More

    ಸಂಶೋಧನೆಗೆ ವಸ್ತು ಪ್ರದರ್ಶನ ಸಹಕಾರಿ

    ಚಿತ್ರದುರ್ಗ: ವಿಜ್ಞಾನ ವಸ್ತು ಪ್ರದರ್ಶನ ಹೊಸ ಆವಿಷ್ಕಾರ, ಸಂಶೋಧನೆ ಕಡೆಗೆ ಮಕ್ಕಳಲ್ಲಿ ಆಸಕ್ತಿ ಮೂಡಿಸುತ್ತದೆ ಎಂದು ಚಳ್ಳಕೆರೆಯ ಕುದಾಪುರ ಸಮೀಪವಿರುವ ಡಿಆರ್‌ಡಿಒದ ವಿಜ್ಞಾನಿ ಡಾ. ಆರ್.ಮಹೇಶ್‌ಬಾಬು ತಿಳಿಸಿದರು.

    ದೇವರಾಜ ಅರಸು ಶಿಕ್ಷಣ ಸಂಸ್ಥೆಯಲ್ಲಿ 5ರಿಂದ 12ನೇ ತರಗತಿಯ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಿಜ್ಞಾನ ವಸ್ತು ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

    ಈ ಸಂಸ್ಥೆ ವಿವಿಧ ಶಾಲೆಯ ಮಕ್ಕಳಿಗೆ ಪ್ರದರ್ಶನದಲ್ಲಿ ಭಾಗವಹಿಸಲು ವೇದಿಕೆ ಕಲ್ಪಿಸಿದೆ. ಇದು ಅವರಲ್ಲಿನ ಪ್ರತಿಭೆ ಹೊರಹೊಮ್ಮಿಸಲು ಸಹಕಾರಿಯಾಗಿದೆ. 158 ಬಗೆಯ ವಿಜ್ಞಾನ ಮಾದರಿಗಳನ್ನು ವಿದ್ಯಾರ್ಥಿಗಳು ಸಿದ್ಧಪಡಿಸಿರುವುದು ಸುಲಭದ ಮಾತಲ್ಲ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

    ಸಂಸ್ಥೆಯ ಅಕಾಡೆಮಿಕ್ ಕೋ-ಆರ್ಡಿನೇಟರ್ ಆರ್.ಎಸ್.ರಾಜು ಮಾತನಾಡಿ, 15 ದಿನಗಳ ಹಿಂದೆ ನಮ್ಮ ಸಂಸ್ಥೆಯಲ್ಲಿ ಮಕ್ಕಳಿಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆ ಹಮ್ಮಿಕೊಳ್ಳಲಾಗಿತ್ತು. ಇದು ಇಷ್ಟಕ್ಕೆ
    ನಿಲ್ಲಬಾರದೆಂಬ ಸಂಸ್ಥೆಯ ಆಡಳಿತ ಮಂಡಳಿ ಆಸೆಯಂತೆ ವಿಜ್ಞಾನ ವಸ್ತು ಪ್ರದರ್ಶನ ಆಯೋಜಿಸಲಾಗಿದೆ ಎಂದು ಹೇಳಿದರು.

    ಪ್ರೌಢಶಾಲೆಯ ನಿವೃತ್ತ ಮುಖ್ಯಶಿಕ್ಷಕ ಎಚ್.ಎಸ್.ಟಿ.ಸ್ವಾಮಿ ಮಾತನಾಡಿ, ಪ್ರಸ್ತುತ ವಿಜ್ಞಾನ ಯುಗದಲ್ಲಿ ಮಕ್ಕಳು ವೈಜ್ಞಾನಿಕ ಮನೋಭಾವ ಬೆಳೆಸಿಕೊಳ್ಳಬೇಕು. ಇಂತಹ ವಸ್ತು ಪ್ರದರ್ಶನ ವಿಜ್ಞಾನದ ಕಡೆ ಕುತೂಹಲ ಮೂಡಿಸುತ್ತದೆ. ವೈವಿಧ್ಯಮಯ ಚಟುವಟಿಕೆಗೂ ನೆರವಾಗಲಿದೆ ಎಂದರು.

    ಡಿಆರ್‌ಡಿಒ ವಿಜ್ಞಾನಿ ಡಾ.ಸಲೀಂ ಸಜಾದ್, ಸಂಸ್ಥೆಯ ಆಡಳಿತಾಧಿಕಾರಿ ಎಚ್.ಚಂದ್ರಕಲಾ, ನಿವೃತ್ತ ಪ್ರಾಂಶುಪಾಲ ಡಾ.ಇ.ರುದ್ರಮುನಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts