More

    ಶಿಕ್ಷಣದ ಜತೆ ಕ್ರೀಡೆಗೂ ಮಹತ್ವ ಕೊಡಿ: ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ

    ಶಿಕಾರಿಪುರ: ಸದೃಢ ದೇಹದಲ್ಲಿ ಸದೃಢವಾದ ಮನಸ್ಸಿರುತ್ತದೆ. ಶಿಕ್ಷಣದ ಜತೆಗೆ ಕ್ರೀಡೆಗೂ ಹೆಚ್ಚಿನ ಮಹತ್ವ ನೀಡಬೇಕು. ನಮ್ಮ ತಾಲೂಕಿನ ಯುವಕರು ಕ್ರೀಡಾ ಕ್ಷೇತ್ರದಲ್ಲಿ ರಾಜ್ಯ ಮತ್ತು ರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುತ್ತಿರುವುದು ಸಂತಸದ ವಿಚಾರ ಎಂದು ಲೋಕಸಭಾ ಸದಸ್ಯ ಬಿ.ವೈ.ರಾಘವೇಂದ್ರ ಹೇಳಿದರು.
    ತಾಲೂಕಿನ ಸುರಗೀಹಳ್ಳಿಯಲ್ಲಿ ಪುರುಷರ ಹೊನಲು ಬೆಳಕಿನ ಖೋ ಖೋ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿ, ಗ್ರಾಮಾಂತರ ಪ್ರದೇಶಗಳಲ್ಲಿ ಯುವಕರು ಜನಪದ ಮತ್ತು ದೇಸಿ ಕ್ರೀಡೆಗಳನ್ನು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ಹೆಚ್ಚಿನ ಗಮನಹರಿಸಬೇಕು. ಹಿಂದಿನ ಕಾಲದ ಎಷ್ಟೋ ದೇಸಿ ಕ್ರೀಡೆಗಳು ಇಂದು ನಮ್ಮ ಕಣ್ಮುಂದಿಲ್ಲ, ಅವು ನಶಿಸಿಹೋಗಿವೆ. ನಮ್ಮ ಮುಂದಿನ ಪೀಳಿಗೆಗೆ ಈ ಕ್ರೀಡೆಗಳನ್ನು ನಾವು ಬಿಟ್ಟು ಹೋಗಬೇಕು ಎಂದರು.
    ಕ್ರೀಡೆಗಳಿಂದ ಆರೋಗ್ಯಕರವಾದ ಸ್ಪರ್ಧೆ ಕಲಿಯಬೇಕು. ಸೋಲು ಗೆಲುವು ಸಹಜ, ಎರಡನ್ನೂ ಸಮಾನವಾಗಿ ಸ್ವೀಕರಿಸಬೇಕು. ಗೆದ್ದಾಗ ಬೀಗದೆ, ಸೋತಾಗ ಕುಗ್ಗದೆ ಮುನ್ನಡೆಯಬೇಕು. ಕ್ರೀಡೆಗಳು ನಮಗೆ ಗುರಿಯನ್ನು ಕಲಿಸುತ್ತವೆ. ಖೋ ಖೋ ಒಂದು ವಿಶಿಷ್ಟವಾದ ಕ್ರೀಡೆ. ಅದರಿಂದ ದೇಹ ಆರೋಗ್ಯಕರ ಆಗಿರುವುದಲ್ಲದೇ ಮನಸ್ಸು ಚೇತೋಹಾರಿ ಆಗಿರುತ್ತದೆ ಎಂದು ಹೇಳಿದರು.
    ಯುವಶಕ್ತಿ ನಾಡಿನ ಶಕ್ತಿ. ದೇಶದ ಪ್ರಗತಿಗೆ ಯುವಶಕ್ತಿಯೇ ಕಾರಣ. ಹಳ್ಳಿಗಳಲ್ಲಿ ಇನ್ನೂ ಸಾಕಷ್ಟು ಕ್ರೀಡೆಗಳಿವೆ, ಅವುಗಳನ್ನು ಗುರುತಿಸುತ್ತಿಲ್ಲವಾದ್ದರಿಂದ ಅವುಗಳು ಬೆಳಕಿಗೆ ಬಂದಿಲ್ಲ. ರಾಜ ಮಹಾರಾಜರು ಕ್ರೀಡಾಸಕ್ತರಾಗಿದ್ದರು, ಕ್ರೀಡೆಗೆ ಪ್ರೋತ್ಸಾಹ ನೀಡುತ್ತಿದ್ದರು ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts