More

    ಸಮಾಜ ಸಂಘಟಿಸಲು ಸರ್ವರೂ ಮುಂದಾಗಿ

    ಸವಣೂರ: ಇತರ ಸಮಾಜವನ್ನು ಗೌರವಿಸುವ ಮೂಲಕ ತಮ್ಮ ಸಮಾಜವನ್ನು ಸಂಘಟಿಸಲು ಸರ್ವರೂ ಮುಂದಾಗಬೇಕು ಎಂದು ಕಾಗಿನೆಲೆ ಕನಕ ಗುರುಪೀಠದ ಶ್ರೀ ನಿರಂಜನಾನಂದಪುರಿ ಸ್ವಾಮೀಜಿ ಸಲಹೆ ನೀಡಿದರು.

    ಕರ್ನಾಟಕ ಪ್ರದೇಶ ಕುರುಬರ ಸಂಘ ತಾಲೂಕು ಘಟಕ, ಶಹರ ಘಟಕ ಹಾಗೂ ನೌಕರರ ಸಂಘದ ಆಶ್ರಯದಲ್ಲಿ ಶ್ರೀ ಲಲಾಟೇಶ್ವರ ಕಲ್ಯಾಣ ಮಂಟಪದಲ್ಲಿ ಶನಿವಾರ ಆಯೋಜಿಸಿದ್ದ ಕನಕದಾಸರ 532ನೇ ಜಯಂತ್ಯುತ್ಸವ ಕಾರ್ಯಕ್ರಮ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಸಮಾರಂಭದ ಸಾನ್ನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

    ಹರಿ (ದೇವರನ್ನು)ಯನ್ನು ಕಾಪಾಡಿದವರು ಹರಿಜನ ಎಂಬುವದನ್ನು ಸರ್ವರೂ ಅರಿಯಬೇಕು. ಮೇಲುಕೋಟೆ ಶ್ರೀ ಚಲುವ ನಾರಾಯಣಸ್ವಾಮಿ ದೇವಸ್ಥಾನದಲ್ಲಿ ಇಂದಿಗೂ ಹರಿಜನ ಬಾಂಧವರಿಗೆ ಮೊದಲಿಗೆ ತೀರ್ಥ, ಪ್ರಸಾದ ನೀಡುವುದನ್ನು ನಿರ್ಣಯಿಸಿ ಲಿಪಿಯಲ್ಲಿ ಬರೆದಿಟ್ಟಿರುವುದು ಇತಿಹಾಸದಲ್ಲಿ ಉಲ್ಲೇಖವಾಗಿದೆ ಎಂದರು.

    ಕಾಂಗ್ರೆಸ್ ಮುಖಂಡ ಎಸ್.ಎಸ್. ಶಿವಳ್ಳಿ ಸಮಾರಂಭ ಉದ್ಘಾಟಿಸಿ ಮಾತನಾಡಿ, ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುವ ಹಿನ್ನಲೆಯಲ್ಲಿ ಕನಕ ಗುರುಪೀಠದ ವತಿಯಿಂದ ಸೂಕ್ತ ವ್ಯವಸ್ಥೆ ಕಲ್ಪಿಸುತ್ತಿರುವುದು ಹೆಮ್ಮೆಯ ವಿಷಯವಾಗಿದೆ. ಸಾಮಾಜಿಕ ಕಾರ್ಯಗಳಿಗೆ ಸದಾ ನಮ್ಮ ಕುಟುಂಬದ ಬೆಂಬಲ ಇರುತ್ತದೆ ಎಂದರು.

    ಜಿ.ಪಂ. ಶಿಕ್ಷಣ ಮತ್ತು ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ರಮೇಶ ದುಗ್ಗತ್ತಿ ಮಾತನಾಡಿದರು. ಸುಭಾಸ ಮಜ್ಜಗಿ ಪ್ರಾಸ್ತಾವಿಕವಾಗಿ ಮಾತನಾಡಿದರು.

    ಗೊಟಗೋಡಿ ಜಾನಪದ ವಿವಿಯ ಸಹ ಪ್ರಾಧ್ಯಾಪಕ ಡಾ. ಚಂದ್ರಪ್ಪ ಸೊಬಟಿ ಉಪನ್ಯಾಸ ನೀಡಿದರು. ಬಂಕಾಪೂರ ಕೆಂಡದಮಠದ ಸಿದ್ದಯ್ಯ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕರ್ನಾಟಕ ಪ್ರದೇಶ ಕುರುಬರ ಸಂಘದ ತಾಲೂಕು ಘಟಕದ ಅಧ್ಯಕ್ಷ ರವಿ ಕರಿಗಾರ ಅಧ್ಯಕ್ಷತೆ ವಹಿಸಿದ್ದರು.

    ಸನ್ಮಾನ: ಸಿಡಿಪಿಒ ಅಣ್ಣಪ್ಪ ಹೆಗಡೆ, ಪಶು ಸಂಗೋಪನಾ ಇಲಾಖೆ ತಾಲೂಕು ವೈದ್ಯಾಧಿಕಾರಿ ಬಿರೇಶ ಪುಟ್ಟಕ್ಕನವರ, ತಾ.ಪಂ. ಎಡಿ ಎಸ್.ಎಚ್. ಅಮರಾಪೂರ, ಮಾದಾಪೂರ ಕಿತ್ತೂರರಾಣಿ ಚನ್ನಮ್ಮ ವಸತಿ ಶಾಲೆಯ ಪ್ರಾಚಾರ್ಯ ರಮೇಶ ಕಂಬಳಿ ಹಾಗೂ ವಿವಿಧ ಕ್ಷೇತ್ರ ಸಾಧಕರನ್ನು ಸನ್ಮಾನಿಸಲಾಯಿತು.

    ಗೌರವ ಪುರಸ್ಕಾರ: ಎಸ್​ಎಸ್​ಎಲ್​ಸಿ, ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಪಡೆದ ಸಮಾಜದ ವಿದ್ಯಾರ್ಥಿಗಳಾದ ಬರಮಪ್ಪ ಜೋಗೇರ, ಪ್ರಿಯಾಂಕ ನಾಗಪ್ಪ ಅರಳಿಕಟ್ಟಿ, ಗೌರವ್ವ ಮಲ್ಲೇಶಪ್ಪ ಅಳಗಂಚಿ, ಶಶಿಕುಮಾರ್ ನಿಂಗಪ್ಪ ಮಲ್ಲೂರ, ರಜನಿಕಾಂತ್ ಬಸನಗೌಡ ಪಾಟೀಲ, ರವಿ ನಿಂಗಪ್ಪ ಯರೇಶೀಮಿ, ಕವಿತಾ ಪೂಜಾರ, ಕನ್ನಪ್ಪ ಡಮನಳ್ಳಿ, ಮಂಜುನಾಥ ಕುರಿ, ರೇಖಾ ಸೋಮಸುಂದರ, ವಿಜಯಲಕ್ಷ್ಮಿ ಗಡ್ಡೆಣ್ಣನವರ, ಸಿಂಧು ಗೌಡಗೇರಿ, ರೇಖಾ ರಟಗೇರಿ, ಗೋಪಿಕಾ ಮಲ್ಲೂರ, ಗಣೇಶ ಕರ್ಜಗಿ ಅವರನ್ನು ಸನ್ಮಾನಿಸಲಾಯಿತು.

    ಜಿ.ಪಂ. ಸದಸ್ಯ ಶಿವರಾಜ ಅಮರಾಪೂರ, ಪ್ರಮುಖರಾದ ಬೈರತಿ ಗಿರೀಶ, ಬಸವರಾಜ ಕಂಬಳಿ, ಮಲ್ಲೇಶಪ್ಪ ಮತ್ತೂರ, ರೇಖಾ ಬಂಕಾಪೂರ, ಹನುಮಂತಪ್ಪ ನೆಲ್ಲೂರ, ಮೃತ್ಯುಂಜಯ ಗುದಗಿ, ದೇವೇಂದ್ರಪ್ಪ ಬೆಟದೂರ, ಮಹಾದೇವಪ್ಪ ಮಲ್ಲೂರ, ಮಾರುತಿ ಹರಿಹರ, ಮಾಲತೇಶ ಸಾಲಿ ಇದ್ದರು. ಶಿಕ್ಷಕರಾದ ಆರ್.ವೈ. ಕಳ್ಳಿಮನಿ, ಎನ್.ಎನ್. ಬಸನಾಳ, ದೇವೇಂದ್ರಪ್ಪ ಬೆಟದೂರ, ವಕೀಲ ಎಫ್.ಎನ್. ನೆಲ್ಲೂರ ನಿರ್ವಹಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts