More

    ಸಾರ್ವಜನಿಕರ ಸಮಸ್ಯೆಗಳಿಗೆ ತಕ್ಷಣ ಸ್ಪಂದಿಸಿ

    ಯಾದಗಿರಿ: ಹಿರಿಯ ನಾಗರಿಕರು ಮತ್ತು ಇನ್ನಿತರ ಫಲಾನುಭವಿಗಳು ಪಿಂಚಣಿ ನಿಂತಿರುವ ಮತ್ತು ಪಿಂಚಣಿಗಾಗಿ ಹೊಸ ಅಜರ್ಿ ಸಲ್ಲಿಸಲು ಜಿಲ್ಲಾ ಮತ್ತು ತಾಲೂಕು ಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಲು ತಕ್ಷಣ ಅಜರ್ಿ ಸ್ವೀಕರಿಸಿ ಪಿಂಚಣಿ ಮಂಜೂರು ಮಾಡುವಂತೆ ಸಂಬಂಸಿದ ಅಕಾರಿಗಳಿಗೆ ಜಿಲ್ಲಾಕಾರಿ ಸ್ನೇಹಲ್ ಆರ್., ಖಡಕ್ ಸೂಚನೆ ನೀಡಿದ್ದಾರೆ.

    ಗುರುವಾರ ನಗರದ ಜಿಲ್ಲಾಕಾರಿ ಕಚೇರಿ ಸಭಾಂಗಣದಲ್ಲಿ ಕರೆದಿದ್ದ ಕಂದಾಯ ಇಲಾಖೆ ಪರಿಶೀಲನಾ ಸಭೆಯಲ್ಲಿ ಮಾತನಾಡಿ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸಬೇಕು. ಸಾಮಾಜಿಕ ಯೋಜನೆಗಳಾದ ವಯಸ್ಸಾದ ಪಿಂಚಣಿ, ವಿಧವೆ ಪಿಂಚಣಿ, ದೈಹಿಕವಾಗಿ ಅಂಗವಿಕಲರ ಪಿಂಚಣಿ, ಸಂಧ್ಯಾ ಸುರಕ್ಷತೆ ವಿವಿಧ ಯೋಜನೆಗಳ ಪಿಂಚಣಿಯನ್ನೆ ಅವಲಂಬಿಸಿರುವ ಫಲಾನುಭವಿಗಳಿಗೆ ಆದಷ್ಟು ಬೇಗ ಸೌಲಭ್ಯ ಒದಗಿಸಬೇಕು. ತಾಂತ್ರಿಕ ಸಮಸ್ಯೆಗಳನ್ನು ಬಗೆಹರಿಸಬೇಕು ಎಂದರು.

    ಪ್ರತಿ ಗ್ರಾಮಕ್ಕೆ ಸ್ಮಶಾನಕ್ಕೆ ಜಾಗ ಇರುವಂತೆ ಕ್ರಮ ಸಹ ಕೈಗೊಳ್ಳಲಾಗುತ್ತಿದ್ದು, ಸ್ಮಶಾನ ಭೂಮಿ ಇಲ್ಲದ ಗ್ರಾಮಗಳಲ್ಲಿ ತಕ್ಷಣ ಸಕರ್ಾರಿ ಜಮೀನು ಅಥವಾ ಖರೀದಿಸಿದ ಖಾಸಗಿ ಜಮೀನು ಮಂಜೂರು ಮಾಡಬೇಕು. ಸಕರ್ಾರಿ ಜಮೀನು ಲಭ್ಯವಿಲ್ಲದ ಗ್ರಾಮಗಳಲ್ಲಿ ಜಮೀನು ಗುರುತಿಸಿ ಖರೀದಿಸಲು ಪ್ರಸ್ತಾವನೆ ಸಲ್ಲಿಸಿ ಹಾಗೂ ನರೇಗಾದಲ್ಲಿ ಸ್ಮಶಾನ ಭೂಮಿಗೆ ಕಾಂಪೌಂಡ್ ಗೋಡೆ ನಿಮರ್ಿಸಲು ಕ್ರಮ ವಹಿಸುವಂತೆ ತಹಸೀಲ್ದಾರರಿಗೆ ನಿದರ್ೇಶನ ನೀಡಿದರು.

    ಜಿಲ್ಲೆಯಲ್ಲಿ ಜಮೀನು ಸವರ್ೇ ಕಾರ್ಯಗಳ ಪ್ರಕರಣಗಳನ್ನು ತ್ವರಿತವಾಗಿ ವಿಲೇವಾರಿ ಮಾಡಿ, ಇಲಾಖೆಯ ಹಾಗೂ ನೋಂದಾಯಿತ ಸವರ್ೇಯರ್ಗಳಿಗೆ ಪ್ರಕರಣಗಳನ್ನು ಹಂಚಿಕೆ ಮಾಡಿದ ಶೀಘ್ರದಲ್ಲಿ ಪ್ರಕರಣವನ್ನು ಇತ್ಯರ್ಥಪಡಿಸಿ. ಅಕಾರಿಗಳು ಸವರ್ೇಯರ್ಗಳ ಪ್ರಗತಿಯನ್ನು ನಿರಂತರವಾಗಿ ಗಮನಿಸಿ. ಕಂದಾಯ ಗ್ರಾಮ, ಮಾಸಾಶನ, ತ್ರೀ ಆಂಡ್ ನೈನ್ (3 ಮತ್ತು 9 ಕಲಂ) ಮಿಸ್ ಮ್ಯಾಚ್, ಪೈಕಿ ಪಹಣಿ, ಮೋಜನಿ ಕಡತಗಳು, ಆರ್ಟಿಸಿ, ಎಜೆಎಸ್ಕೆ ತಂತ್ರಾಂಶದಡಿ ಸ್ವೀಕೃತವಾದ ಅಜರ್ಿಗಳು, ನವೋದಯ ಆ್ಯಪ್ ಮತ್ತು ಸ್ಮಶಾನ ಭೂಮಿಗಳ ಲಭ್ಯತೆ ಬಗ್ಗೆ ಹಾಗೂ ಸಕಾಲ ಯೋಜನೆಗಳ ಪ್ರಗತಿಯ ಮಾಹಿತಿ ಪಡೆದರು. ಸಕಾಲದಡಿ ನೋಂದಾಯಿತ ಸೇವೆಗಳನ್ನು ಆದ್ಯತೆಯಲ್ಲಿ ಒದಗಿಸಿ ಪ್ರಗತಿ ಕುಂಠಿತವಾಗದಂತೆ ಪ್ರಗತಿ ಸಾಸಬೇಕು ಎಂದು ಹೇಳಿದರು.

    ಅಪರ ಜಿಲ್ಲಾಕಾರಿ ಶರಣಬಸಪ್ಪ ಕೋಟೆಪ್ಪಗೊಳ , ತಹಸೀಲ್ದಾರರಾದ ಅಣ್ಣಾರಾವ್ ಪಾಟೀಲ್, ಉಮಾಕಾಂತ ಹಳ್ಳೆ, ಸುಬ್ಬಣ್ಣ ಜಮಖಂಡಿ, ಜಗದೀಶ್ ಚೌರ್ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts