More

    ಸ್ವರ್ಣವಲ್ಲೀ ಮಠದಲ್ಲಿ ಶರನ್ನವರಾತ್ರಿ ಉತ್ಸವ ಶುರು

    ಶಿರಸಿ: ತಾಲೂಕಿನ ಸೋಂದಾ ಸ್ವರ್ಣವಲ್ಲೀ ಮಹಾಸಂಸ್ಥಾನದಲ್ಲಿ ಧಾರ್ವಿುಕ ಕಾರ್ಯಕ್ರಮಗಳೊಂದಿಗೆ ವಿಜೃಂಭಣೆಯಿಂದ ಶರನ್ನವರಾತ್ರಿ ಉತ್ಸವ ಶನಿವಾರದಿಂದ ಪ್ರಾರಂಭಗೊಂಡಿದೆ. ಬೆಳಗ್ಗೆ ಶ್ರೀ ಗಂಗಾಧರೇಂದ್ರ ಸರಸ್ವತೀ ಸ್ವಾಮೀಜಿ ಸಾನ್ನಿಧ್ಯದಲ್ಲಿ ಗಣಪತಿ ಪೂಜೆ, ಪುಣ್ಯಾಹ ಮಹಾಸಂಕಲ್ಪಗೈದು ಧಾರ್ವಿುಕ ಕಾರ್ಯಕ್ರಮ ಶುಭಾರಂಭಗೊಂಡಿತು. ಶ್ರೀಗಳು ಬ್ರಾಹ್ಮೀ ಮುಹೂರ್ತ ಮತ್ತು ಪ್ರದೋಷಕಾಲದಲ್ಲಿ ಶ್ರೀಚಕ್ರಪೂಜೆ, ಮಧ್ಯಾಹ್ನ ಹಾಗೂ ರಾತ್ರಿ ಶ್ರೀದೇವಿಗೆ ಮಹಾಪೂಜೆ, ಮಹಾಮಂಗಳಾರತಿ ನೆರವೇರಿಸಿ ಲೋಕಮಂಗಲವನ್ನು ಪ್ರಾರ್ಥಿಸಿದರು. ವೈದಿಕರು ಶ್ರೀಮದ್ ದೇವಿ ಭಾಗವತ, ಚಂಡೀ ಸಪ್ತಶತೀ, ಋಗ್ವೇದ, ಯಜುರ್ವೆದ, ಸಾಮವೇದ ಮತ್ತು ಅಧ್ಯಾತ್ಮ ರಾಮಾಯಣ ಪಾರಾಯಣ, ಶ್ರೀದೇವಿಗೆ ಶತರುದ್ರಾಭಿಷೇಕ, ಸೂಕ್ತಪಾಠಗಳು, ನವಗ್ರಹ ಹಾಗೂ ಬ್ರಹ್ಮಾಸ್ತ್ರ ಜಪಗಳನ್ನು ನೆರವೇರಿಸಿದರು. ಮಧ್ಯಾಹ್ನ ದೇವಿಯ ಸನ್ನಿಧಿಯಲ್ಲಿ ದೇವಿ ಭಾಗವತ ಪುರಾಣ ಪ್ರವಚನ ಜರುಗಿತು.

    ಗೋಕರ್ಣದಲ್ಲಿ ಸರಳ ನವರಾತ್ರಿ
    ಗೋಕರ್ಣ
    : ಇಲ್ಲಿನ ವಿವಿಧ ಪುರಾಣ ಪ್ರಸಿದ್ಧ ಮಂದಿರಗಳಲ್ಲಿ ನವರಾತ್ರಿ ಉತ್ಸವವನ್ನು ಶನಿವಾರ ಸರಳವಾಗಿ ಪ್ರಾರಂಭಿಸಲಾಯಿತು. ಕರೊನಾ ಹಿನ್ನೆಲೆಯಲ್ಲಿ ಈ ವರ್ಷ ಎಲ್ಲ ಮಂದಿರಗಳಲ್ಲಿ ಪಂಚಾಮೃತಾದಿ ವಿಶೇಷ ಪೂಜೆ ಮತ್ತು ವಾರ್ಷಿಕ ಹರಕೆಗಳಿಗೆ ಅವಕಾಶ ನಿರಾಕರಿಸಲಾಗಿದೆ. ಶನಿವಾರ ನವರಾತ್ರಿ ಮೊದಲ ದಿನ ಭದ್ರ ಕಾಳಿದೇವಿ ಯೋಗನಿದ್ರಾ ಮುದ್ರೆಯಲ್ಲಿ ಶೋಭಿತಳಾಗಿದ್ದಳು. ಇದೇ ರೀತಿ ಪುರಾಣ ಪ್ರಸಿದ್ಧ ತಾಮ್ರಗೌರಿ, ರುದ್ರಕಾಳಿ ಮತ್ತು ಮಹಾಲೇಶ್ವರ ಮಂದಿರದಲ್ಲಿನ ದುರ್ಗಾಪರಮೇಶ್ವರಿ ಮಂದಿರಗಳಲ್ಲಿ ದೇವಿಗೆ ಸರ್ವಾಲಂಕಾರ ಮಾಡಿ ಶಾಸ್ತ್ರೋಕ್ತ ಪೂಜೆ ಪಾರಾಯಣ ಸಲ್ಲಿಸಲಾಯಿತು. ಈ ಎಲ್ಲ ಮಂದಿರಗಳಲ್ಲಿ ನವರಾತ್ರಿ ನಿಮಿತ್ತ ವರ್ಷ ಹಮ್ಮಿಕೊಳ್ಳಲಾಗುತ್ತಿದ್ದ ಎಲ್ಲ ಬಗೆಯ ವಿಶೇಷ ಕಾರ್ಯಕ್ರಮಗಳನ್ನು ಈ ಬಾರಿ ಕೈಬಿಡಲಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts