More

    ಶ್ರೀ ಲಕ್ಷ್ಮೀನರಸಿಂಹಸ್ವಾಮಿ ರಥೋತ್ಸವ

    ಹೊಳೆನರಸೀಪುರ: ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ಬ್ರಹ್ಮರಥೋತ್ಸವ ಮಂಗಳವಾರ ಸಾವಿರಾರು ಭಕ್ತರ ಸಮ್ಮುಖದಲ್ಲಿ ಜರುಗಿತು.

    ಬಣ್ಣ ಬಣ್ಣದ ವಸ್ತ್ರ, ವಿವಿಧ ಪುಷ್ಪಾಲಂಕಾರಗಳಿಂದ ಕಂಗೊಳಿಸುತ್ತಿದ್ದ ಬ್ರಹ್ಮರಥ ರಥ ಬೀದಿಯಲ್ಲಿ ಒಂದು ಸುತ್ತು ಸಂಚರಿಸಿ ಮೂಲಸ್ಥಾನ ಸೇರಿತು. ಬ್ರಹ್ಮರಥದ ಮೇಲೆ ವಿರಾಜಮಾನರಾಗಿದ್ದ ಗೋವಿಂದನಿಗೆ ಭಕ್ತರು ಹಣ್ಣು ದವನ ತೂರಿದರು. ಜಾತ್ರಾ ಮಹೋತ್ಸವದ ಪ್ರಯುಕ್ತ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯವನ್ನು ತಳಿರು, ತೋರಣ, ಬಗೆ ಬಗೆಯ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ರಥಾರೋಹಣ ಬೆಳಗ್ಗೆ 9.45ಕ್ಕೆ ವಿಧ್ಯುಕ್ತವಾಗಿ ಆರಂಭಗೊಂಡು ಮಧ್ಯಾಹ್ನ 12 ಗಂಟೆ ಸುಮಾರಿಗೆ ಮೂಲಕ ಸ್ಥಾನಕ್ಕೆ ಬಂದು ಸೇರಿತು.

    ದರ್ಶನಕ್ಕೆ ಸಾಲು ಗಟ್ಟಿದ ಭಕ್ತರು: ಸೋಮವಾರ ರಾತ್ರಿಯಿಂದಲೇ ಭಕ್ತರು ದೇವರ ದರ್ಶನ ಪಡೆದರು. ಈ ಮಧ್ಯೆ ಹೋಳಿ ಹಬ್ಬದ ಹೆಸರಿನಲ್ಲಿ ಯುವಕರ ತಂಡ ಬಣ್ಣ ಎರಚುವುದು ಮತ್ತು ಕೋಳಿ ಮೊಟ್ಟೆಯನ್ನು ಕಂಡ ಕಂಡವರ ಮೇಲೆ ಎಸೆದು ರಥೋತ್ಸವ ಸುಗಮವಾಗಿ ನಡೆಸಲು ಅಡ್ಡಿಯಾದರು. ಓಕುಳಿ ಹಾಕುವವರ ಯುವಕರ ತಂಡಗಳಿಂದ ಮಹಿಳೆಯರು ಕಿರಿಕಿರಿ ಅನುಭವಿಸಿದರು.

    ಶಾಸಕರ ಕುಟುಂಬದಿಂದ ಸೇವಾರ್ಥ: ರಥೋತ್ಸವದ ದಿನ ಪುಷ್ಪಾಲಂಕಾರ ಸೇವೆ ಮತ್ತು ದರ್ಶನಕ್ಕೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಣೆ ಜವಾಬ್ದಾರಿಯನ್ನು ಶಾಸಕ ಎಚ್.ಡಿ.ರೇವಣ್ಣ ಅವರ ಕುಟುಂಬ ವಹಿಸಿಕೊಂಡಿತ್ತು. ಸಂಸದ ಪ್ರಜ್ವಲ್ ರೇವಣ್ಣ ಸ್ಥಳದಲ್ಲಿ ಹಾಜರಿದ್ದು, ಭಕ್ತರಿಗೆ ಪ್ರಸಾದ ವಿತರಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts