More

    ಸಿಡಿಪಿಒ ಅಮಾನತಿಗೆ ಒತ್ತಾಯ

    ಶಿಗ್ಗಾಂವಿ: ಶಿಗ್ಗಾಂವಿ ಸಿಡಿಪಿಒ ನೀತಾ ವಾಡಕರ ಅವರನ್ನು ಅಮಾನತು ಮಾಡಬೇಕು ಎಂದು ಒತ್ತಾಯಿಸಿ ಅಂಗನವಾಡಿ ಕಾರ್ಯಕರ್ತೆಯ ಸಹೋದರ ಸವಣೂರ ಸಿಡಿಪಿಒ ಅಣ್ಣಪ್ಪ ಹೆಗಡೆ ಮೂಲಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಗುರುವಾರ ಮನವಿ ಸಲ್ಲಿಸಿದ್ದಾರೆ.

    ತಾಲೂಕಿನ ಹನಕನಹಳ್ಳಿ ಗ್ರಾಮದಲ್ಲಿ ಅಂಗನವಾಡಿ ಕಾರ್ಯಕರ್ತೆಯಾಗಿರುವ ಅಕ್ಕಮ್ಮ ಚಲವಾದಿ ಅವರಿಗೆ ಅದೇ ಗ್ರಾಮದ ಸಲೀಂ ಹಂಚಿನಮನಿ, ಜಗದೀಶ ಗಲಗಿನಕಟ್ಟಿ ಅವರು ಅವಾಚ್ಯ ಶಬ್ದಗಳಿಂದ ನಿಂದನೆ, ಕಿರುಕುಳ ನೀಡಿ ಜೀವ ಬೆದರಿಕೆ ಹಾಕಿದ್ದಾರೆ ಎನ್ನಲಾಗಿದೆ. ಈ ಸಂದರ್ಭದಲ್ಲಿ ಇಲಾಖೆಯ ಸಿಬ್ಬಂದಿ ನೆರವಿಗೆ ಬರಬೇಕಾದ ಸಿಡಿಪಿಒ ನೀತಾ ವಾಡಕರ ಕಾರ್ಯಕರ್ತೆಯನ್ನೇ ಹನಕನಹಳ್ಳಿಯಿಂದ ಲಕ್ಕಿಕೊಪ್ಪ ಗ್ರಾಮಕ್ಕೆ ವರ್ಗಾವಣೆ ಮಾಡಿದ್ದಾರೆ. ಇದರಿಂದ ಮನನೊಂದ ಅಂಗನವಾಡಿ ಕಾರ್ಯಕರ್ತೆ ತೀವ್ರ ಅನಾರೋಗ್ಯಕ್ಕೀಡಾಗಿದ್ದು, ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ತೀವ್ರ ನಿಗಾ ಘಟಕದಲ್ಲಿದ್ದಾರೆ. ಭಯದಲ್ಲಿ ಕೆಲಸ ನಿರ್ವಹಿಸುತ್ತಿರುವ ಕಾರ್ಯಕರ್ತೆ ಸಹಾಯಕ್ಕೆ ಬಾರದೇ, ವರ್ಗಾವಣೆ ಶಿಕ್ಷೆ ನೀಡಿರುವ ಸಿಡಿಪಿಒ ನೀತಾ ವಾಡಕರ ಅವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಿ ಅಮಾನತು ಮಾಡಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.

    ಉಮೇಶ ಚಲಚಾದಿ, ಅಶೋಕ ಕಾಳೆ, ಸಿದ್ದಪ್ಪ ಮಾದರ, ಸುರೇಶ ಹರಿಜನ, ಫಕೀರಪ್ಪ ಕುಂದೂರ ಮತ್ತಿತರರು ಉಪಸ್ಥಿತರಿದ್ದರು.

    ಕಾರ್ಯಕರ್ತೆ ಕೆಲಸದಲ್ಲಿದ್ದಾಗ ಕೆಲ ಸಮಸ್ಯೆ ಉಂಟಾಗಿತ್ತು. ಅದ್ದರಿಂದ ಅವರ ಒಪ್ಪಿಗೆ ಮೇರೆಗೆ ತಾತ್ಕಾಲಿಕವಾಗಿ ಬೇರೆಡೆ ವರ್ಗಾವಣೆ ಮಾಡಲಾಗಿದೆ. ಅಲ್ಲಿ ಅವರು ಒಂದು ತಿಂಗಳ ಕೆಲಸ ಮಾಡಿದ್ದಾರೆ. ಈಗ ಅನಾರೋಗ್ಯಕ್ಕೀಡಾಗಿ ಹುಬ್ಬಳ್ಳಿ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರ ಆರೋಗ್ಯದಲ್ಲಿ ಸುಧಾರಣೆ ಕಂಡುಬಂದಿದೆ.
    | ನೀತಾ ವಾಡಕರ, ಸಿಡಿಪಿಒ ಶಿಗ್ಗಾಂವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts