More

    ಸ್ಮಾರ್ಟ್ ಸಿಟಿಯಲ್ಲಿ ಪಾರ್ಕಿಂಗ್‌ಗಾಗಿ ವಾಹನ ಸವಾರರ ಪರದಾಟ!

    ಬೆಳಗಾವಿ: ಕೇಂದ್ರ ಸರ್ಕಾರದ ಸ್ಮಾರ್ಟ್ ಸಿಟಿ ಯೋಜನೆ ಅಡಿ ಮುಂಚೂಣಿ ಯಲ್ಲಿರುವ ಬೆಳಗಾವಿ ನಗರ ಪಾರ್ಕಿಂಗ್‌ಸಮಸ್ಯೆಯಿಂದಾಗಿ ತತ್ತರಿಸಿದೆ! ಹೋಟೆಲ್, ಕಾಲೇಜು, ಮಾಲ್‌ಗಳ ನಿಯಮ ಉಲ್ಲಂಘನೆಯಿಂದಾಗಿ ಸಂಚಾರ ದಟ್ಟಣೆ ಹೆಚ್ಚುತ್ತಿದ್ದು, ವಾಹನಗಳ ಪಾರ್ಕಿಂಗ್‌ಗೆ ಪರದಾಡುವಂತಾಗಿದೆ.

    ಮಹಾನಗರ ಮತ್ತು ದಂಡು ಮಂಡಳಿ ವ್ಯಾಪ್ತಿಯಲ್ಲಿ 450ಕ್ಕೂ ಹೆಚ್ಚು ಹೋಟೆಲ್‌ಗಳು, 200ಕ್ಕೂ ಅಧಿಕ ಬಹುಮಹಡಿ ಕಟ್ಟಡಗಳು, 1 ಸಾವಿರಕ್ಕಿಂತ ಹೆಚ್ಚು ಒಂದರಿಂದ ಎರಡು ಮಹಡಿ ವಾಣಿಜ್ಯ ಕಟ್ಟಡಗಳಿವೆ. ಆದರೆ, ಯಾವುದೇ ಕಟ್ಟಡ ಪ್ರತ್ಯೇಕ ಪಾರ್ಕಿಂಗ್ ವ್ಯವಸ್ಥೆ ಮಾಡಿಕೊಂಡಿಲ್ಲ. ಅಲ್ಲದೆ, ಪಾರ್ಕಿಂಗಾಗಿ ಮೀಸಲಿಟ್ಟಿರುವ ತಳಮಹಡಿಗಳನ್ನು ವಾಣಿಜ್ಯ ಕೆಲಸಕ್ಕಾಗಿ ಬಳಕೆ ಮಾಡುತ್ತಿದ್ದಾರೆ. ಪರಿಣಾಮ ರಸ್ತೆ ಬದಿಯಲ್ಲೇ ಪಾರ್ಕಿಂಗ್ ಮಾಡುವುದು ಅನಿವಾರ್ಯ ಪರಿಸ್ಥಿತಿ ನಗರದಲ್ಲಿ ಉದ್ಭವಿಸಿದೆ.
    ಮಹಾನಗರ ಪಾಲಿಕೆಯಲ್ಲಿ 250 ಹೋಟೆಲ್‌ಗಳು ಮಾತ್ರ ಸಂಘಟನೆಯಲ್ಲಿ ನೋಂದಣಿಗೊಂಡಿದ್ದು, ಪಾಲಿಕೆಯಿಂದ ಟ್ರೇಡ್ ಪರವಾನಗಿ ಪಡೆದುಕೊಂಡಿವೆ.

    ಬೆರಳೆಣಿಕೆಯಷ್ಟು ಹೊರತುಪಡಿಸಿದರೆ ನೂರಾರು ಹೋಟೆಲ್‌ಗಳು ನಿಯಮ ಪಾಲಿಸುತ್ತಿಲ್ಲ. ಗ್ರಾಹಕರು ಸೇವಾ ತೆರಿಗೆ ಪಾವತಿಸುತ್ತಿದ್ದರೂ, ವಾಹನಗಳನ್ನು ನಿಯಮ ಬಾಹಿರವಾಗಿ ರಸ್ತೆಗಳಲ್ಲಿ ಪಾರ್ಕ್ ಮಾಡುವ ಪರಿಸ್ಥಿತಿ ಇದೆ. ಅದೇ ರೀತಿ ಶಾಲಾ, ಕಾಲೇಜು ವಿದ್ಯಾರ್ಥಿಗಳ ಸಾವಿರಾರು ವಾಹನಗಳು ರಸ್ತೆ ಮೇಲೆಯೇ ನಿಲ್ಲುತ್ತಿವೆ. ಕೇಂದ್ರ ಬಸ್ ನಿಲ್ದಾಣ, ಖಡೇಬಜಾರ, ರಾಮದೇವ ವೃತ್ತ ಮತ್ತಿತರ ನಗರದ ಪ್ರಮುಖ ರಸ್ತೆ, ಮಾರುಕಟ್ಟೆ ಪ್ರದೇಶಗಳಲ್ಲಿ ಫುಟ್‌ಪಾತ್ ಹುಡುಕಿದರೂ ಸಿಗುವುದಿಲ್ಲ.

    ನಗರಾಭಿವೃದ್ಧಿ ನಿಯಮದ ಪ್ರಕಾರ ಬಹುಮಹಡಿ ಮತ್ತು ವ್ಯಾಪಾರ ಉದ್ದೇಶದ ಕೇಂದ್ರಗಳು ಗ್ರಾಹಕರ ವಾಹನ ನಿಲುಗಡೆಗೆ ಸ್ಥಳಾವಕಾಶ ಕಲ್ಪಿಸಬೇಕು. ಫುಟ್‌ಪಾತ್ ಮೇಲೆ ಸಾರ್ವಜನಿಕರ ಸಂಚಾರಕ್ಕೆ ಯಾವುದೇ ಅಡತಡೆ ಇರಬಾರದು. ಆದರೆ, ಕಟ್ಟಡ ಮಾಲೀಕರ ಮತ್ತು ವ್ಯಾಪಾರಿಗಳ ನಿಯಮ ಉಲ್ಲಂಘನೆಯಿಂದ ನಗರದ ಬಹುತೇಕ ರಸ್ತೆಗಳ ಫುಟ್‌ಪಾತ್‌ಗಳನ್ನು ವಾಹನಗಳು ಆಕ್ರಮಿಸಿಕೊಳ್ಳುತ್ತಿವೆ. ಪರಿಣಾಮ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts