More

    ಸೀತಿಮನಿಯಲ್ಲಿ ನವರಾತ್ರಿ ಸಂಭ್ರಮ

    ಬಾಗಲಕೋಟೆ: ಪುರಾಣದ ಐತಿಹ್ಯವುಳ್ಳ ತಾಲೂಕಿನ ಸೀತಿಮನಿಯಲ್ಲಿ ಅ.೧೫ ರಿಂದ ಅ.೨೩ ರವರೆಗೆ ಸಂಭ್ರಮದಿಂದ ನವರಾತ್ರಿ ಉತ್ಸವ ನಡೆಯಲಿದೆ, ಉತ್ಸವದ ನಿಮಿತ್ತ ನಾನಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

    ಸೀತಿಮನಿಯಲ್ಲಿರುವ ಸೀತಾಚಲವಾಸ ವೆಂಕಟೇಶ್ವರ ದೇವಸ್ಥಾನದಲ್ಲಿ ೯ ದಿನದವರೆಗೆ ವಿಶೇಷ ಕಾರ್ಯಕ್ರಮ ಆಯೋಜಿಸಲಾಗಿದೆ. ಸ್ವಯಂಭೂ ಮೂರ್ತಿಯಿರುವುದರಿಂದ ಈ ದೇವಸ್ಥಾನಕ್ಕೆ ವಿಶೇಷ ಐತಿಹ್ಯವಿದೆ. ದೇವಸ್ಥಾನದ ಬಳಿಯಿರುವ ಹೊಂಡಗಳನ್ನು ಲವ, ಕುಶ ಹೊಂಡಗಳೆಂದು ಕರೆಯಲಾಗುತ್ತದೆ. ಸೀತೆ ಇಲ್ಲಿಗೆ ಲವ, ಕುಶರೊಂದಿಗೆ ಭೇಟಿ ನೀಡಿದ್ದಳು ಎಂದು ಪುರಾಣ ಗ್ರಂಥಗಳಲ್ಲಿ ತಿಳಿಸಲಾಗಿದೆ.

    ನವರಾತ್ರಿ ಅಂಗವಾಗಿ ಪ್ರತಿ ದಿನ ವೆಂಕಟೇಶ್ವರನಿಗೆ ಸುಪ್ರಭಾತ, ಕಕ್ಕಡಾರತಿ, ಪಂಚಾಮೃತ ಅಭಿಷೇಕ, ಪುಷ್ಪಾರ್ಚನೆ, ಲೋಕ ಕಲ್ಯಾಣರ್ಥವಾಗಿ ಸುದರ್ಶನ ಹೋಮ ಹಮ್ಮಿಕೊಳ್ಳಲಾಗಿದೆ. ಅ.೨೩ ರಂದು ವಿಜಯದಶಮಿ ನಿಮಿತ್ತ ಶಮಿ ವೃಕ್ಷದ ಪೂಜೆ, ಬನ್ನಿ ಮುಡಿಯುವ ಕಾರ್ಯಕ್ರಮ ನೆರವೇರಲಿದೆ. ಪ್ರತಿ ದಿನ ಸಂಜೆ ೫ಕ್ಕೆ ರಾಯಚೂರಿನ ಸರ್ವೋತ್ತಮ ಆಚಾರ್ಯ ಜೋಶಿ ಅವರು ಶ್ರೀ ವೆಂಕಟೇಶ ಮಹಾತ್ಮ ಪುರಾಣ ನಡೆಸಿಕೊಡಲಿದ್ದಾರೆ.

    ಅ.೧೫ ರಂದು ಸಂಜೆ ೭.೩೦ಕ್ಕೆ ಶ್ಯಾಮ ಆಲೂರ ಅವರಿಂದ ಗಾಯನ, ಅ.೧೬ ರಂದು ಸಂಜೆ ೬ ಗಂಟೆಗೆ ರಘೋತ್ತಮಾಚಾರ್ಯ ನಾಗಸಂಪಗಿ ಅವರಿಂದ ಪ್ರವಚನ, ೭.೩೦ ಗಂಟೆಗೆ ಜಯತೀರ್ಥ ತಾಸಗಾಂವ ಅವರಿಂದ ಗಾಯನ, ಅ.೧೭ ರಂದು ಸಂಜೆ ಪರಿಮಳಾ ಗಿರಿಯಾಚಾರ್ಯ ಹಾಗೂ ಸಂತೋಷ ಗದ್ದನಕೇರಿ ಅವರಿಂದ ಗಾಯನ, ಅ.೧೮ ರಂದು ಸಂಜೆ ೬ ಗಂಟೆಗೆ ಬಿಂದು ಮಾಧವಚಾರ್ಯ ನಾಗಸಂಪಗಿ ಅವರಿಂದ ಪ್ರವಚನ, ೭.೩೦ ಗಂಟೆಗೆ ನಾರಾಯಣ ತಾಸಗಾಂವ ಅವರಿಂದ ಗಾಯನ, ಅ.೧೯ ರಂದು ಭೀಮಸೇನಾಚಾರ್ಯ ಪಾಂಡುರಂಗಿ ಅವರಿಂದ ೫.೩೦ ಗಂಟೆಗೆ ಪ್ರವಚನ, ೭.೩೦ ಗಂಟೆಗೆ ರಾಂಪೂರದ ಜಗನ್ನಾಥ ಮುತ್ತತ್ತಿಯವರಿಂದ ಸಂತವಾಣಿ, ಅ.೨೦ ರಂದು ಸಂಜೆ ೬ ಗಂಟೆಗೆ ಶುಭದಾ ದೇಶಪಾಂಡೆ ಗಾಯನ, ೭.೩೦ ಗಂಟೆಗೆ ಆನಂದ ತೀರ್ಥ ಅವರಿಂದ ಕೊಳಲು ವಾದನ, ಅ.೨೧ ರಂದು ಸಂಜೆ ೫ ಗಂಟೆಗೆ ನರಹರಿ ಆಚಾರ್ಯ ಜೋಶಿ ಅವರಿಂದ ಪ್ರವಚನ, ೭.೩೦ ಗಂಟೆಗೆ ಮೈಸೂರಿನ ರಾಮಚಂದ್ರಚಾರ್ಯ ಅವರಿಂದ ಗಾಯನ, ಅ.೨೨ ರಂದು ಸಂಜೆ ೬ ಗಂಟೆಗೆ ವೆಂಕಟನರಸಿಂಹ ಆಚಾರ್ಯ ಅವರಿಂದ ಪ್ರವಚನ, ೭.೩೦ ಗಂಟೆಗೆ ಅನಂತ ಕುಲಕರ್ಣಿ, ಶೇಷಗಿರಿ ದಾಸ್ ಅವರಿಂದ ಜುಲಬಂಧಿ ಗಾಯನ ಜರುಗಲಿವೆ ಎಂದು ದೇವಸ್ಥಾನ ಸೇವಾ ಸಮಿತಿಯ ಕಾರ್ಯದರ್ಶಿ ನರಸಿಂಹ ಆಲೂರ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts