More

    ಸೇತುವೆ ಕಾಮಗಾರಿ ಆಮೆಗತಿ

    ನರೇಗಲ್ಲ: ಸಮೀಪದ ಹೊಸಳ್ಳಿ – ಜಕ್ಕಲಿ ರಸ್ತೆಯಲ್ಲಿ ಗಡ್ಡಿ ಹಳ್ಳಕ್ಕೆ ನಿರ್ವಿುಸಲಾಗುತ್ತಿರುವ ಸೇತುವೆ ಕಾಮಗಾರಿ ಕುಂಟುತ್ತ ಸಾಗಿದೆ. ಪರ್ಯಾಯ ರಸ್ತೆ ಇಲ್ಲದ ಕಾರಣ ಜನರು ಪರದಾಡುವಂತಾಗಿದೆ.

    ಹೊಸಳ್ಳಿಯಿಂದ ಜಿಲ್ಲಾ ಕೇಂದ್ರ ಗದಗಕ್ಕೆ ಸಂರ್ಪಸುವ ರಸ್ತೆ ಇದಾಗಿದೆ. ಮಳೆಗಾಲದಲ್ಲಿ ಗಡ್ಡಿಹಳ್ಳ ತುಂಬಿ ಹರಿಯುವುದರಿಂದ ರಸ್ತೆ ಸಂಪರ್ಕ ಸಂಪೂರ್ಣ ಸ್ಥಗಿತಗೊಳ್ಳುತ್ತದೆ. ಹೀಗಾಗಿ, ಹಳ್ಳಕ್ಕೆ ಸೇತುವೆ ನಿರ್ಮಾಣ ಮಾಡಬೇಕು ಎಂಬುದು ಗ್ರಾಮಸ್ಥರ ಬಹುದಿನಗಳ ಬೇಡಿಕೆಯಾಗಿತ್ತು. ಈ ಹಿನ್ನೆಲೆಯಲ್ಲಿ, ರಾಜ್ಯ ರಸ್ತೆ ಅಭಿವೃದ್ಧಿ ನಿಗಮದ ಮೂಲಕ 1.74 ಕೋಟಿ ರೂ. ವೆಚ್ಚದಲ್ಲಿ 2018ರಲ್ಲಿ ಶಾಸಕ ಕಳಕಪ್ಪ ಬಂಡಿ ಅವರು ಸೇತುವೆ ನಿರ್ವಣಕ್ಕೆ ಚಾಲನೆ ನೀಡಿದ್ದರು. ಆಂಧ್ರ ಮೂಲದ ಎಸ್.ಆರ್. ಕಂಪನಿಯು ಟೆಂಡರ್ ಪಡೆದಿತ್ತು. ಕಾಮಗಾರಿಗೆ ಭೂಮಿ ಪೂಜೆ ಮಾಡಿ ಎರಡು ವರ್ಷ ಕಳೆದರೂ ಶೇ. 50ರಷ್ಟು ಕಾಮಗಾರಿ ಮಾತ್ರ ಮುಗಿದಿದ್ದು, ಉಳಿದ ಕಾಮಗಾರಿ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಇತ್ತೀಚೆಗೆ ಸುರಿದ ಮಳೆಗೆ ಹಳ್ಳ ತುಂಬಿ ಹರಿದಿದ್ದು, ರಸ್ತೆ ಸಂಪೂರ್ಣ ಹಾಳಾಗಿದೆ. ಈ ಮಾರ್ಗವಾಗಿ ಸಂಚರಿಸಲು ಸಾಧ್ಯವಾಗದಂತಹ ಪರಿಸ್ಥಿತಿ ನಿರ್ವಣವಾಗಿದೆ.

    ಸೇತುವೆ ಕಾಮಗಾರಿಯ ಸಂದರ್ಭದಲ್ಲಿ ಪರ್ಯಾಯ ರಸ್ತೆ ನಿರ್ಮಾಣ ಮಾಡದೇ ಇರುವುದರಿಂದ, ಸ್ವಲ್ಪ ಮಳೆಯಾದರೂ ರಸ್ತೆ ಸಂಚಾರ ಬಂದ್ ಆಗುತ್ತಿದೆ. ಇದೇ ಮಾರ್ಗವಾಗಿ ಗದಗಕ್ಕೆ ತೆರಳಿದರೆ 40 ಕಿ.ಮೀ. ಆಗುತ್ತದೆ. ಆದರೆ, ಈಗ ರೋಣ ಮೂಲಕ ಗದಗಕ್ಕೆ ಹೋಗಬೇಕಾಗಿದ್ದರಿಂದ 15 ಕಿ.ಮೀ ಹೆಚ್ಚುವರಿಯಾಗಿ ಕ್ರಮಿಸಬೇಕು. ಹೀಗಾಗಿ, ಹಣ ಮತ್ತು ಸಮಯ ವ್ಯಯವಾಗುತ್ತಿದೆ.

    ಹೊಸಳ್ಳಿ ಗ್ರಾಮದಿಂದ ಗದಗ ಸಂರ್ಪಸುವ ಅತ್ಯಂತ ಸಮೀಪದ ರಸ್ತೆ ಇದಾಗಿದೆ. ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ರೈತರು ಜಮೀನುಗಳಿಗೆ ಹೋಗಲು ಸಾಧ್ಯವಾಗುತ್ತಿಲ್ಲ. ಅಲ್ಲದೆ, ಕಾಮಗಾರಿಯು ಕಳಪೆಯಾಗಿದೆ. ಅಧಿಕಾರಿಗಳು ಇತ್ತ ಗಮನಹರಿಸಿ ಸೇತುವೆ ಕಾಮಗಾರಿಯನ್ನು ಬೇಗನೆ ಮುಗಿಸಬೇಕು ಎಂಬುದು ಹೊಸಳ್ಳಿ ಗ್ರಾಮಸ್ಥರು ಒತ್ತಾಯವಾಗಿದೆ.

    ಎರಡು ವರ್ಷಗಳಿಂದ ಸೇತುವೆ ಕಾಮಗಾರಿ ಆಮೆಗತಿಯಲ್ಲಿ ಸಾಗಿದೆ. ಕಾಮಗಾರಿಯ ಗುಣಮಟ್ಟ ಹಾಗೂ ಇತರೆ ಕಾರ್ಯಗಳ ಪರಿಶೀಲನೆಗೆ ಅಧಿಕಾರಿಗಳು ಬಂದಿಲ್ಲ. ಕಾಮಗಾರಿ ಬಗ್ಗೆ ಯಾರನ್ನು ಕೇಳಿದರೂ ಸಮರ್ಪಕವಾಗಿ ಉತ್ತರ ನೀಡುತ್ತಿಲ್ಲ. ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಬೇಕು.
    | ಹೇಮಯ್ಯ ಹಿರೇಮಠ, ಹೊಸಳ್ಳಿ ಗ್ರಾಮಸ್ಥ

    ಹೊಸಳ್ಳಿ – ಜಕ್ಕಲಿ ರಸ್ತೆಯ ಗಡ್ಡಿಹಳ್ಳಕ್ಕೆ ನಿರ್ಮಾಣ ಮಾಡಲಾಗುತ್ತಿರುವ ಸೇತುವೆ ಕಾಮಗಾರಿಯು ಮಳೆಗಾಲದ ಕಾರಣದಿಂದ ಸ್ಥಗಿತವಾಗಿದೆ. ದೊಡ್ಡ ಪ್ರಮಾಣದ ಕ್ರೇನ್​ಗಳನ್ನು ಬಳಸಿ ಸೇತುವೆ ನಿರ್ವಣವಾಗಬೇಕಿದೆ. ಕಾಮಗಾರಿಯು ಹೊಸಪೇಟೆ ವಿಭಾಗಕ್ಕೆ ಸಂಬಂಧಿಸಿದ್ದು, ಹೊಸಪೇಟೆಯಲ್ಲಿ ಅಧಿಕಾರಿಗಳು ಇಲ್ಲದಿರುವುದರಿಂದ ಪ್ರಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದೆ. ಇತ್ತೀಚೆಗೆ ನಾನು ಪದೋನ್ನತಿ ಹೊಂದಿದ್ದು, ಹೊಸಪೇಟೆ ವಿಭಾಗದ ಅಧಿಕಾರಿಗಳು ಕಾಮಗಾರಿಯ ಮೇಲ್ವಿಚಾರಣೆ ಮಾಡಲಿದ್ದಾರೆ. ಆದರೂ, ಸಾರ್ವಜನಿಕರಿಗೆ ತೊಂದರೆಯಾಗದಂತೆ ತಾತ್ಕಾಲಿಕವಾಗಿ ಪರ್ಯಾಯ ರಸ್ತೆ ನಿರ್ಮಾಣ ಮಾಡುವಂತೆ ಗುತ್ತಿಗೆದಾರರಿಗೆ ತಿಳಿಸಲಾಗುತ್ತದೆ.
    | ಎಸ್.ವಿ. ಮಾಲಿ ಪಾಟೀಲ, ಇಇ ಕೆಆರ್​ಡಿಸಿಎಲ್ ಹುಬ್ಬಳ್ಳ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts