More

    ಶಿಕ್ಷಕನ ಮರುನಿಯೋಜನೆಗೆ ವಿರೋಧ

    ಸಕಲೇಶಪುರ: ಅಮಾನತ್ತುಗೊಂಡಿರುವ ಶಿಕ್ಷಕನನ್ನು ಅದೇ ಶಾಲೆಗೆ ಮರುನಿಯೋಜನೆ ಮಾಡದಂತೆ ಕಬ್ಬಿನಗದ್ದೆ ಗ್ರಾಮಸ್ಥರು ವಿದ್ಯಾರ್ಥಿಗಳೊಂದಿಗೆ ಕ್ಷೇತ್ರಶಿಕ್ಷಣಾಧಿಕಾರಿಗಳ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.

    ಒಂದು ತಿಂಗಳ ಹಿಂದೆ ತಾಲೂಕಿನ ಕಬ್ಬಿನಗದ್ದೆ ಸರ್ಕಾರಿ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯಶಿಕ್ಷಕ ನಿರ್ವಾಣಯ್ಯ ಶಾಲೆಯ ಒಂದನೇ ತರಗತಿ ವಿದ್ಯಾರ್ಥಿಯಿಂದ ಪುಳಿಯೋಗರೆ ಎಂದು ಹೇಳಿಸುವ ವಿಡಿಯೋವನ್ನು ಸಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ವಿದ್ಯಾರ್ಥಿಯ ಕಲಿಕಾ ಸಾಮರ್ಥ್ಯವನ್ನು ಅಣಕಿಸುವ ವಿಡಿಯೋ ಹಾಕಿದ ಶಿಕ್ಷಕನನ್ನು ಶಿಕ್ಷಣ ಇಲಾಖೆ ಅಮಾನತ್ತು ಮಾಡಿತ್ತು. ಆದರೆ, ಶಿಕ್ಷಣ ಇಲಾಖೆಯ ಕ್ರಮದ ವಿರುದ್ಧ ನ್ಯಾಯಾಲಯದಲ್ಲಿ ತಡೆಯಾಜ್ಞೆ ತಂದಿರುವ ಶಿಕ್ಷಕ ಅದೇ ಶಾಲೆಗೆ ಮರುನಿಯೋಜನೆಗೊಂಡಿದ್ದರು.

    ಇದರಿಂದ ಕೋಪಗೊಂಡ ಗ್ರಾಮಸ್ಥರು ಶಿಕ್ಷಕ ಯಾವುದೆ ಕಾರಣಕ್ಕೂ ಈ ಶಾಲೆಗೆ ಬುರುವುದು ಬೇಡ, ಇದರಿಂದ ವಿದ್ಯಾರ್ಥಿಗಳ ಮೇಲೆ ದುಷ್ಪರಿಣಾಮ ಬೀರಲಿದೆ. ಶಿಕ್ಷಕ ಶಾಲೆಗೆ ಆಗಮಿಸಿದರೆ ನಾವು ನಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸುವುದಿಲ್ಲ ಎಂದು ಎಚ್ಚರಿಸಿದ್ದಾರೆ.

    ಅಲ್ಲದೆ, ಮುಂಜಾನೆಯಿಂದ ಸಂಜೆವರೆಗೆ ಕಚೇರಿ ಮುಂದೆ ಶಾಮಿಯಾನ ಹಾಕಿ ಪ್ರತಿಭಟನೆ ನಡೆಸಿದರು. ಸಂಜೆ ಕಚೇರಿಗೆ ಆಗಮಿಸಿದ ಕ್ಷೇತ್ರ ಶಿಕ್ಷಣಾಧಿಕಾರಿ ಶಿವಾನಂದ್, ದೂರವಾಣಿ ಮೂಲಕ ಶಿಕ್ಷಕನನ್ನು ಸಂಪರ್ಕಿಸಿ ಪ್ರತಿಭಟನೆ ವಿಚಾರ ತಿಳಿಸಿದರು. ಆದರೆ, ಗ್ರಾಮದ ಶಾಲೆಗೆ ಕರ್ತವ್ಯಕ್ಕೆ ತೆರಳಲು ನ್ಯಾಯಾಲಯ ನಿರ್ದೇಶನ ನೀಡಿರುವುದರಿಂದ ನಾನು ಬೇರೆ ಶಾಲೆಗೆ ಹೋಗುವುದಿಲ್ಲ ಎಂದು ಶಿಕ್ಷಕ ಪಟ್ಟು ಹಿಡಿದರು. ಇದರಿಂದಾಗಿ ಹತಾಶರಾದ ಕ್ಷೇತ್ರಶಿಕ್ಷಣಾಧಿಕಾರಿ ನ್ಯಾಯಾಲಯದ ನಿರ್ದೇಶನ ಇರುವ ಕಾರಣ ಏನು ಮಾಡಲಾಗುವುದಿಲ್ಲ. ಆದರೆ, ಪ್ರತಿಭಟನೆ ವಿಚಾರವನ್ನು ನ್ಯಾಯಾಲಯದ ಗಮನಕ್ಕೆ ತರುವುದಾಗಿ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts