More

    ಶ್ರೀಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಗೌರಿ ಪೂಜೆ

    ಶ್ರೀರಂಗಪಟ್ಟಣ: ಪುರಾಣ ಪ್ರಸಿದ್ಧ ಶ್ರೀರಂಗಪಟ್ಟಣದ ಐತಿಹಾಸಿಕ ಶ್ರೀಗಂಗಾಧರೇಶ್ವರಸ್ವಾಮಿ ದೇವಾಲಯದಲ್ಲಿ ಮಂಗಳವಾರ ಗೌರಿ ಹಬ್ಬದ ಪ್ರಯುಕ್ತ ಗೌರಿ ವ್ರತದ ಪೂಜೆ ವಿಜೃಂಭಣೆಯಿಂದ ನೆರವೇರಿತು.


    ಪಟ್ಟಣದ ವಾಟರ್ ಗೇಟ್‌ನ ಜೀವನದಿ ಕಾವೇರಿ ತೀರದಿಂದ ಶ್ರೀಮಹಾದೇವಿ ಸ್ವರ್ಣ ಗೌರಿ ಮೂರ್ತಿಯನ್ನು ಹೊತ್ತು ಪೂರ್ಣಯ್ಯ ಬೀದಿ, ಉತ್ತರಾದಿಮಠ ಹಾಗೂ ಚತುರ್ಥ ರಾಜಬೀದಿಗಳಲ್ಲಿ ಉತ್ಸವದ ಮೆರವಣಿಗೆ ನಡೆಸಲಾಯಿತು.


    ಬಳಿಕ ಗೌತಮ ಋಷಿ ಸ್ಥಾಪಿತ ಚರ್ತುಯುಗಮೂರ್ತಿ ಶ್ರೀಗಂಗಾಧರೇಶ್ವರ ಸ್ವಾಮಿಯ ಪುರಾತನ ದೇವಾಲಯದಲ್ಲಿ ಮಳಲು ಗೌರಿ ಮಾತೆಯನ್ನು ಪ್ರತಿಷ್ಠಾಪಿಸಲಾಯಿತು. ದೇವಾಲಯದ ಪ್ರಧಾನ ಅರ್ಚಕ ಗುಂಡಣ್ಣ ದೀಕ್ಷಿತ್ ಹಾಗೂ ಶಂಕರ್ ದೀಕ್ಷಿತ್ ಅವರ ನೇತೃತ್ವದಲ್ಲಿ ವಿಶೇಷ ಪೂಜಾ ಕಾರ್ಯ ನೆರವೇರಿಸಲಾಯಿತು.


    ಶ್ರೀರಂಗಪಟ್ಟಣ ಸೇರಿದಂತೆ ಸುತ್ತಮುತ್ತಲ ಗ್ರಾಮಗಳ ನೂರಾರು ಮಹಿಳೆಯರು ತಮ್ಮ ಮಕ್ಕಳು ಹಾಗೂ ಕುಟುಂಬದೊಂದಿಗೆ ದೇವಾಲಯಕ್ಕೆ ಆಗಮಿಸಿ ಬಲಕೈಗೆ ಗೌರಿಕಂಕಣ ತೊಟ್ಟು ಶ್ರೀಗೌರಿ ಮಾತೆಯ ಮಡಿಲಿಗೆ ಹೂ ಬಳೆಗಳ ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಿ ಇಷ್ಟಾರ್ಥ ಪ್ರಾಪ್ತಿಗೆ ಪ್ರಾರ್ಥಿಸಿದರು. ಭಕ್ತರಿಗೆ ಪ್ರಸಾದ ವಿತರಿಸಲಾಯಿತು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts