More

    ಸಿಪಾಯಿ-ಏಳುಕೋಟಿ ಜೋಡೆತ್ತು ಪ್ರಥಮ

    ತರೀಕೆರೆ: ಶ್ರೀ ಅಂತರಘಟ್ಟಮ್ಮ ಹಬ್ಬದ ಹಿನ್ನೆಲೆಯಲ್ಲಿ ಪಟ್ಟಣ ಹೊರ ವಲಯದ ಲಕ್ಕವಳ್ಳಿ ಕ್ರಾಸ್ ಬಳಿ ಮೈದಾನದಲ್ಲಿ ಶ್ರೀ ಚೌಡೇಶ್ವರಿ ಯುವಕ ಸಂಘದಿಂದ ಏರ್ಪಡಿಸಿದ್ದ ರಾಜ್ಯ ಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ತೇಗೂರಿನ ಸಿಪಾಯಿ-ಏಳುಕೋಟಿ ಎತ್ತಿನ ಜೋಡಿ ಪ್ರಥಮ ಬಹುಮಾನ 1 ಲಕ್ಷ ರೂಪಾಯಿ ಮತ್ತು ಆಕರ್ಷಕ ಟ್ರೋಫಿ ಪಡೆದವು.

    ದ್ವಿತೀಯ ಬಹುಮಾನ 70 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ಬೀರೂರಿನ ಎಂ.ಡಿ ಸುಲ್ತಾನ್-ಅಟ್ಯಾಕ್ ಜಯಸೂರ್ಯ ಜೋಡೆತ್ತುಗಳ ಪಾಲಾಯಿತು. ತೃತೀಯ ಬಹುಮಾನ 50 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ಬೀರೂರಿನ ಬರ್ಷಾ-ಯುವ ಜೋಡೆತ್ತಿಗೆ ಲಭಿಸಿದರೆ, ಚತುರ್ಥ ಬಹುಮಾನ 30 ಸಾವಿರ ರೂ. ಮತ್ತು ಆಕರ್ಷಕ ಟ್ರೋಫಿ ಚಿಕ್ಕಮಗಳೂರಿನ ಕೊಹ್ಲಿ-ನಾಗ್ಯಾ ಜೋಡೆತ್ತುಗಳು ಗಳಿಸಿದವು.
    ಶನಿವಾರ ಸಂಜೆ ಆರಂಭವಾಗಿದ್ದ ರಾಜ್ಯಮಟ್ಟದ ಜೋಡೆತ್ತಿನ ಗಾಡಿ ಸ್ಪರ್ಧೆಯಲ್ಲಿ ರಾಜ್ಯದ ಹಲವೆಡೆಯಿಂದ ಆಗಮಿಸಿದ್ದ ಜೋಡೆತ್ತುಗಳು ಪ್ರಶಸ್ತಿಯ ಅಂತಿಮ ಸುತ್ತಿನಲ್ಲಿ ತೀವ್ರ ಪೈಪೋಟಿ ನಡೆಸಿದವು. ಭಾನುವಾರ ಬೆಳಗಿನ ಜಾವ ಸ್ಪರ್ಧೆ ಮುಕ್ತಾಯಗೊಂಡಿತು.
    ಬೆಳಗಿನ ಜಾವದವರೆಗೆ ಸ್ಪರ್ಧೆ ನೋಡಲು ಮೈದಾನದಲ್ಲಿ ಜನ ಕಿಕ್ಕಿರಿದಿದ್ದರು. ಜೋಡೆತ್ತುಗಳು ಓಡುವಾಗ ಜನರು ಶಿಳ್ಳೆ, ಕೇಕೆ ಹಾಕುವ ಮೂಲಕ ಉತ್ತೇಜಿಸಿ ಸಂಭ್ರಮಿಸಿದರು.
    ಸೆನ್ಸಾರ್ ಪಾಯಿಂಟ್ ಲೆಕ್ಕಾಚಾರದಲ್ಲಿ ರಾಜ್ಯ ಮಟ್ಟದ ಎತ್ತಿನ ಗಾಡಿ ಸ್ಪರ್ಧೆಯಲ್ಲಿ ಜಯಭೇರಿ ಬಾರಿಸಿದ ಜೋಡೆತ್ತುಗಳ ಮಾಲೀಕರಿಗೆ ಶ್ರೀ ಚೌಡೇಶ್ವರಿ ಯುವಕ ಸಂಘದ ಅಧ್ಯಕ್ಷ ರಜಿತ್ ಕುರಿಯಾ ಬಹುಮಾನ ವಿತರಿಸಿದರು.
    ಶ್ರೀ ಚೌಡೇಶ್ವರಿ ಯುವಕ ಸಂಘದ ಪದಾಧಿಕಾರಿಗಳಾದ ರವಿ ಮಾರಿಗಟ್ಟೆ, ಹೇಮಂತ್, ಮೈಲಾರಿ, ಶರತ್, ಮಂಜುನಾಥ್, ಪ್ರಕಾಶ್, ರಘು, ಸಚಿನ್, ದರ್ಶನ್, ಸಂಜಯ್, ಹರೀಶ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts