More

    ಸಂಬಳ ಇಲ್ಲದೆ ರೈಲ್ವೆ ಗುತ್ತಿಗೆ ನೌಕರರ ಪರದಾಟ

    ಹುಬ್ಬಳ್ಳಿ: ಸಂಬಳವಿಲ್ಲದೆ ನೈಋತ್ಯ ರೈಲ್ವೆ ವಲಯ ಹುಬ್ಬಳ್ಳಿ ವಿಭಾಗದ ಎಸಿ ಬೋಗಿ ನಿರ್ವಹಣೆ ಕೆಲಸ ಮಾಡುವ 150 ಗುತ್ತಿಗೆ ನೌಕರರು ಪರದಾಡುತ್ತಿದ್ದಾರೆ.

    ಲಾಕ್​ಡೌನ್ ಸಮಯದಲ್ಲಿ ಗುತ್ತಿಗೆ ನೌಕರರನ್ನು ಕೆಲಸದಿಂದ ತೆಗೆಯಬಾರದು, ಸಂಬಳ ಕಡಿತಗೊಳಿಸ ಬಾರದು, ಸಕಾಲಕ್ಕೆ ಸಂಬಳ ನೀಡುವಂತೆ ಸ್ವತಃ ನೈಋತ್ಯ ರೈಲ್ವೆ ವಲಯದ ಮೈಸೂರು ವಿಭಾಗ ಸೂಚಿಸಿದೆ. ಮೈಸೂರು, ಬೆಂಗಳೂರು ವಿಭಾಗದ ಗುತ್ತಿಗೆ ನೌಕರರಿಗೆ 3 ತಿಂಗಳ ಸಂಬಳ ಮುಂಚಿತವಾಗಿ ನೀಡಲಾಗಿದೆ. ಹುಬ್ಬಳ್ಳಿ ವಿಭಾಗದ ಗುತ್ತಿಗೆ ನೌಕರರು ಸಂಬಳವಿಲ್ಲದೆ ಕಷ್ಟ ಅನುಭವಿಸುತ್ತಿದ್ದಾರೆ. ಮುಂಬೈ ಮೂಲದ ಪೀಯೂಷ ಟ್ರೇಡರ್ಸ್​ನ ಸುಧೀರ ಗುಪ್ತಾ ಎಸಿ ಬೋಗಿ ನಿರ್ವಹಣೆ ಕೆಲಸ ಗುತ್ತಿಗೆ ಪಡೆದಿದ್ದಾರೆ. ಶೇ. 70ರಷ್ಟು ಹಣವನ್ನು ರೈಲ್ವೆ ಇಲಾಖೆ ನೀಡಬೇಕು. ಇಲಾಖೆಯಿಂದ ಹಣ ಬಂದ ಬಳಿಕ ಸಂಬಳ ನೀಡುವುದಾಗಿ ಗುತ್ತಿಗೆದಾರ ಹೇಳುತ್ತಿದ್ದಾರೆ. ನೈಋತ್ಯ ರೈಲ್ವೆ ವಲಯದ ಮುಖ್ಯ ಸಾರ್ವಜನಿಕ ಸಂಪರ್ಕ ಅಧಿಕಾರಿ ಇ. ವಿಜಯಾ ಪ್ರತಿಕ್ರಿಯಿಸಿ, ಲಾಕ್​ಡೌನ್​ನಿಂದಾಗಿ ರೈಲ್ವೆ ಕಚೇರಿಗಳು ಕಾರ್ಯ ಸ್ಥಗಿತಗೊಳಿಸಿದ್ದರಿಂದ ಗುತ್ತಿಗೆ ನೌಕರರಿಗೆ ಸಂಬಳ ನೀಡಿರಲಿಲ್ಲ. ಕೆಲಸದ ಅವಧಿಯ ಮುಂದಿನ 3 ದಿನದಲ್ಲಿ ಗುತ್ತಿಗೆ ನೌಕರರ ಬ್ಯಾಂಕ್ ಖಾತೆಗೆ ಸಂಬಳ ಜಮೆಯಾಗಲಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts