More

    ಸ್ತ್ರೀಯರ ಅಸ್ಮಿತೆಗೆ ಧಕ್ಕೆ ತರುವ ಬಿಜೆಪಿ ಕಾಯ್ದೆ

    ಕಲಬುರಗಿ: ಕೇಂದ್ರದಲ್ಲಿರುವ ಬಿಜೆಪಿ ಜಾರಿಗೊಳಿಸಲು ಹೊರಟಿರುವ ತಿದ್ದುಪಡಿಯಾಗಿರುವ ಪೌರತ್ವ ಕಾಯ್ದೆ ಮತ್ತು ಎನ್ಆರ್ಸಿ, ಎನ್ಪಿಆರ್ ಮೊದಲಾದವು ಮಹಿಳೆಯರ ಆಸ್ಮಿತೆಯತೆಗೆ ಧಕ್ಕೆಯಾಗಲಿದೆ ಎಂದು ಮಹಿಳಾಪರ ರಾಷ್ಟ್ರೀಯ ಹೋರಾಟಗಾರ್ತಿ ಬೃಂದಾ ಕಾರಟ್ ಹೇಳಿದರು.
    ಸಿಎಎ,ಎನ್ಆರ್ಸಿ, ಎನ್ಪಿಆರ್ ಬೇಡವೇ ಬೇಡ ಎಂದು ಆಗ್ರಹಿಸಿ `ಸಂವಿಧಾನ ಸಂರಕ್ಷಣೆಗಾಗಿ ನಾವು ಮಹಿಳೆಯರು ಸಂಘಟನೆ’ಯಿಂದ ನಗರದ ಹೀರಾಪುರ ರಿಂಗ್ರೋಡ್ನಲ್ಲಿರುವ ಅಮರ ಫಂಕ್ಷನ್ ಹಾಲ್ದಲ್ಲಿ ಗುರುವಾರ ಆಯೋಜಿಸಿದ್ದ ಕಲಬುರಗಿ ವಿಭಾಗ ಮಟ್ಟದ ಮಹಿಳೆಯರ ಮಹಾ ಸಮಾವೇಶದಲ್ಲಿ ಮಾತನಾಡಿದ ಅವರು, ಕಳೆದ ಆರು ವರ್ಷಗಳಿಂದ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರ್ಕಾರ ಮಾತೆತ್ತಿದ್ದರೆ, ಚೀನಾ,ಪಾಕಿಸ್ತಾನ ಎರಡನ್ನೇ ಅನ್ನುತ್ತಿದೆ. ಹೊರತು ದೇಶದಲ್ಲಿರುವ ನಿರುದ್ಯೋಗ, ಬಡತನ, ಹಸಿವು ಈ ಯಾವ ಸಮಸ್ಯೆಗಳು ಅವರ ಕಣ್ಣಿಗೆ ಕಾಣುತ್ತಿಲ್ಲವೇನು ಎಂದು ಪ್ರಶ್ನಿಸಿದರು.
    ಸಿಎಎ ಜತೆಗೆ ಎನ್ಆರ್ಸಿ ಮತ್ತು ಎನ್ಪಿಆರ್ ಸೇರಿರುವ ಬಿಜೆಪಿ ಸರ್ಕಾರ ಇದರಿಂದ ಕೇವಲ ಮುಸ್ಲಿಂರಷ್ಟೆ ಅಲ್ಲ, ಆದಿವಾಸಿ ದಲಿತರು, ಬಡವರು, ಹಿಂದುಳಿದವರು, ಅಲೆಮಾರಿಗಳು ಹೀಗೆ ಎಲ್ಲರು ಸಂಕಷ್ಟಕ್ಕೆ ಸಿಲುಕುತ್ತಾರೆ. ಆದರೆ, ಬಿಜೆಪಿ ಮಾತ್ರ ಕೇವಲ ಮುಸ್ಲಿಂರನ್ನು ಗುರಿಯಾಗಿಸಿ ಈ ಕಾಯ್ದೆ ತರಲಾಗಿದೆ ಎಂದು ಸುಳ್ಳು ಹೇಳಿ ದಾರಿ ತಪ್ಪಿಸುತ್ತಿದ್ದಾರೆ ಎಂದರು.
    ಜನರ ಸಮಸ್ಯೆ ಹೇಳಿಕೊಂಡರೆ, ಪ್ರತಿಭಟನೆ ನಡೆಸಿ ದೇಶದ್ರೋಹಿ ಪಟ್ಟ ಕಟ್ಟಲಾಗುತ್ತಿದೆ. ಹೋರಾಟ ನಡೆಸಿದವರ ಮೇಲೆ ಗುಂಡು ಹಾಕಿಸಲಾಗುತ್ತಿದೆ. ಲಾಠಿಯಿಂದ ದಾಳಿ ನಡೆಸಲಾಗುತ್ತಿದೆ. ಇಂತಹ ಕೆಲಸ ಮಾಡಿಸುವುದು ಪ್ರಧಾನಿಯವರಿಗೆ ಸರಿಕಾಣುತ್ತದಾ ಎಂದು ಪ್ರಶ್ನಿಸಿದರು ಬೃಂದಾ ಕಾರಟ್.
    ಕೇಂದ್ರದ ಬಜೆಟ್ನಲ್ಲಿ ಮಹಿಳೆಯರ ಮತ್ತು ಮಕ್ಕಳಿಗೆ ಪೌಷ್ಟಿಕ ಆಹಾರ ನೀಡುವ ಐಸಿಡಿಎಸ್ ಯೋಜನೆಗೆ ನೀಡುತ್ತಿದ್ದ ಅನುದಾನವನ್ನು ಈ ಬಜೆಟ್ನಲ್ಲಿ 9500 ಕೋಟಿ ರೂ.ಗಳನ್ನು ಕಡಿತಗೊಳಿಸಲಾಗಿದೆ. ಉದ್ಯೋಗ ಖಾತ್ರಿ ಯೋಜನೆಗೆ ಅನುದಾನವನ್ನು ಶೇ.13ರಷ್ಟು ಕತ್ತರಿಸಲಾಗಿದೆ. ಹೀಗೆ ಮಾತೆಯರು, ಮಕ್ಕಳನ್ನು ಉಪವಾಸವಿಟ್ಟು ಬಿಜೆಪಿ ಮತ್ತು ಆರ್ಎಸ್ಎಸ್ನವರು ಭಾರತ ಮಾತಾ ಕಿ ಜೈ ಅನ್ನುತ್ತಾರೆ ಎಂದು ವಾಗ್ದಾಳಿ ನಡೆಸಿದರು.
    45 ವರ್ಷಗಳಲ್ಲಿಯೇ ಇಷ್ಟೊಂದು ನಿರುದ್ಯೋಗ ಸಮಸ್ಯೆ ದೇಶ ಕಂಡಿಲ್ಲ, ಜಿಡಿಪಿ ಕುಸಿತವು ಕಂಡಿಲ್ಲ. ಇದ್ಯಾವುದೆ ಪರಿವೇ ಪ್ರಧಾನಿ ಮೋದಿಗಿಲ್ಲ. ದೇಶವನ್ನು ವಿಭಜಿಸುವುದೊಂದೆ ಅವರ ಧ್ಯಾನವಾಗಿದೆ ಎಂದು ಕಾರಟ್ ಗುಡುಗಿದರು.
    ಹೋರಾಟಗಾರ್ತಿ ನೀಲಾ ಕೆ ಪ್ರಾಸ್ತಾವಿಕವಾಗಿ ಮಾತನಾಡಿದರು. ರಾಜ್ಯಾಧ್ಯಕ್ಷೆ ದೇವಿ, ಕಾರ್ಯದಶರ್ಿ ಗೌರಮ್ಮ, ಸಿಸ್ಟರ್ ರೀನಾ ಡಿಸೋಜಾ, ಮೆಹಮೂಬಾದ ಬೇಗಂ, ನುಜ್ಜತ್, ಅಮೀನಾ ಬೇಗಂ, ನಂದಾದೇವಿ ಮನಗುಂಡಿ, ರೇಷ್ಮಾ ಬೀದರ್, ಸುರೇಖಾ ರಜಪೂತ ವಿಜಯಪುರ, ಜಗದೇವಿ ಮೊದಲಾದವರಿದ್ದರು. ಯುವ ನಾಯಕಿ ಅಶ್ವಿನಿ ಮದನಕರ್ ಸ್ವಾಗತಿಸಿದರು. ಲವಿತ್ರಾ ವಸ್ತ್ರದ, ಲಕ್ಷ್ಮೀ ಬಾವಗೆ ನಿರ್ವಹಣೆ ಮಾಡಿದರು. ತಂಡದವರು ಕ್ರಾಂತಿ ಗೀತೆ ಹಾಡಿದರು. ಕಲಬುರಗಿ, ಪೌರತ್ವ ತಿದ್ದುಪಡಿ ವಿರೋಧಿಸಿ ಸಭೆ, ಬ್ರಂದಾ ಕಾರಟ್​, kalaburagi, CAA, Branda karat,

    ನಗರ ನರೇಗಾ ಜಾರಿಗೊಳಿಸಲು ನೀಲಾ ಆಗ್ರಹ
    ದುಡಿವ ವರ್ಗಕ್ಕೆ ನೀಡಲು ನಗರ ಪ್ರದೇಶದಲ್ಲಿಯೂ ಉದ್ಯೋಗ ಖಾತ್ರಿ ಯೋಜನೆ ಜಾರಿಗೊಳಿಸಬೇಕು ಎಂದು ಹೋರಾಟಗಾತರ್ಿ ನೀಲಾ ಕೆ. ಆಗ್ರಹಿಸಿದರು. ಈ ಕುರಿತು ಹಲವು ಸಲ ಮನವಿ ಮಾಡಲಾಗಿದೆ. ನರೇಗಾ ಕೂಲಿ ಹಣವನ್ನು 600 ರೂ.ಗೆ ಹೆಚ್ಚಿಸಬೇಕು, 250 ದಿನ ಕೆಲಸ ನೀಡಬೇಕು, ವಾರಕ್ಕೊಮ್ಮೆ ಕಡ್ಡಾಯವಾಗಿ ಕೂಲಿ ನೀಡಬೇಕು, ನರೇಜಾ ಜಾರಿಗೊಳಿಸಲು ಪ್ರತ್ಯೇಕ ಸಿಬ್ಬಂದಿ ವ್ಯವಸ್ಥೆ ಎಂದು ಒತ್ತಾಯಿಸಿದರು.
    ದೇಶದಲ್ಲಿ ಬಡತನ ನಿರುದ್ಯೋಗ ತಾಂಡವಾಡುತ್ತಿದೆ, ಅದರ ಬಗ್ಗೆ ಬಡ ಹಾಗೂ ಮಧ್ಯಮ ವರ್ಗದ ಜನರು ಅದರ ಬಗ್ಗೆ ಮಾತನಾಡಬಾರದು, ಸಮಸ್ಯೆಗಳನ್ನು ಹೇಳಿಕೊಳ್ಳಬಾರದು, ಆ ಸಮಸ್ಯೆ ಗೌಣವಾಗಿಸುವಂತೆ ಮಾಡಲು ಅದಕ್ಕಿಂತಲೂ ಗಂಭೀರವಾಗಿರುವ ಎನ್ಆರ್ಸಿ, ಸಿಎಎ ಮೊದಲಾದವನ್ನು ಜಾರಿಗೊಳಿಸುವ ಮೂಲಕ ಚರ್ಚೆಯನ್ನು ಬೇರೆಡೆ ತಿರುಗಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts