More

    ಸಿಹಿ ತಿನ್ನಿಸಿ, ಆರತಿ ಬೆಳೆಗಿದ ಸಿಬ್ಬಂದಿ

    ನರೇಗಲ್ಲ: ಅಂಗಳದಲ್ಲಿ ಚಿತ್ತಾರದ ರಂಗೋಲಿ, ದ್ವಾರ ಬಾಗಿಲಿಗೆ ಹೂ, ಬಣ್ಣ ಬಣ್ಣದ ಬಲೂನ್​ಗಳ ಅಲಂಕಾರ, ಪ್ರತಿಯೊಬ್ಬರಿಗೆ ಸಿಹಿ ತಿನ್ನಿಸಿ ಆರುತಿ ಬೆಳಗಿದ ಸಿಬ್ಬಂದಿ.

    ಇದು ಯಾವುದೋ ಕೌಟುಂಬಿಕ ಅಥವಾ ಧಾರ್ವಿುಕ ಕಾರ್ಯಕ್ರಮವಲ್ಲ. ಪಟ್ಟಣದ ಶ್ರೀ ಅನ್ನದಾನೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ಬುಧವಾರ ಪ್ರಾರಂಭವಾದ ದ್ವಿತೀಯ ಪಿಯುಸಿ ಪರೀಕ್ಷೆಗೆ ಆಗಮಿಸುತ್ತಿದ್ದ ವಿದ್ಯಾರ್ಥಿಗಳನ್ನು ಹುರಿದುಂಬಿಸಿ ಸ್ವಾಗತಿಸಲು ಮಾಡಿದ್ದ ವಿಶೇಷ ವ್ಯವಸ್ಥೆ ಇದು.

    ಶ್ರೀ ಅನ್ನದಾನೇಶ್ವರ ಕಾಲೇಜ್​ನಲ್ಲಿ ಬುಧವಾರ ದ್ವಿತೀಯ ಪಿಯುಸಿ ಪರೀಕ್ಷೆಯ ಮೊದಲ ದಿನ ಹಬ್ಬದ ವಾತಾವರಣ ನಿರ್ವಣವಾಗಿತ್ತು. ಮಕ್ಕಳಲ್ಲಿ ಪರೀಕ್ಷೆ ಆತಂಕ ಹೊಡೆದೋಡಿಸಿ ಅವರಲ್ಲಿ ಆತ್ಮ ವಿಶ್ವಾಸ ಹೆಚ್ಚಿಸುವ ನಿಟ್ಟಿನಲ್ಲಿ ಕಳೆದ 8 ವರ್ಷಗಳಿಂದ ಕಾಲೇಜು ಆಡಳಿತ ಮಂಡಳಿ ಹಾಗೂ ಸಿಬ್ಬಂದಿ ಪರೀಕ್ಷೆಯ ಮೊದಲ ದಿನ ಕಾಲೇಜನ್ನು ಮದುವಣಗಿತ್ತಿಯಂತೆ ಅಲಂಕಾರ ಮಾಡಿ, ವಿದ್ಯಾರ್ಥಿಗಳಿಗೆ ಸಿಹಿ ತಿನ್ನಿಸಿ ಸ್ವಾಗತಿಸುವ ಪರಂಪರೆ ಮುಂದುವರಿಸಿಕೊಂಡು ಬಂದಿದ್ದಾರೆ. ಅದರಂತೆ ಬುಧವಾರ ಪರೀಕ್ಷೆಗೆ 1 ಗಂಟೆ ಮುಂಚೆ ಆವರಣದಲ್ಲಿ ಗಣಪತಿಗೆ ಪೂಜೆ ಕೈಗೊಂಡು, ಹಾಜರಿದ್ದ ವಿದ್ಯಾಥಿಗಳಿಗೆ ಸಿಹಿ ವಿತರಿಸಿ ಶುಭ ಹಾರೈಸಲಾಯಿತು. ಮಹಾವಿದ್ಯಾಲಯದ ಆವರಣದಲ್ಲಿ ಹಾಕಿದ್ದ ರಂಗೋಲಿಗಳ ಚಿತ್ರಣ ಪರೀಕ್ಷಾರ್ಥಿಗಳಲ್ಲಿ ಹುಮ್ಮಸ್ಸು ತುಂಬುವಂತಿತ್ತು.

    ಕಾಲೇಜ್ ಚೇರ್ಮನ್ ಡಾ. ಎಸ್.ಎ. ಪಾಟೀಲ ಮಾತನಾಡಿ, 3 ಕೋಟಿ ಜಪ ಮಾಡುವ ಮೂಲಕ ಗ್ರಾಮೀಣ ಭಾಗದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿಯೇ ಶಿಕ್ಷಣ ಸಂಸ್ಥೆಯನ್ನು ಪ್ರಾರಂಭಿಸಿದ ಕೀರ್ತಿ ಲಿಂ. ಅನ್ನದಾನ ಶಿವಯೋಗಿಗಳಿಗೆ ಸಲ್ಲುತ್ತದೆ. ಅವರ ತಪಸ್ಸಿನ ಫಲವಾಗಿ ಇಂದು ಸಂಸ್ಥೆ ಹೆಮ್ಮರವಾಗಿ ಬೆಳೆದಿದೆ. ಸಂಸ್ಥೆಯ ಪಿಯು ಕಾಲೇಜ್ ವರ್ಷದಿಂದ ವರ್ಷಕ್ಕೆ ಉತ್ತಮ ಫಲಿತಾಂಶ ಪಡೆಯುತ್ತಿದೆ. ಪರೀಕ್ಷಾರ್ಥಿಗಳಿಗೆ ಪರೀಕ್ಷಾ ಭಯ ಹೋಗಲಾಡಿಸುವ ಉದ್ದೇಶದಿಂದ 8 ವರ್ಷಗಳಿಂದ ಈ ಪರಂಪರೆ ಅನುಸರಿಸುತ್ತ ಬರಲಾಗಿದೆ. ಇದರಿಂದ ವಿದ್ಯಾರ್ಥಿಗಳು ಉತ್ಸಾಹದಿಂದ ಪರೀಕ್ಷೆ ಎದುರಿಸಲು ಸಹಾಯವಾಗುತ್ತದೆ ಎಂದರು.

    ಸಂಸ್ಥೆ ಕಾರ್ಯದರ್ಶಿ ಎಂ.ಜಿ. ಸೋಮನಕಟ್ಟಿ, ಆಡಳಿ ತಾಧಿಕಾರಿ ಎಸ್.ಜಿ. ಹಿರೇಮಠ, ಡಾ. ಜಿ.ಕೆ. ಕಾಳೆ, ಸಾಹಿತಿ ರವೀಂದ್ರನಾಥ ದೊಡ್ಡಮೇಟಿ, ಎಂ.ಎಸ್. ಧಡೇಸೂರಮಠ, ಶರಣಪ್ಪ ರೇವಡಿ, ಪದವಿ ಪ್ರಾಚಾರ್ಯ ಎಸ್.ಜಿ. ಕೇಶಣ್ಣವರ, ಅನಸೂಯಾ ಪಾಟೀಲ, ಪ್ರಾಚಾರ್ಯ ವೈ.ಸಿ. ಪಾಟೀಲ, ಉಪನ್ಯಾಸಕಾರದ ಎಫ್.ಎನ್. ಹುಡೇದ, ವಿದ್ಯಾಸಾಗರ, ಪಿ.ವೈ. ಬಳೂಟಗಿ, ನಂದೀಶ ಅಚ್ಚಿ, ವೀರೂಪಾಕ್ಷಪ್ಪ ಸಂಗನಾಳ, ರಮೇಶ ಕುಲಕರ್ಣಿ, ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts