More

    ಶ್ರೀನಿವಾಸಪುರದ ಡಾ.ಜಿ.ಗೌತಮ್ ಯು.ಪಿ.ಎಸ್.ಸಿ.ಯಲ್ಲಿ ೯೩೯ನೇ ರ‍್ಯಾಂಕ್

    ವಿಜಯವಾಣಿ ಸುದ್ದಿಜಾಲ ಕೋಲಾರ
    ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲ್ಲೂಕಿನ ಗೋಪಾಲಪುರ ಗ್ರಾಮದ ಡಾ.ಜಿ.ಗೌತಮ್ ೨೦೨೩ ಮತ್ತು ೨೦೨೪ನೇ ಸಾಲಿನ ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ೯೩೯ನೇ ರ‍್ಯಾಂಕ್ ಗಳಿಸಿ, ತೇರ್ಗಡೆಯಾಗಿದ್ದಾನೆ.

    ಶ್ರೀನಿವಾಸಪುರ ಪಟ್ಟಣದಲ್ಲಿ ವಾಸವಿರುವ ಗೋಪಾಲಪುರದ ಜಯಲಕ್ಷö್ಮ ಮತ್ತು ಜಿ.ಎಂ.ಗAಗಪ್ಪನವರ ೨ನೇ ಪುತ್ರರಾಗಿರುವ ಜಿ.ಗೌತಮ್ ಓದಿದ್ದು ವೈದ್ಯಕೀಯ, ಆಯ್ಕೆ ಮಾಡಿಕೊಂಡಿದ್ದು ಐ.ಎ.ಎಸ್.

    ತಂದೆ ಗಂಗಪ್ಪ ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಪರಿಶಿಷ್ಟ ಜಾತಿ ಕುಟುಂಬದಿAದ ಹುಟ್ಟಿದ ಗಂಗಪ್ಪ ಕಷ್ಟ ದಿನಗಳ ನಡುವೆಯೇ ಉದ್ಯೋಗವನ್ನು ಆಯ್ಕೆ ಮಾಡಿಕೊಂಡು ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಶ್ರೀನಿವಾಸಪುರ ಪಟ್ಟಣದಲ್ಲಿ ವಾಸ ಮಾಡುತ್ತಿದ್ದಾರೆ. ಹಿರಿಯ ಪುತ್ರ ಮಿಥುನ್ ಕೇಂದ್ರ ಸರ್ಕಾರದ ನಬಾರ್ಡ್ ಉದ್ಯೋಗದಲ್ಲಿದ್ದು, ಅಣ್ಣನ ಆಶ್ರಯದಲ್ಲಿ ಯಾವುದೇ ಕೋಚಿಂಗ್ ಪಡೆಯದೆ ಅಣ್ಣನ ಸಹಕಾರದಿಂದ ಯು.ಪಿ.ಎಸ್.ಸಿ. ಪರೀಕ್ಷೆ ತೆಗೆದುಕೊಂಡು ಮನೆಯಲ್ಲಿಯೇ ಓದಿ, ೯೩೯ನೇ ರ‍್ಯಾಂಕ್ ಗಳಿಸಿದ್ದಾರೆ.

    ಶ್ರೀನಿವಾಸಪುರ ಪಟ್ಟಣದ ಎಸ್.ಎಫ್.ಎಸ್. ಶಾಲೆಯಲ್ಲಿ ಎಸ್.ಎಸ್.ಎಲ್.ಸಿ. ಮುಗಿಸಿ, ನವೋದಯದಲ್ಲಿ ಪಿ.ಯು.ಸಿ. ತೇರ್ಗಡೆಯಾಗಿದ್ದು, ಎಂ.ಬಿ.ಬಿ.ಎಸ್.ಗೆ ಬೆಂಗಳೂರು ವೈದ್ಯಕೀಯ ಕಾಲೇಜಿನಲ್ಲಿ ಪ್ರವೇಶ ಪಡೆದು ವೈದ್ಯಕೀಯ ಪದವಿ ಮುಗಿಸಿ ಪ್ರಥಮ ಬಾರಿಗೆ ೨೦೨೩ ಮತ್ತು ೨೦೨೪ನೇ ಸಾಲಿನ ಯು.ಪಿ.ಎಸ್.ಸಿ. ಪರೀಕ್ಷೆ ತೆಗೆದುಕೊಂಡು ೯೩೯ನೇ ರ‍್ಯಾಂಕ್ ಗಳಿಸಿದ್ದಾರೆ.

    ಕೋಟ್
    ಮಗನ ಸಾಧನೆಗೆ ಹರ್ಷ ವ್ಯಕ್ತಪಡಿಸಿರುವ ತಂದೆ ಮತ್ತು ತಾಯಿ ಮೊದಲಿನಿಂದಲೂ ಐ.ಎ.ಎಸ್. ಮಾಡಬೇಕೆಂಬ ಛಲ ಅವನದಾಗಿತ್ತು. ಆದರೆ ನಾನು ಎಂ.ಬಿ.ಬಿ.ಎಸ್. ಮಾಡಲೇಬೇಕೆಂದು ಹೇಳಿದ್ದೆ. ನನ್ನ ಆಸೆಯೂ ಈಡೇರಿಸಿ ಅವನ ಆಸೆಯೂ ಈಡೇರಿಸಿಕೊಂಡಿದ್ದಾನೆ. ಬೆಂಗಳೂರಿನ ಅಣ್ಣನ ಮನೆಯಲ್ಲಿ ಇದ್ದುಕೊಂಡು ಯು.ಪಿ.ಎಸ್.ಸಿ. ಪರೀಕ್ಷೆಯನ್ನು ಎದುರಿಸಿದ್ದಾನೆ. ಹಾಗೂ ಯಾವುದೇ ಕೋಚಿಂಗ್ ಗೂ ಸಹ ಹೋಗದೆ ಮನೆಯಲ್ಲಿಯೇ ಯು.ಪಿ.ಎಸ್.ಸಿ. ಪರೀಕ್ಷಾ ಪುಸ್ತಕಗಳನ್ನು ಓದಿ ರ‍್ಯಾಂಕ್ ಗಳಿಸಿರುವುದಕ್ಕೆ ಸಂತಸ ತಂದಿದೆ ಎಂದರು.

    -ಜಿ.ಎನ್.ಗಂಗಪ್ಪ, ಜಿಲ್ಲಾ ಶಿಕ್ಷಣ ತರಬೇತಿ ಕೇಂದ್ರದ ಉಪನ್ಯಾಸಕರು, ಕೋಲಾರ.

    ಕೋಟ್
    ನಾನು ಗಳಿಸಿರುವ ರ‍್ಯಾಂಕ್ ಸದ್ಯಕ್ಕೆ ಸಮಾಧಾನ ತಂದಿದೆ. ಇನ್ನೂ ಹೆಚ್ಚಿನ ಅಂಕ ಬರಬೇಕಾಗಿತ್ತು. ಸರ್ಕಾರಿ ಸೇವೆಗೆ ದಾಖಲಾಗುತ್ತೇನೆ. ಅವಕಾಶ ನೋಡಿಕೊಂಡು ಮತ್ತೊಂದು ಪರೀಕ್ಷೆ ಬರೆಯುತ್ತೇನೆ. ಮೊದಲಿನಿಂದಲೂ ನನಗೆ ಸಾರ್ವಜನಿಕ ಸೇವೆ ಮಾಡಬೇಕೆಂಬ ಆಸಕ್ತಿ ಇತ್ತು. ವೈದ್ಯಕೀಯದಲ್ಲಿ ಮನುಷ್ಯನಲ್ಲಿನ ಖಾಯಿಲೆಗಳನ್ನು ಮಾತ್ರ ಕಾಣಬಹುದಾಗಿತ್ತು. ಯು.ಪಿ.ಎಸ್.ಸಿ. ಪರೀಕ್ಷೆಯಲ್ಲಿ ತೇರ್ಗಡೆಯಾಗಿ ದೇಶ ಸೇವೆ ಮಾಡಬೇಕೆಂಬ ಆಸೆ ನನ್ನದಾಗಿತ್ತು. ನಮ್ಮ ತಂದೆಯ ಆಸೆಯನ್ನು ಈಡೇರಿಸಿ ನನ್ನ ಆಸೆಯನ್ನು ಈಡೇರಿಸುವ ಗುರಿ ನನ್ನದಾಗಿತ್ತು.

    -ಡಾ. ಜಿ.ಗೌತಮ್, ಯು.ಪಿ.ಎಸ್.ಸಿ ೯೩೯ನೇ ರ‍್ಯಾಂಕ್ ವಿದ್ಯಾರ್ಥಿ

    ಚಿತ್ರ ೧೬ ಕೆ.ಎಲ್.ಆರ್. ೦೪ : ಡಾ.ಜಿ.ಗೌತಮ್ ಭಾವಚಿತ್ರ

    ಶ್ರೀನಿವಾಸಪುರದ ಡಾ.ಜಿ.ಗೌತಮ್ ಯು.ಪಿ.ಎಸ್.ಸಿ.ಯಲ್ಲಿ ೯೩೯ನೇ ರ‍್ಯಾಂಕ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts