More

    ಶ್ರಾವಣ ಮಾಸದಲ್ಲಿ ಸಾಂಘಿಕ ಶಕ್ತಿ ಜಾಗೃತ

    ಚಿಕ್ಕಮಗಳೂರು: ಸಾತ್ವಿಕ, ಸಾಂಘಿಕ ಶಕ್ತಿ ಜಾಗೃತಿಗೊಳಿಸುವುದು ಶ್ರಾವಣ ಕಾರ್ಯಕ್ರಮದ ಆಶಯ ಎಂದು ಸಾಹಿತಿ ಚಟ್ನಳ್ಳಿ ಮಹೇಶ್ ಹೇಳಿದರು. ಬೀಕನಹಳ್ಳಿ ಸಮುದಾಯ ಭವನದಲ್ಲಿ ಶನಿವಾರ ಕನ್ನಡ ಸಾಹಿತ್ಯ ಪರಿಷತ್ ತಾಲೂಕು ಘಟಕ ಆಯೋಜಿಸಿದ್ದ ಮನೆಯಂಗಳದಲ್ಲಿ ಶ್ರಾವಣ ಸಂಜೆ ಮಾಸಾಚರಣೆ ಉದ್ಘಾಟಿಸಿ ಮಾತನಾಡಿದರು.

    ಶ್ರಾವಣ ಮಾಸ ಭಜನೆ, ಕೀರ್ತನೆ, ಹರಿಕಥೆ, ಇಷ್ಟಲಿಂಗ ಪೂಜಾನುಷ್ಠಾನಗಳಿಗೆ ಸಮರ್ಥ, ಸಮೃದ್ಧ ಕಾಲವೆಂಬ ಮಾತಿದೆ. ಈ ತಿಂಗಳಿನಲ್ಲಿ ಸಾತ್ವಿಕ ಸಂಗತಿಗಳು ಕಿವಿ ಮೇಲೆ ಬೀಳಬೇಕು. ಭಾದ್ರಪದ ಮಾಸದಲ್ಲಿ ಉತ್ತಮ ಕಾರ್ಯಗಳ ಅನುಷ್ಠಾನಕ್ಕೆ ಶ್ರಾವಣದಲ್ಲೇ ಅಂಕುರಾರ್ಪಣೆಯಾಗಬೇಕು ಎಂಬುದು ಹಿರಿಯರ ಆಶಯವಾಗಿತ್ತು ಎಂದು ತಿಳಿಸಿದರು.

    ಸಾಹಿತ್ಯ ಮತ್ತು ಸಂಗೀತಕ್ಕೆ ಊಟ, ಬಟ್ಟೆ, ನಿದ್ದೆ ಕೊಡಲು ಸಾಧ್ಯವಿಲ್ಲದಿದ್ದರೂ ಬದುಕಿಗೆ ಬೇಕಾದ ಹೊಸ ದಿಕ್ಕು, ಆಯಾಮ ತೋರಿ ಸ್ಪೂರ್ತಿ ನೀಡಲು ಸಾಧ್ಯವಿದೆ. ಇದೇ ಸಾಹಿತ್ಯಕ್ಕಿರುವ ಅಗಾಧ ಶಕ್ತಿ. ಸಾಹಿತ್ಯ ಎಲ್ಲರನ್ನೂ ಬೆಸೆಯುತ್ತದೆ. ಮುಖಾಮುಖಿಯಾಗಿಸುತ್ತದೆ. ಇದರಿಂದ ಸಾಂಘಿಕ ಜೀವನಕ್ಕೆ ಭದ್ರ ಬುನಾದಿಯೂ ಸಿಗುತ್ತದೆ ಎಂದು ಹೇಳಿದರು.

    ತಾಲೂಕು ಕಸಾಪ ಅಧ್ಯಕ್ಷ ಬಿಸಲೇಹಳ್ಳಿ ಸೋಮಶೇಖರ್ ಮಾತನಾಡಿ, ನಮ್ಮನ್ನು ಶುದ್ಧೀಕರಿಸಿಕೊಳ್ಳಲು ಶ್ರಾವಣ ಚಿಂತನೆ ಸಹಕಾರಿ ಎಂದರು.

    ಶಿಕ್ಷಣ ಸಂಯೋಜಕ ವೀರೇಶ್ ಕೌಲಗಿ, ಹೋಬಳಿ ಕಸಾಪ ಅಧ್ಯಕ್ಷೆ ವೀಣಾ ಮಲ್ಲಿಕಾರ್ಜುನ್, ಮಾಜಿ ಅಧ್ಯಕ್ಷೆ ಭಾರತಿ ಶಿವರುದ್ರಪ್ಪ, ಯೋಗಾನಂದ, ಆಶಾ ಹೇಮಂತಕುಮಾರ್, ರಾಜೇಶ್, ಶ್ರೀ ಚಾಮುಂಡೇಶ್ವರಿ ಸುಕ್ಷೇತ್ರದ ಅಧ್ಯಕ್ಷ ಮರಿಯಪ್ಪ, ಜಿಪಂ ಮಾಜಿ ಉಪಾಧ್ಯಕ್ಷ ಬಿ.ಜಿ.ಸೋಮಶೇಖರ್, ಸಾಂಸ್ಕೃತಿಕ ಚಿಂತಕ ಎಸ್.ಎಂ.ಲೋಕೇಶಪ್ಪ, ಪ್ರಭುಲಿಂಗ ಶಾಸ್ತ್ರಿ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts