More

    ಸಂಗೀತ ಪರೀಕ್ಷೆ ಆಯೋಜನೆಗೆ ಸಿದ್ಧ -ಗಂಗೂಬಾಯಿ ಹಾನಗಲ್ ವಿವಿ ಕುಲಪತಿ ಪ್ರೊ.ವಿ.ನಾಗೇಶ್ ಬೆಟ್ಟಕೋಟೆ ಹೇಳಿಕೆ 

    ದಾವಣಗೆರೆ: ಸಂಗೀತದಲ್ಲಿ ವಿದ್ವತ್, ಸೀನಿಯರ್, ಜೂನಿಯರ್ ಪರೀಕ್ಷೆಗಳನ್ನು ರಾಜ್ಯವ್ಯಾಪಿ ನಡೆಸಲು ಸಿದ್ಧ್ದರಿರುವುದಾಗಿ ಕರ್ನಾಟಕ ಡಾ.ಗಂಗೂಬಾಯಿ ಹಾನಗಲ್ ಸಂಗೀತ ಮತ್ತು ಪ್ರದರ್ಶಕ ಕಲೆಗಳ ವಿಶ್ವವಿದ್ಯಾಲಯ ಕುಲಪತಿ ಪ್ರೊ.ವಿ.ನಾಗೇಶ್ ಬೆಟ್ಟಕೋಟೆ ತಿಳಿಸಿದರು.
    ನಗರದ ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಯಿಂದ ಕುವೆಂಪು ಕನ್ನಡ ಭವನದಲ್ಲಿ ಭಾನುವಾರ ಆಯೋಜಿಸಿದ್ದ ಮಹತೀ ನಿನಾದ ಸಂಗೀತ ಪದವಿ ತರಗತಿಗಳಿಗೆ ಚಾಲನೆ ನೀಡಿ ಮಾತನಾಡಿದರು.
    ಏಪ್ರಿಲ್-ಮೇ ತಿಂಗಳಲ್ಲಿ ಪರೀಕ್ಷೆ ನಡೆಸುವಂತೆ ಮಂಗಳೂರು, ಹುಬ್ಬಳ್ಳಿ, ಧಾರವಾಡ, ಬಳ್ಳಾರಿ, ಹೊಸಪೇಟೆ ಭಾಗಗಳ ಕಲಾವಿದರು ಸಂವಾದದಲ್ಲಿ ಸಲಹೆ ನೀಡಿದ್ದಾರೆ. ಅಕಾಡೆಮಿಕ್ ಹಾಗೂ ಸಿಂಡಿಕೇಟ್ ಸಭೆಗಳಲ್ಲಿ ಈ ಬಗ್ಗೆ ತೀರ್ಮಾನಿಸಲಾಗುವುದು ಎಂದು ಹೇಳಿದರು.
    ವಿವಿ ನಿಯಮಗಳ ಅನ್ವಯ ಪರೀಕ್ಷೆಗಳನ್ನು ನಡೆಸಬೇಕಿದೆ. ಸಿಂಡಿಕೇಟ್ ಸದಸ್ಯರೂ ಕಲಾವಿದರಾಗಿರುವ ಕಾರಣಕ್ಕೆ ವಿವಿಗೆ ಬಲ ಬಂದಿದೆ. ಮುಂಬರುವ ದಿನಗಳಲ್ಲಿ ಕಲೆಗಳಲ್ಲಿ ಪದವಿ ಪಡೆದವರಿಗೆ ಉದ್ಯೋಗಕ್ಕೆ ಪೂರಕವಾಗುವ ಪದವಿ ಪ್ರಮಾಣಪತ್ರಗಳನ್ನು ವಿಶ್ವವಿದ್ಯಾಲಯ ನೀಡಲಿದೆ. ಇವಿದ್ದರೆ ವಿದೇಶಗಳಲ್ಲೂ ಮಾನ್ಯತೆ ಸಿಗಲಿದೆ ಎಂದು ತಿಳಿಸಿದರು.
    ಹಿಂದಿನ ಸರ್ಕಾರದ ಅವಧಿಯಲ್ಲಿ ಎರಡು ವರ್ಷಗಳ ಹೋರಾಟದ ಫಲವಾಗಿ ಅಧಿನಿಯಮ ಮಂಜೂರಾಗಿದೆ. 10 ಸಂಸ್ಥೆಗಳು ನಮ್ಮ ವಿಶ್ವವಿದ್ಯಾಲಯದೊಂದಿಗೆ ಒಡಂಬಡಿಕೆ ಮಾಡಿಕೊಂಡಿವೆ. ಅವುಗಳಲ್ಲಿ ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಯೂ ಒಂದಾಗಿದೆ. ಇತರೆ 20 ಸಂಸ್ಥೆಗಳು ಒಪ್ಪಂದ ಮಾಡಿಕೊಳ್ಳಲು ಸಿದ್ಧವಾಗಿವೆ. ಶೀಘ್ರದಲ್ಲೇ ಗಂಗೂಬಾಯಿ ಹಾನಗಲ್ ವಿವಿ ಎತ್ತರಕ್ಕೆ ಬೆಳೆದು ನಿಲ್ಲಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
    ಸಂಗೀತ, ಸಾಹಿತ್ಯ ಕಲೆಗಳು ಸಮಾಜದ ಮೂಲಬೇರು. ಅವನ್ನು ನಮ್ಮೊಂದಿಗೆ ತೆಗೆದುಕೊಂಡು ಹೋಗಬೇಕಿದ್ದು, ಶಿಕ್ಷಣ ಪದ್ಧತಿಯಲ್ಲಿ ಅಳವಡಿಸಬೇಕಿದೆ. ಇಲ್ಲವಾದಲ್ಲಿ ಈ ಕಲೆಗಳು ಹೆಚ್ಚು ಕಾಲ ಉಳಿಯುವುದಿಲ್ಲ. ಮುಂದಿನ ಪೀಳಿಗೆಗೆ ಉಳಿಸುವ ದೃಷ್ಟಿಯಿಂದ ಇವುಗಳನ್ನು ಶೈಕ್ಷಣಿಕವಾಗಿ ಅಳವಡಿಸಬೇಕು. ವಿದ್ಯಾರ್ಥಿಗಳ ಬರವಣಿಗೆ, ವಸ್ತು ಪ್ರದರ್ಶನಗಳನ್ನು ಡಿಜಿಟಲ್ ರೆಕಾರ್ಡಿಂಗ್ ಮಾಡುವುದು ಅತ್ಯಗತ್ಯ ಎಂದರು.
    ಕನ್ನಡ ಜಾನಪದ ಪರಿಷತ್ತಿನ ರಾಜ್ಯಾಧ್ಯಕ್ಷ ಎಸ್.ಬಾಲಾಜಿ, ಮಹತೀ ಸಾಂಸ್ಕೃತಿಕ ಕಲಾ ಸಂಸ್ಥೆಯ ಅಧ್ಯಕ್ಷ ಡಾ.ಕೆ.ಎಸ್. ಮುಕುಂದರಾವ್, ಆಕಾಶವಾಣಿ ಕಲಾವಿದರಾದ ಮೈಸೂರು ಎಂ.ಗುರುರಾಜ್, ರವಿಶಂಕರ್, ಸಂಸ್ಥೆಯ ಕಾರ್ಯದರ್ಶಿ ಎಂ.ದ್ವಾರಕೀಶ್ ಇದ್ದರು. ನಂತರ ಸಂಗೀತ ಕಾರ್ಯಕ್ರಮ ನಡೆಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts