More

    ಬುಡ್ಡಿ ಬಿಡಸಾಕ ಹಚ್ಚಬ್ಯಾಡ್ರಿ!

    ಗದಗ: ಕಲಿಯುವ ವಯಸ್ಸಲ್ಲಿ ಕೆಲಸಕ್ಕೆ ಕಳಿಸಬಾರದು, ಓದುವ ಮುಗ್ಧ ಮಕ್ಕಳನ್ನು ಪ್ರತಿ ಪಾಲಕರು ತಮ್ಮ ಹೊಲದ ಕೆಲಸಕ್ಕೆ ಹಚ್ಚಬಾರದು. ದೇಶದ ಮಾನವ ಸಂಪನ್ಮೂಲವನ್ನು ನಾವೆಲ್ಲರೂ ಕೂಡಿ ಅಭಿವೃದ್ಧಿ ಪಡಿಸಬೇಕು. ಬಾಲ್ಯದಲ್ಲಿ ಕೆಲಸಕ್ಕೆ ಹಚ್ಚಿದರೆ ಕಲಿಕೆಯಲ್ಲಿ ಹಿನ್ನಡೆಯಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯ ಜಿಲ್ಲಾ ಅಭಿವೃದ್ಧಿ ಉಪನಿರ್ದೇಶಕ ಎಸ್.ಡಿ. ಗಾಂಜಿ ಹೇಳಿದರು.
    ಗಜೇಂದ್ರಗಡ ತಾಲೂಕಿನ ಚಿಕ್ಕಅಳವಂಡಿ ಗ್ರಾಮದ ಶಾಲೆಗೆ ಮಂಗಳವಾರ ಭೇಟಿ ನೀಡಿದ ಅವರು ಮಕ್ಕಳು ಹೊಲಕ್ಕೆ ಹೋಗಿರುವುದನ್ನು ಖಚಿತಪಡಿಸಿಕೊಂಡು ಹೊಲಕ್ಕೆ ತೆರಳಿದರು.
    ‘ಸಾಲಿ ಬಿಡಿಸಿ ಹೆಸರು ಬುಡ್ಡಿ ಬಿಡಿಸಾಕ ಕರಕೊಂಡು ಹೋಗ್ತಾರ. ನಾವು ಸಾಲಿಗೆ ಹೊಗತೇವಿ ಅಂದ್ರೂ, ನಮ್ಮನ್ನ ಕರೆದುಕೊಂಡು ಹೊಲಕ್ಕ ಹೋಗ್ತಾರ’ ಎಂದು ಮಕ್ಕಳು ಎಸ್.ಡಿ. ಗಾಂಜಿ ಮತ್ತು ಹಿರಿಯ ಉಪನ್ಯಾಸಕ ಆರ್.ಎಸ್.ಬುರಡಿ ಅವರಿಗೆ ತಿಳಿಸಿದರು.
    ಆರ್.ಎಸ್. ಬುರಡಿ ಮಾತನಾಡಿ, ಪ್ರತಿ ಮಕ್ಕಳು ಶಾಲೆಗೆ ಪ್ರತಿದಿನ ಬರಬೇಕು, ಓದು-ಬರಹ, ಲೆಕ್ಕ ಕಲಿತು ಭವ್ಯ ಭಾರತದ ನಿಮಾರ್ತೃಗಳಾಗಬೇಕು. ಮಕ್ಕಳಲ್ಲಿಯ ಶಕ್ತಿಯನ್ನು ಪಾಲಕರೇ ಕುಂದಿಸಿದರೆ ಮುಂದುವರಿದ ರಾಷ್ಟ್ರ ಕಟ್ಟಲು ಆಗುವುದಿಲ್ಲ. ಕಲಿಯುವ ವಯಸ್ಸಲ್ಲಿ ಮಕ್ಕಳನ್ನು ಕೆಲಸಕ್ಕೆ ಹಚ್ಚಬಾರದು ಎಂದು ಪಾಲಕರಿಗೆ ತಿಳಿ ಹೇಳಿದರು.
    ನಂತರ ಇಬ್ಬರೂ ಅಧಿಕಾರಿಗಳು ಬುಡ್ಡಿ ಬಿಡಿಸಲು ಆರಂಭಿಸಿದ ಮೇಲೆ ಪಾಲಕರು ಮಕ್ಕಳನ್ನು ಶಾಲೆಗೆ ಕಳಿಸುತ್ತೇವೆ ಭರವಸೆ ನೀಡಿದರು. ವಿದ್ಯಾರ್ಥಿಗಳಾದ ಕವಿತಾ, ಕಮಲವ್ವ, ಕಾಳಪ್ಪ ಅವರನ್ನು ಮತ್ತೆ ಶಾಲೆಗೆ ಕರೆದುಕೊಂಡು ಬರಲಾಯಿತು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts