More

    ಸರ್ಕಾರದ ಯೋಜನೆ ಜನತೆಗೆ ತಲುಪಿಸಿ

    ಆಳಂದ (ಕಲಬುರಗಿ): ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಾಕಷ್ಟು ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳನ್ನು ಜನರಿಗೆ ತಲುಪಿಸುವ ಕೆಲಸ ಅಧಿಕಾರಿಗಳು ಮಾಡಬೇಕು ಎಂದು ಶಾಸಕ ಸುಭಾಷ ಗುತ್ತೇದಾರ್ ಹೇಳಿದರು.

    ಪಟ್ಟಣದ ಲಿಂಗಾಯತ ಭವನದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ `ಉಜ್ವಲ ಭಾರತ, ಉಜ್ವಲ ಭವಿಷ್ಯ’ ವಿದ್ಯುತ್ ಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಜೆಸ್ಕಾಂ ಇಲಾಖೆಯಲ್ಲಿ ಸಾಕಷ್ಟು ಸಮಸ್ಯೆಗಳಿವೆ. ರೈತರ ಹೊಲಗಳ್ಳಿನ ಹಾಗೂ ಗ್ರಾಮಕ್ಕೆ ಕುಡಿವ ನೀರು ಸರಬರಾಜು ಮಾಡುವ ಪಂಪ್​ಸೆಟ್​ಗೆ ಅಳವಡಿಸಿರುವ ಟಿಸಿಗಳು ಸುಟ್ಟು ತಿಂಗಳಾದರೂ ಬದಲಾಯಿಸಲ್ಲ ಎಂದು ಕಿಡಿಕಾರಿದರು.

    ಜೆಸ್ಕಾಂ ನಿರ್ದೆಶಕ ವೀರಣ್ಣ ಮಂಗಾಣೆ ಮಾತನಾಡಿ, ಉಜ್ವಲ್ ಭಾರತ, ಉಜ್ವಲ್ ಭವಿಷ್ಯ ಅತ್ಯುತ್ತಮ ಕಾರ್ಯಕ್ರಮವಾಗಿದೆ. ಇದು ಪ್ರಚಾರಕ್ಕೆ ಮಾತ್ರ ಸೀಮಿತವಾಗದೆ, ಜೆಸ್ಕಾಂ ಯೋಜನೆ ಜನ ಸಾಮಾನ್ಯರಿಗೆ ತಲುಪುವಂತಾಗಬೇಕು ಎಂದು ಸಲಹೆ ನೀಡಿದರು.

    ಇಲಾಖೆಯ ವಿವಿಧ ಯೋಜನೆಗಳಡಿ ಆಯ್ಕೆಯಾದ ಫಲಾನುಭವಿಗಳಿಗೆ ಶಾಸಕ ಸುಭಾಷ ಗುತ್ತೇದಾರ್ ಅವರು ಆದೇಶ ಪ್ರತಿ ವಿತರಿಸಿದರು.

    ಪುರಸಭೆ ಅಧ್ಯಕ್ಷೆ ರಾಜಶ್ರೀ ಖಜೂರಿ, ಸಿದ್ದರಾಮ ಪಾಟೀಲ್, ಲೋಕಪ್ಪ ಜಾಧವ್, ಬಿಜೆಪಿ ಮಂಡಲ ಅಧ್ಯಕ್ಷ ಆನಂದರಾವ ಪಾಟೀಲ್, ಜಿಪಂ ಮಾಜಿ ಸದಸ್ಯ ಗುರುಶಾಂತಪ್ಪ ನಿಂಬಾಳ, ಪ್ರಮುಖರಾದ ರಾಜಶೇಖರ ಮಲ್ಲಶಟ್ಟಿ, ಆನಂದ ಗಾಯಕವಾಡ, ಡಾ.ಸಂಜಯ ರೆಡ್ಡಿ, ಜೆಸ್ಕಾಂ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಬಾಬು ಕೋರೆ, ಜೆಸ್ಕಾಂ ಇಇ ಸತೀಶ ಚವ್ಹಾಣ್, ಅಭಿಯಂತರ ಸತೀಶಚಂದ್ರ ಇತರರಿದ್ದರು.

    ಜೆಸ್ಕಾಂ ಕಾರ್ಯಕ್ರಮದಲ್ಲಿಯೇ ಕರೆಂಟ್ ಹೋಯ್ತು: ಲಿಂಗಾಯತ ಭವನದಲ್ಲಿ ಜೆಸ್ಕಾಂನಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿಯೇ ವಿದ್ಯುತ್ ಕಡಿತಗೊಂಡಿರುವುದು ಸಾಕಷ್ಟು ಚರ್ಚೆಗೆ ಕಾರಣವಾಯಿತು. ನಿಮ್ಮ ಕಾರ್ಯಕ್ರಮದಲ್ಲಿ ಕರೆಂಟ್ ಹೋಗಿದೆ, ಇನ್ನು ಜನ ಸಾಮಾನ್ಯರ ಸ್ಥಿತಿ ಏನು? ಎಂದು ಶಾಸಕ ಸುಭಾಷ ಗುತ್ತೇದಾರ್ ತರಾಟೆಗೆ ತೆಗೆದುಕೊಂಡರು. ಮೊದಲು ಕೆಟ್ಟಿರುವ ಎಲ್ಲ ಟಿಸಿಗಳನ್ನು ಸರಿಪಡಿಸಿ, ರೈತರ ಹೊಲಗಳಿಗೆ ಭೇಟಿ ನೀಡಿ ಪರಿಶೀಲನೆ ಮಾಡಿ. ಇಲಾಖೆಯ ಯಾವುದೇ ಸಮಸ್ಯೆ ಇದ್ದರೆ ನನ್ನ ಮುಂದೆ ಹೇಳಿ, ಸಚಿವರೊಂದಿಗೆ ಮಾತನಾಡಿ ಪರಿಹಾರ ಕಲ್ಪಿಸಲು ಶ್ರಮಿಸುತ್ತೇನೆ ಎಂದು ಗುತ್ತೇದಾರ್ ಹೇಳಿದರು.

    ಪ್ರತಿ ಗ್ರಾಮಕ್ಕೆ ಭೇಟಿ ನೀಡಿದಾಗ ಜನರು ಜೆಸ್ಕಾಂ ಇಲಾಖೆಯ ಬಗ್ಗೆಯೇ ದೂರು ನೀಡುತ್ತಿದ್ದಾರೆ. ಅಧಿಕಾರಿಗಳ ನಿರ್ಲಕ್ಷೃದಿಂದ ಸರ್ಕಾರ ಹಾಗೂ ಜನಪ್ರತಿನಿಧಿಗಳಿಗೆ ಕೆಟ್ಟ ಹೆಸರು ಬರುತ್ತಿದೆ. ಸರ್ಕಾರ ಎಸ್ಸಿ, ಎಸ್ಟಿ ಜನರಿಗೆ 75 ಯೂನಿಟ್ವರೆಗೆ ಉಚಿತ ವಿದ್ಯುತ್ ಸರಬರಾಜು ಆಗಬೇಕು ಎಂದು ಆದೇಶಿಸಿದೆ. ನೀವು ದುಡ್ಡು ಕೊಟ್ಟವರಿಗೆ ಸರಿಯಾಗಿ ವಿದ್ಯುತ್ ಕೊಡುತ್ತಿಲ್ಲ, ಇನ್ನು ಸರ್ಕಾರದ ಯೋಜನೆ ಯಾವಾಗ ಜನತೆಗೆ ತಲುಪಿಸುತ್ತೀರಿ?
    | ಸುಭಾಷ ಗುತ್ತೇದಾರ್, ಶಾಸಕ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts