More

    ಹಕ್ಕುಪತ್ರ ವಿತರಣೆಗೆ ಅರಣ್ಯ ಇಲಾಖೆ ತೊಡಕು

    ಕೊಪ್ಪ: ಅರಣ್ಯ, ಸೊಪ್ಪಿನಬೆಟ್ಟ ಮುಂತಾದ ಕಾರಣಗಳಿಂದ ಹಕ್ಕುಪತ್ರ ಸಿಗುತ್ತಿಲ್ಲ ಎಂದು ಕಮ್ಮರಡಿ ಗ್ರಾಮಸ್ಥರು ಕಂದಾಯ ಉಪವಿಭಾಗಾಧಿಕಾರಿ ರಾಜೇಶ್ ಎದುರು ಅಳಲು ತೋಡಿಕೊಂಡರು. ಚಾವಲ್ಮನೆ ಗ್ರಾಮ ಪಂಚಾಯಿತಿ ಕಚೇರಿಯಲ್ಲಿ ಶನಿವಾರ ಕಂದಾಯ ಉಪವಿಭಾಗಾಧಿಕಾರಿ ಅಧ್ಯಕ್ಷತೆಯಲ್ಲಿ ಆಯೋಜಿಸಿದ್ದ ಗ್ರಾಮ ವಾಸ್ತವ್ಯ ಕಾರ್ಯಕ್ರಮದಲ್ಲಿ ಗ್ರಾಮಸ್ಥ ಸಾಯಿನಾಥ್ ಮಾತನಾಡಿ, ಸೆಕ್ಷನ್ 4, ಸೊಪ್ಪಿನಬೆಟ್ಟದ ಜತೆಗೆ ಕಸ್ತೂರಿ ರಂಗನ್ ವರದಿ ನಮ್ಮನ್ನು ಅಟ್ಟಿಸಿಕೊಂಡು ಬರುತ್ತಿದೆ ಎಂದರು.

    ಒಂದು ಮನೆಯವರಿಗೆ ಸಾಗುವಳಿ ಚೀಟಿ ಸಿಕ್ಕಿದೆ. ಪಕ್ಕದ ಮನೆಗೆ ಸಾಗುವಳಿ ಚೀಟಿ ವಿತರಿಸಲು ಸೊಪ್ಪಿನಬೆಟ್ಟ, ಸೆಕ್ಷನ್ 4 ಎಂದು ಹೇಳುತ್ತಾರೆ. ಜಮೀನಿಗಾಗಿ ಮಣ್ಣು ಅಗೆದು ಬೇಸಾಯ ಮಾಡುವಂತಿಲ್ಲ, ಅರಣ್ಯ ಇಲಾಖೆಯವರು ಅಡ್ಡಿಪಡಿಸುತ್ತಾರೆ ಎಂದು ಅಸಹಾಯಕತೆ ತೋಡಿಕೊಂಡರು. ಉಪವಿಭಾಗಾಧಿಕಾರಿ ಮಾತನಾಡಿ, ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿ ಸಭೆ ನಡೆಸಿ, ರ್ಚಚಿಸಿ ಅವರ ನಿರ್ದೇಶನದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

    ಸೀಮೆಎಣ್ಣೆ ವಿತರಣೆಯಾಗುತ್ತಿಲ್ಲ, ವಿದ್ಯುತ್ ಸಮಸ್ಯೆ ಇದ್ದು, ಮಲೆನಾಡಿನ ಜನ ಬೆಳಕಿಗಾಗಿ ತೀವ್ರ ಸಮಸ್ಯೆ ಎದುರಿಸುತ್ತಿದ್ದಾರೆ ಎಂದು ಗ್ರಾಮದ ಸುರೇಶ್ ನಾಯ್್ಕ ಹೇಳಿದರು. ಕಮ್ಮರಡಿ ಸರ್ಕಾರಿ ಆಸ್ಪತ್ರೆಯಲ್ಲಿ ರಾತ್ರಿವೇಳೆ ವೈದ್ಯರು ಇರುವುದಿಲ್ಲ. ತುರ್ತು ಸಂದರ್ಭ 30 ಕಿಲೋ ಮೀಟರ್ ದೂರದ ತಾಲೂಕು ಕೇಂದ್ರಕ್ಕೆ ಹೋಗಬೇಕಾದ ಸ್ಥಿತಿ ಇದೆ ಎಂದು ಗ್ರಾಮಸ್ಥರು ಹೇಳಿದಾಗ, ಜಿಲ್ಲಾಧಿಕಾರಿ ಜತೆ ಮಾತನಾಡುವುದಾಗಿ ಉಪವಿಭಾಗಾಧಿಕಾರಿ ರಾಜೇಶ್ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts