More

    ಶಾಲೆ-ಕಾಲೇಜ್‌ಗಳಲ್ಲಿ ಕರೊನಾ ಸ್ಪೋಟ: ವಿದ್ಯಾರ್ಥಿಗಳಲ್ಲಿ ಹೆಚ್ಚಿದ ಆತಂಕ

    ವಿಜಯಪುರ: ಶಾಲೆ-ಕಾಲೇಜ್ ಮತ್ತು ವಸತಿ ನಿಲಯಗಳೇ ಕರೊನಾ ಹಾಟ್‌ಸ್ಪಾಟ್‌ಗಳಾಗುತ್ತಿದ್ದು ವಿದ್ಯಾರ್ಥಿಗಳಲ್ಲಿ ತೀವ್ರ ಆತಂಕ ಸೃಷ್ಠಿಯಾಗಿದೆ.
    ಜಿಲ್ಲೆಯಲ್ಲಿ ಈವರೆಗೆ 45198 ವಿದ್ಯಾರ್ಥಿಗಳಿಗೆ ಪರೀಕ್ಷೆ ನಡೆಸಲಾಗಿದ್ದು ಒಟ್ಟು 173 ವಿದ್ಯಾರ್ಥಿಗಳಲ್ಲಿ ಸೋಂಕು ದೃಢ ಪಟ್ಟಿದೆ. 7440 ಶಿಕ್ಷಕರ ಪೈಕಿ 46 ಶಿಕ್ಷಕರಲ್ಲಿ ಸೋಂಕು ದೃಢಪಟ್ಟಿದೆ. ರಾಜ್ಯ ಅಕ್ಕಮಹಾದೇವಿ ಮಹಿಳಾ ವಿವಿಯಲ್ಲಿ ವಿದ್ಯಾರ್ಥಿನಿಯರು ಹಾಗೂ ಸಿಬ್ಬಂದಿ ಸೇರಿ 792 ಜನರ ಗಂಟಲು ದ್ರವ ಮಾದರಿ ಪರೀಕ್ಷಿಸಲಾಗಿದ್ದು 21 ಜನರಿಗೆ ಸೋಂಕು ದೃಢಪಟ್ಟಿದೆ. ಎಲ್ಲರಿಗೂ ಹೋಂಕ್ವಾರಂಟೈನ್ ಮಾಡಲಾಗಿದ್ದು ಯಾವುದೇ ಲಕ್ಷಣ ಇಲ್ಲದವರನ್ನು ಬಿಡುಗಡೆಗೊಳಿಸಿದ್ದಾಗಿ ಜಿಲ್ಲಾಡಳಿತ ತಿಳಿಸಿದೆ.
    ಇನ್ನು ರಾಜ್ಯದ ಎರಡನೇ ಸೈನಿಕ ಶಾಲೆಯಲ್ಲಿ ಮಾ. 17ರಂದು ಹೆಮ್ಮಾರಿ ಕಾಣಿಸಿಕೊಂಡಿದ್ದು 8 ವಿದ್ಯಾರ್ಥಿಗಳಲ್ಲಿ ಸೋಂಕು ದೃಢಪಟ್ಟಿದೆ. ವಿದ್ಯಾರ್ಥಿ ಮತ್ತು ಸಿಬ್ಬಂದಿಯನ್ನು ಪ್ರತ್ಯೇಕಿಸಿ ಆರೋಗ್ಯ ತಪಾಸಣೆ ನಡೆಸಲಾಗುತ್ತಿದೆ. ಇನ್ನುಳಿದ ಶಾಲೆ-ಕಾಲೇಜ್‌ಗಳಲ್ಲಿ ಕಳೆದ 15 ದಿನಗಳಿಂದ ಯಾವುದೇ ಲಕ್ಷಣಗಳು ಕಂಡು ಬಂದಿಲ್ಲ. ಕರೊನಾ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೇ ಸಂಚಾರಿ ತಪಾಸಣೆ ತಂಡ ಕಳುಹಿಸಲಾಗುವುದು. ಮುಂಜಾಗೃತ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಡಳಿತ ತಿಳಿಸಿದೆ.
    ಎಲ್ಲ ಶಾಲೆ-ಕಾಲೇಜ್‌ಗಳಲ್ಲಿ ಕರೊನಾ ಮಾರ್ಗಸೂಚಿ ಪಾಲಿಸಲು ಜಿಲ್ಲಾಡಳಿತ ಸ್ಪಷ್ಟ ಸೂಚನೆ ನೀಡಿದೆಯಾದರೂ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ ಯಾವುದೇ ಮುಂಜಾಗೃತೆ ಕೈಗೊಳ್ಳುತ್ತಿರುವುದು ಕಂಡು ಬರುತ್ತಿಲ್ಲ. ಶೀಘ್ರದಲ್ಲೇ ಸ್ನಾತಕ ಹಾಗೂ ಸ್ನಾತಕೋತ್ತರ ಪರೀಕ್ಷೆಗಳು ಆರಂಭಗೊಳ್ಳಲಿದ್ದು, ಈಗಲೇ ಎಚ್ಚೆತ್ತುಕೊಳ್ಳದಿದ್ದರೆ ಭಾರೀ ಗಂಢಾಂತರ ಎದುರಿಸಬೇಕಾಗುತ್ತದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts