More

    ಸಾಲುಮರದ ತಿಮ್ಮಕ್ಕ ಮ್ಯೂಸಿಯಂ ಸ್ಥಾಪಿಸಲು ಒಂದು ಎಕರೆ ಭೂಮಿ

    ಸಾಲುಮರದ ತಿಮ್ಮಕ್ಕ ಮ್ಯೂಸಿಯಂ ಸ್ಥಾಪಿಸಲು ಒಂದು ಎಕರೆ ಭೂಮಿ

    ಹಾಸನ: ಸಾಲುಮರದ ತಿಮ್ಮಕ್ಕ ಮ್ಯೂಸಿಯಂ ಸ್ಥಾಪಿಸಲು ಹಾಸನ-ಹಳೇಬೀಡು ಮಾರ್ಗ ಮಧ್ಯೆ ಇರುವ ಸೀಗೆ ಗುಡ್ಡದ ಕಾವಲಿನಲ್ಲಿ ಒಂದು ಎಕರೆ ಭೂಮಿಯನ್ನು ನೀಡಲಾಗುವುದು ಎಂದು ಜಿಲ್ಲಾಧಿಕಾರಿ ಆರ್. ಗಿರೀಶ್ ತಿಳಿಸಿದರು.

    ವೃಕ್ಷಮಾತೆ ನಾಡೋಜ ಡಾ. ಸಾಲುಮರದ ತಿಮ್ಮಕ್ಕ ಅವರು ಸಂಪುಟ ಸಚಿವರ ಸ್ಥಾನಮಾನದ ಪರಿಸರ ರಾಯಬಾರಿ ಆಗಿ ನೇಮಕಗೊಂಡ ನಂತರ ಮೊದಲ ಬಾರಿಗೆ ಗುರುವಾರ ನಗರಕ್ಕೆ ಆಗಮಿಸಿದ ಸಂದರ್ಭ ಜಿಲ್ಲಾಧಿಕಾರಿ ಕಚೇರಿಯಲ್ಲಿ ಅವರನ್ನು ಸನ್ಮಾನಿಸಿ ಜಿಲ್ಲಾಧಿಕಾರಿ ಈ ಭರವಸೆ ನೀಡಿದರು.


    ಪ್ರಶಸ್ತಿಗಳು ಮತ್ತು ಸ್ಮರಣಿಕೆ, ಪರಿಸರದ ಬಗ್ಗೆ ಜಾಗೃತಿ ಮತ್ತು ಮ್ಯೂಸಿಯಂ ನಿರ್ಮಿಸಲು ಸಾಲು ಮರದ ತಿಮ್ಮಕ್ಕ ಟ್ರಸ್ಟ್‌ಗೆ ಒಂದು ಎಕರೆ ಭೂಮಿಯನ್ನು ಶೀಘ್ರದಲ್ಲೇ ಹಸ್ತಾಂತರ ಮಾಡಲಾಗುವುದು. ಅದೇ ಪ್ರದೇಶದಲ್ಲಿ ವಿಜ್ಞಾನ ಕೇಂದ್ರವನ್ನು ಸಹ ಸ್ಥಾಪಿಸಲಾಗುವುದ. ಇದರಿಂದ ಸೀಗೆಗುಡ್ಡದ ಕಾವಲು ಪ್ರಮುಖ ಪ್ರವಾಸಿ ಕೇಂದ್ರವಾಗಿ ಅಭಿವೃದ್ಧಿ ಹೊಂದಲಿದೆ. ಬೇಲೂರು, ಹಳೇಬೀಡಿಗೆ ಬರುವ ಪ್ರವಾಸಿಗರಿಗೆ ಸಾಲುಮರದ ತಿಮ್ಮಕ್ಕ ಮ್ಯೂಸಿಯಂಗೂ ಭೇಟಿ ನೀಡುವ ಅವಕಾಶ ದೊರೆಯಲಿದೆ ಎಂದರು.


    ಗೌರವ ಸ್ವೀಕರಿಸಿ ಮಾತನಾಡಿದ ಸಾಲು ಮರದ ತಿಮ್ಮಕ್ಕ ಅವರು, ‘ನಾನು ಮತ್ತು ನನ್ನ ಪತಿ ಮರಗಳ ಸಂರಕ್ಷಣೆಗೆ ಹಲವು ವರ್ಷಗಳ ಕಾಲ ಸೇವೆ ಮಾಡಿದ್ದೇವೆ. ಅದರಂತೆ ಪ್ರತಿಯೊಬ್ಬರು ಸಹ ಗಿಡಗಳನ್ನು ನೆಟ್ಟು ಬೆಳೆಸಿ ಪರಿಸರ ಸಂರಕ್ಷಣೆಗೆ ಮುಂದಾಗಬೇಕು’ ಎಂದು ಮನವಿ ಮಾಡಿದರು.


    ತಿಮ್ಮಕ್ಕ ಅವರ ದತ್ತುಪುತ್ರ ಬಳ್ಳೂರು ಉಮೇಶ್ ಮತ್ತಿತರರು ಈ ಸಂದರ್ಭದಲ್ಲಿ ಹಾಜರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts