More

    ಶ್ರೀ ರೇವಣಸಿದ್ಧೇಶ್ವರ ರಥೋತ್ಸವ

    ಸವಣೂರ: ತಾಲೂಕಿನ ಮಂತ್ರವಾಡಿ ಗ್ರಾಮದಲ್ಲಿ ಶ್ರೀ ಜಗದ್ಗುರು ರೇವಣಸಿದ್ಧೇಶ್ವರ ಜಾತ್ರಾ ಮಹೋತ್ಸವ ಹಾಗೂ ಶ್ರೀ ಲಿಂ. ಕೆಂಜಡೇಶ್ವರ ಶಿವಾಚಾರ್ಯ ಸ್ವಾಮೀಜಿಯವರ 42ನೇ ಪುಣ್ಯಾರಾಧನೆ ಅಂಗವಾಗಿ ಶುಕ್ರವಾರ ರಥೋತ್ಸವ ಅದ್ದೂರಿಯಾಗಿ ಜರುಗಿತು.

    ಬೆಳಗ್ಗೆ ಶ್ರೀ ರೇಣಸಿದ್ಧೇಶ್ವರ ಗದ್ದುಗೆಗೆ ರುದ್ರಾಭಿಷೇಕ ನೆರವೇರಿಸಲಾಯಿತು. ಮಧ್ಯಾಹ್ನ 3 ಗಂಟೆಗೆ ಶ್ರೀಮಠದಿಂದ ಹೊರಟ ಶ್ರೀ ರೇವಣಸಿದ್ಧೇಶ್ವರ ಬೆಳ್ಳಿ ಮೂರ್ತಿ ಹಾಗೂ ಶ್ರೀಗಳವರ ಪಲ್ಲಕ್ಕಿ ಉತ್ಸವ ಸಕಲ ವಾದ್ಯ ಮೇಳಗಳೊಂದಿಗೆ ಗ್ರಾಮದ ಪ್ರಮುಖ ಬೀದಿಗಳಲ್ಲಿ ಹಾಯ್ದು ಬೆಟ್ಟಕ್ಕೆ ತಲುಪಿತು. ಬಳಿಕ ಶ್ರೀಮಠದ ಸಿದ್ಧರಾಮೇಶ್ವರ ಶಿವಾಚಾರ್ಯ ಸ್ವಾಮೀಜಿಯವರ ಉತ್ಸವ ಜರುಗಿತು. ಬೆಟ್ಟದ ಮೇಲಿಂದ ಗ್ರಾಮದಲ್ಲಿರುವ ಪಾದಗಟ್ಟಿಯವರೆಗೂ ಸಾವಿರಾರು ಭಕ್ತರು ಹರಹರ ಮಹಾದೇವ ಘೊಷಣೆಯೊಂದಿಗೆ ರಥ ಎಳೆದರು. ವಿವಿಧ ಜಿಲ್ಲೆಗಳಿಂದ ಆಗಮಿಸಿದ್ದ ಭಕ್ತರು ತೇರಿಗೆ ಬಾಳೆಹಣ್ಣು, ಉತ್ತತ್ತಿ ಹಾಗೂ ಬೆಂಡು, ಬೆತ್ತಾಸು ಎಸೆದು ಭಕ್ತಿ ಮೆರೆದರು.

    ಪಾರ್ವತಿದೇವಿ ಮಹಾರಥೋತ್ಸವ: ಜ. 25ರಂದು ಸಂಜೆ 5 ಗಂಟೆಗೆ ಪಾರ್ವತಿದೇವಿ ಮಹಾರಥೋತ್ಸವ (ಮಹಿಳೆಯರಷ್ಟೇ ರಥ ಳೆಯುವುದು) ಜರುಗುವುದು. ರಾತ್ರಿ 7 ಗಂಟೆಗೆ ಶಿವಾನುಭವ ಗೋಷ್ಠಿ ನಡೆಯಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts