More

    ಸಮ್ಮೇದ ಶಿಖರ್ಜಿ ಪುಣ್ಯಕ್ಷೇತ್ರವಾಗೇ ಇರಲಿ; ಪ್ರವಾಸಿ ತಾಣವನ್ನಾಗಿಸುವ ಯೋಜನೆ ಖಂಡನೀಯ: ಸರ್ಕಾರದ ವಿರುದ್ಧ ಜೈನ ಸಮುದಾಯ ಕಿಡಿ

    ಸಾಗರ: ಜೈನ ಸಮುದಾಯಗಳ ತೀರ್ಥ ಕ್ಷೇತ್ರಗಳನ್ನು ಶಾಶ್ವತವಾಗಿ ಜೈನ ಸಮುದಾಯಕ್ಕೇ ಮೀಸಲಿಡಬೇಕು ಎಂದು ಸ್ವಸ್ತಿ ಶ್ರೀ ಭಟ್ಟಾ ಕಲಂಕ ಭಟ್ಟಾರಕ ಪಟ್ಟಾಚಾರ್ಯವರ್ಯ ಸ್ವಾಮೀಜಿ ಆಗ್ರಹಿಸಿದರು.
    ಸೋಮವಾರ ಉಪವಿಭಾಗಾಧಿಕಾರಿಗಳ ಕಚೇರಿ ಮುಂಭಾಗ ತಾಲೂಕು ಜೈನ ಸಮುದಾಯಗಳ ಆಶ್ರಯದಲ್ಲಿ ಜೈನ ಸಮುದಾಯದ ಪವಿತ್ರ ತೀರ್ಥ ಕ್ಷೇತ್ರ ಜಾರ್ಖಂಡ್ ರಾಜ್ಯದ ಸಮ್ಮೇದ ಶಿಖರ್ಜಿಯನ್ನು ಪ್ರವಾಸಿ ತಾಣವನ್ನಾಗಿಸುವ ಕೇಂದ್ರ ಮತ್ತು ಜಾರ್ಖಂಡ್ ಸರ್ಕಾರದ ಕ್ರಮವನ್ನು ಖಂಡಿಸಿ ಆಯೋಜಿಸಿದ್ದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
    ಜಾರ್ಖಂಡ್ ರಾಜ್ಯದಲ್ಲಿರುವ ಶಿಖರ್ಜಿ ಶಿಖರದಲ್ಲಿ ಜೈನರ 20 ತೀರ್ಥಂಕರರು ಮೋಕ್ಷ ಹೊಂದಿದ್ದಾರೆ. ಇಂತಹ ಪುಣ್ಯಕ್ಷೇತ್ರವನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಜೈನರ ಪವಿತ್ರ ಕ್ಷೇತ್ರವನ್ನಾಗಿ ಉಳಿಸುವಂತಹ ಶಾಶ್ವತ ಆದೇಶ ಮಾಡಬೇಕು. ಪುಣ್ಯಕ್ಷೇತ್ರಗಳನ್ನು ಪ್ರವಾಸಿ ತಾಣಗಳನ್ನಾಗಿಸುವ ಆಲೋಚನೆ ಸಲ್ಲದು. ಇದರಿಂದ ಅಧ್ಯಾತ್ಮ ತಾಣಗಳ ಮಹತ್ವವೇ ಇರುವುದಿಲ್ಲ. ಜೈನರ ಪುಣ್ಯಕ್ಷೇತ್ರಗಳನ್ನು ಯಥಾವತ್ತಾಗಿ ಉಳಿಸುವಲ್ಲಿ ಸರ್ಕಾರ ಚಿಂತನೆ ನಡೆಸಬೇಕು. ಈ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳದಿದ್ದರೆ ದೆಹಲಿವರೆಗೂ ನಮ್ಮ ಹೋರಾಟ ಕೊಂಡ್ಯೊಯುತ್ತೇವೆ. ಸಮಾಜದ ಪ್ರತಿಯೊಬ್ಬರೂ ಇದರಲ್ಲಿ ಪಾಲ್ಗೊಳ್ಳಲು ಮುಂದಾಗಿ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts