More

    ಸಚಿವ ತಂಗಡಗಿ ತಾಯಿಯನ್ನು ಅಪಮಾನಿಸಿರುವ ಸಿ.ಟಿ.ರವಿ ಕ್ಷಮೆ ಕೇಳಬೇಕು

    ಹಾಸನ: ಸಚಿವ ಶಿವರಾಜ್ ಎಸ್. ತಂಗಡಗಿಯವರ ತಾಯಿಯನ್ನು ಅಪಮಾನ ಮಾಡಿರುವ ಬಿಜೆಪಿಯ ಮಾಜಿ ಶಾಸಕ ಸಿ.ಟಿ. ರವಿ ಕೂಡಲೇ ಕ್ಷಮೆ ಕೇಳಬೇಕು. ಇಲ್ಲವಾದ್ರೆ ಜಿಲ್ಲೆಗೆ ಬಂದ ಸಂದರ್ಭದಲ್ಲಿ ಕಪ್ಪು ಪಟ್ಟಿ ಪ್ರದರ್ಶಿಸಿ ಪ್ರತಿಭಟಿಸಲಾಗುವುದು ಎಂದು ಅಖಿಲ ಕರ್ನಾಟಕ ಭೋವಿ ಮಹಾಸಭಾದ ರಾಜ್ಯಾಧ್ಯಕ್ಷ ಎಚ್. ಮಂಜಪ್ಪ ಎಚ್ಚರಿಸಿದರು.
    ತಾಯಿ ಶಾರದ ಲೋಕ ಪೂಜಿತೆ ಜ್ಞಾನದಾತೇ ನಮೋ ಸ್ತುತೆ ಎಂಬಂತೆ ಭಾರತದಲ್ಲಿ ತಾಯಿಗೆ ಪವಿತ್ರವಾದ ಸ್ಥಾನವಿದೆ.ಆದರೆ ಬಿಜೆಪಿಯವರು ಮಾಹಿಳೆಗೆ ಕೊಡುವ ಗೌರವ ಅವರ ಸಂಸ್ಕೃತಿ ತಿಳಿಯುತ್ತಾದೆ.ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಚಿವ ಶಿವರಾಜ್ ತಂಗಡಗಿಯವರ ಅಪಮಾನ ಮಾಡಿವ ಮೂಲಕ ಇಡೀ ಹೆಣ್ಣು ಕುಲಕ್ಕೆ ಪಮಾನ ಮಾಡಿದ್ದಾರೆ ಅವರು ಎಲ್ಲಾ ಮಹಿಳೆಯರನ್ನು ಕೂಡಲೇ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು.
    ರಾಜಕೀಯ ವ್ಯವಸ್ಥೆಯಲ್ಲಿ ರಾಜಕಾರಣಿಗಳು ಟೀಕೆ ಮಾಡುವುದು ಸರ್ವ ಸಾಮಾನ್ಯ. ಟೀಕೆ ಜೊತೆಯಲ್ಲಿ ಆರೋಪ- ಪ್ರತ್ಯಾರೋಪ ಮಾಡುವುದು ನಿರಂತರವಾಗಿ ನಡೆಯುತ್ತದೆ.ಆದರೆ ಹೆಣ್ಣು ಸಂಕುಲವನ್ನು ಕೀಳಾಗಿ ಕಂಡು ಅವಮಾನಿಸಿರುವುದು ಖಂಡನಿಯ, ಬಿಜೆಪಿ ನಾಯಕ ಸಿ.ಟಿ. ರವಿಯವರ ಬಾಯಿಯಿಂದ ಇಂತಹ ಕೆಟ್ಟ ಪದಗಳನ್ನು ಬಳಸಿರುವುದು ಅವರ ಪಕ್ಷಕ್ಕೆ ಮತ್ತು ಅವರ ರಾಜಕೀಯ ವ್ಯಕ್ತಿತ್ವಕ್ಕೆ ಶೋಭೆ ತರುವಂತಹದ್ದಲ್ಲ. ಭಾರತಾಂಭೆಯನ್ನು ಅವಮಾನಿಸಿರುವ ಹೀನಾ ಮನಸ್ಥಿತಿಯ ಸಿ.ಟಿ. ರವಿಯವರನ್ನು ಗಡಿಪಾರು ಮಾಡುವುದಕ್ಕಿಂತ ದೇಶದ ಗಡಿಯನ್ನೇ ದಾಟಿಸುವುದು ಉತ್ತಮ. ಇವರಿಗೆ ಪಾಠ ಕಲಿಸಿದರೆ ಮುಂದೆ ತಾಯಿಯ, ಭೂತಾಯಿಯ ವಿರುದ್ಧ ಮಾತನಾಡುವ ವ್ಯಕ್ತಿಗಳು ಎಚ್ಚರವಹಿಸುತ್ತಾರೆ ಎಂದರು.
    ಪತ್ರಿಕಾಗೋಷ್ಠಿಯಲ್ಲಿ ಭೋವಿ ಸಮಾಜದ ಜಿಲ್ಲಾಧ್ಯಕ್ಷ ಸಂದೀಪ್, ಭೋವಿ ಪರಿಷತ್ ಯುವ ಅಧ್ಯಕ್ಷ ಕೇಶವ ಮೂರ್ತಿ, ಸಮಾಜದ ಮುಖಂಡ ಅಣ್ಣಪ್ಪ, ಸೋಮಶೇಖರ್, ರವಿಕುಮಾರ್ ಇತರರು ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts