More

    ಸಾಗರದಲ್ಲಿ ಪರಿಣಿತಿ ಯುವ ರಾಷ್ಟ್ರೀಯ ನೃತ್ಯೋತ್ಸವ ವೈಭವ

    ಸಾಗರ: ನಮ್ಮ ಸಾಂಸ್ಕೃತಿಕ ವೈವಿಧ್ಯತೆ ಪ್ರಪಂಚದ ಗಮನ ಸೆಳೆದಿದೆ. ವಿದೇಶೀಯರೂ ಭಾರತಕ್ಕೆ ಬಂದು ನಮ್ಮ ಕಲೆಗಳ ಅಭ್ಯಾಸದಲ್ಲಿ ತೊಡಗಿದ್ದಾರೆ. ಆದರೆ ನಮ್ಮ ಯುವಜನರು ಆಧುನಿಕ ನೃತ್ಯ, ಸಂಗೀತಕ್ಕೆ ಆಕರ್ಷಿತರಾಗಿರುವುದು ಬೇಸರದ ಸಂಗತಿ ಎಂದು ಮಲೆನಾಡು ಅಭಿವೃದ್ಧಿ ಪ್ರತಿಷ್ಠಾನದ ಅಧ್ಯಕ್ಷ ಎಂ.ಹರನಾಥ ರಾವ್ ಮತ್ತಿಕೊಪ್ಪ ಹೇಳಿದರು.
    ನಗರದ ಎಲ್.ಬಿ.ಕಾಲೇಜಿನ ದೇವರಾಜ ಅರಸು ಕಲಾಭವನದಲ್ಲಿ ಶನಿವಾರ ಪರಿಣಿತಿ ಕಲಾಕೇಂದ್ರ ಹಮ್ಮಿಕೊಂಡಿದ್ದ ಪರಿಣಿತಿ ಯುವ ರಾಷ್ಟ್ರೀಯ ನೃತ್ಯೋತ್ಸವ ಉದ್ಘಾಟಿಸಿ ಮಾತನಾಡಿ, ನಮ್ಮ ಸಾಂಪ್ರದಾಯಿಕ ನೃತ್ಯ, ಸಂಗೀತದ ಬಗ್ಗೆ ಆಸಕ್ತಿ ಬೆಳೆಸಿಕೊಂಡಾಗ ಹೆಚ್ಚು ಕ್ರಿಯಾಶೀಲವಾಗಿರಲು ಸಾಧ್ಯ. ಓದಿನ ಜತೆಗೆ ಇಂತಹ ಕಲಾಪ್ರಕಾರಗಳಲ್ಲೂ ಯುವಜನರು ತೊಡಗಿಸಿಕೊಳ್ಳಬೇಕು ಎಂದರು.
    ಪರಿಣಿತಿ ಕಲಾಕೇಂದ್ರದ ಮುಖ್ಯಸ್ಥ ವಿದ್ವಾನ್ ಎಂ.ಗೋಪಾಲ್, ಯುವಜನರಿಗೆ ಪ್ರೇರಣೆಯಾಗಲಿ ಎನ್ನುವ ಉದ್ದೇಶದಿಂದ ಎಲ್.ಬಿ.ಕಾಲೇಜಿನ ಸಭಾಂಗಣದಲ್ಲಿ ನೃತ್ಯೋತ್ಸವ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮದಲ್ಲಿ ಬೆಂಗಳೂರು, ಮಹಾರಾಷ್ಟ್ರ, ಕೋಲ್ಕತ ಸೇರಿದಂತೆ ಬೇರೆಬೇರೆ ರಾಜ್ಯದ ಕಲಾವಿದರು ಪಾಲ್ಗೊಳ್ಳುತ್ತಿದ್ದಾರೆ. ಸ್ಥಳೀಯ ಪ್ರತಿಭೆಗಳಿಂದ ಯಕ್ಷಗಾನ, ಭರತನಾಟ್ಯಗಳನ್ನು ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.
    ಮೇಖಲಾ ಭಾರದ್ವಾಜ್ ಮತ್ತು ತಂಡದವರಿಂದ ಭರತನಾಟ್ಯ, ಮಹಾರಾಷ್ಟ್ರದ ಹಂಸಿಸಂಘಾನಿ ಮತ್ತು ದೇವಿಕ ಮಾಂಕರ್ ಅವರಿಂದ ಕಥಕ್, ಕೋಲ್ಕತದ ಅವಜೀತ್ ಕುಂದು ಒಡಿಸ್ಸಿ, ಪ್ರಿಯಾಂಕಾ ರಾಮಚಂದ್ರಯ್ಯ ತಂಡದಿಂದ ಕೂಚಿಪುಡಿ, ಕಾಲೇಜಿನ ವಿದ್ಯಾರ್ಥಿಗಳಿಂದ ಭರತನಾಟ್ಯ ಮತ್ತು ಯಕ್ಷಗಾನ ಪ್ರದರ್ಶನಗೊಂಡಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts