂದ ಸವದಿ ದರ್ಗಾವರೆಗೆ 3 ಕಿ.ಮೀ, ರಡ್ಡೇರಹಟ್ಟಿಯಿಂದ ನಾಗನೂರ ಪಿ.ಕೆ ಗ್ರಾಮದವರೆಗಿನ 5 ಕಿ.ಮೀ ರಸ್ತೆಯಲ್ಲಿ ತಗ್ಗು-ಗುಂಡಿ ನಿರ್ಮಾಣಗೊಂಡಿವೆ.


    ಕಾರ್ಖಾನೆಯ ಸರಕು ಸಾಗಣೆ ಭಾರಿ ವಾಹನ ಸಾಗುವಾಗ ವಿದ್ಯಾರ್ಥಿಗಳು ಭಯದಿಂದ ಸಂಚರಿಸುವ ಪರಿಸ್ಥಿತಿ ನಿರ್ಮಾಣವಾಗಿದೆ. ಅದರಲ್ಲೂ ಕೊಕಟನೂರನಿಂದ ತುಬಚಿ ಕ್ರಾಸ್‌ವರೆಗಿನ ರಸ್ತೆಯಲ್ಲಿ ವಾಹನ ಸಂಚಾರ ಮಾಡುವುದು ಸವಾಲಿನ ಕೆಲಸವಾಗಿದೆ. ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಳ್ಳುತ್ತಿದ್ದಾರೆ. ಈಗ ತುಂತುರು ಮಳೆಯಿಂದ ಗುಂಡಿಯಲ್ಲಿ ನೀರು ತುಂಬಿಕೊಂಡು ವಾಹನ ಸಂಚಾರ ಮತ್ತಷ್ಟು ಕಗ್ಗಂಟಾಗಿದೆ.

    ತಹಸೀಲ್ದಾರ್ ಗ್ರಾಮ ವಾಸ್ತವ್ಯದಲ್ಲಿ ಡಾಂಬರೀಕರಣಗೊಳಿಸುವಂತೆ ಗ್ರಾಮಸ್ಥರು ಕೇಳಿಕೊಂಡರೂ ಜನಪ್ರತಿನಿಗಳು, ಅಕಾರಿಗಳು ರಸ್ತೆ ಸಮಸ್ಯೆಗೆ ಕಿವಿ ಕೊಡುತ್ತಿಲ್ಲ ಎಂದು ಗ್ರಾಮಸ್ಥರು ಆರೋಪಿಸುತ್ತಿದ್ದಾರೆ. ಇನ್ನಾದರೂ ಸಂಬಂಧಪಟ್ಟ ಅಕಾರಿಗಳು ಹಾಗೂ ಜನಪ್ರತಿನಿಗಳು ಗಮನಹರಿಸಿ ಗ್ರಾಮೀಣ ಸಂಪರ್ಕ ರಸ್ತೆಗಳನ್ನು ದುರಸ್ತಿಗೊಳಿಸುತ್ತಾರೆಯೇ ಎಂಬುದನ್ನು ಕಾದುನೋಡಬೇಕಿದೆ.

    ಪಿಡಬ್ಲುಡಿ ಇಲಾಖೆಗೊಳಪಡುವ ರಸ್ತೆಗಳಲ್ಲಿ ಸೃಷ್ಟಿಯಾಗಿರುವ ತಗ್ಗು-ಗುಂಡಿಗಳನ್ನು ಗರಸು ಹಾಕಿ ಮುಚ್ಚಿ ವಾಹನ ಸವಾರರ ಸಂಚಾರಕ್ಕೆ ಅನುಕೂಲ ಮಾಡಿಕೊಡಲಾಗುವುದು. ಮಳೆಗಾಲದ ನಂತರ ಡಾಂಬರೀಕರಣ ಮಾಡಲಾಗುವುದು.
    ಜಯಾನಂದ ಹಿರೇಮಠ
    ಲೋಕೋಪಯೋಗಿ ಇಲಾಖೆ ಎಇಇ ಅಥಣಿ

    ಜಿಪಂ ಇಲಾಖೆಗೆ ಒಳಪಡುವ ಹದಗೆಟ್ಟ ರಸ್ತೆಗಳನ್ನು ಡಾಂಬರೀಕರಣಗೊಳಿಸಲು ಅನುದಾನಕ್ಕಾಗಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗುವುದು. ಅನುಮೋದನೆ ಸಿಗುವವರೆಗೆ ಗರಸು ಹಾಕಲಾಗುವುದು.
    ಈರಣ್ಣ ವಾಲಿ ಜಿಪಂ ಎಇಇ ಅಥಣಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts