More

    ಶ್ರೀ ಚನ್ನಬಸವರ ಸ್ಮರಣೆಯೇ ಉದಯ

    ಭಾಲ್ಕಿ: ನಮ್ಮ ಸದ್ಗುರುಗಳ ಕುರಿತು ಇದುವರೆಗೆ ವಿವಿಧ ಲೇಖಕರಿಂದ ಐವತ್ತು ಕೃತಿ ಪ್ರಕಟವಾಗಿವೆ. ಅವುಗಳಲ್ಲಿ ಈ ಕೃತಿ ವಿಶೇಷವಾಗಿದೆ. ಡಾ. ಸೋಮನಾಥ ಯಾಳವಾರ ಅವರು ಕಲ್ಯಾಣ ಕರ್ನಾಟಕ ಭಾಗದ ಪ್ರತಿಭಾನ್ವಿತ ಸಾಹಿತಿಗಳಲ್ಲಿ ಒಬ್ಬರು ಎಂದು ಹಿರೇಮಠ ಸಂಸ್ಥಾನದ ಶ್ರೀ ಡಾ.ಬಸವಲಿಂಗ ಪಟ್ಟದ್ದೇವರು ಹೇಳಿದರು.
    ಭಾಲ್ಕಿಯಲ್ಲಿ ಲಿಂ.ಡಾ. ಚನ್ನಬಸವ ಪಟ್ಟದ್ದೇವರ ಸಮಗ್ರ ಚರಿತ್ರೆ 1311 ತ್ರಿಪದಿಗಳು ಹೊಂದಿರುವ ಡಾ.ಸೋಮನಾಥ ಯಾಳವಾರ ರಚಿಸಿರುವ `ದನಿ ಎತ್ತಿ ಹಾಡೇನ ಶ್ರೀ ಚನ್ನಬಸವನ’ ಗ್ರಂಥ ಲೋಕಾರ್ಪಣೆಯಲ್ಲಿ ಮಾಡಿ ಮಾತನಾಡಿದ ಅವರು, ಯಾಳವಾರ ಅವರು ಶರಣ ಸಾಹಿತ್ಯಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಶ್ರೀ ಚನ್ನಬಸವ ಪಟ್ಟದ್ದೇವರ ಸಮಗ್ರ ಜೀವನ ಹಾಗೂ ಕಾರ್ಯವನ್ನು ತ್ರಿಪದಿಗಳಲ್ಲಿ ಬರೆದಿದ್ದೆ ಒಂದು ವಿಶೇಷ ಎಂದರು.
    ಪೂಜ್ಯರು ಈ ನಾಡಿನ ಅಭಿವೃದ್ಧಿಗೆ ಭದ್ರ ಬುನಾದಿ ಹಾಕಿದ ಮಹಾ ಚೇತನರು. ಅವರ ಸ್ಮರಣೆಯೇ ನಮಗೆ ಉದಯ, ಅವರ ಮರಹು ನಮಗೆ ಅಸ್ತಮಾನ. ಈ ನಿಟ್ಟಿನಲ್ಲಿ ಪೂಜ್ಯರ ಸೇವಾ ಕಾರ್ಯಗಳನ್ನು ಸ್ಮರಿಸುವ ಡಾ.ಯಾಳವಾರ ಅವರು ಈ ಗ್ರಂಥದಲ್ಲಿ ಒಂದು ಬೆಳಕನ್ನು ಕೊಟ್ಟಿದ್ದಾರೆ. ಡಾ.ಯಾಳವಾರ ಅವರ ಬರಹ ಮತ್ತು ಬದುಕು ಒಂದೆ ಆಗಿರುವುದರಿಂದ ನಮಗೆ ಹೆಮ್ಮೆ ಅನಿಸುತ್ತದೆ ಎಂದು ಬಣ್ಣಿಸಿದರು.
    ಕೃತಿಯ ಕರ್ತು ಡಾ.ಸೋಮನಾಥ ಯಾಳವಾರ ಮಾತನಾಡಿ, ಕೃತಿ ರಚನೆಗೆ ಸದ್ಗುರುಗಳ ಕೃಪೆಯೇ ಕಾರಣ. ಅಂತರಾಷ್ಟ್ರೀಯ ಲಿಂಗಾಯತ ಧರ್ಮಕೇಂದ್ರ ಬಸವಕಲ್ಯಾಣ ಅವರು ಪ್ರಕಾಶನ ಮಾಡಿದ್ದಾರೆ. ಗ್ರಂಥ ಮುದ್ರಣಕ್ಕೆ ದಾಸೋಹಗೈದ ಚಂದ್ರಕಾಂತ ಮಿರ್ಚಿ ಕಮಲನಗರ ಪರಿವಾರದವರಿಗೆ ಅಭಿನಂದನೆ ಸಲ್ಲಿಸಿದರು.
    ಶ್ರೀ ಗುರುಬಸವ ಪಟ್ಟದ್ದೇವರು ನೇತೃತ್ವ ವಹಿಸಿದ್ದರು. ಶ್ರೀ ಮಹಾಲಿಂಗ ಸ್ವಾಮೀಜಿ, ಶ್ರೀ ಶಿವಾನಂದ ಸ್ವಾಮೀಜಿ, ಶ್ರೀ ನಿರಂಜನ ಸ್ವಾಮೀಜಿ, ಶ್ರೀ ಬಸವಲಿಂಗ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು. ಕಲ್ಲಪ್ಪ ಹೂಗಾರ, ಮೃತ್ಯುಂಜಯ ಯಾಳವಾರ, ರಾಜು ಜುಬರೆ, ರಮೇಶ ಪಟ್ನೆ, ಶಾಂತಯ್ಯ ಸ್ವಾಮಿ ಇತರರಿದ್ದರು. ಉಷಾ ಚಂದ್ರಕಾಂತ ಮಿರ್ಚಿ ವಂದಿಸಿದರು. ವೀರಣ್ಣ ಕುಂಬಾರ ವಚನ ಪ್ರಾರ್ಥನೆ ಮಾಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts