More

    ವ್ಯಾದಿ ಬೂದಿ ಆದಿತಲೇ.. ಸೃಷ್ಟಿ ಸಿರಿ ಆದಿತಲೇ ಪರಾಕ್…

    ಹಾವೇರಿ: ತಾಲೂಕಿನ ದೇವರಗುಡ್ಡ ಸುಕ್ಷೇತ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವು ಗೊರವಯ್ಯ ನಾಗಪ್ಪ ದುರ್ಗಪ್ಪ ಉರ್ವಿು ಬಿಲ್ಲನ್ನೇರಿ ‘‘ವ್ಯಾದಿ ಬೂದಿ ಆದಿತಲೇ… ಸೃಷ್ಟಿ ಸಿರಿ ಆದಿತಲೇ’’ ಪರಾಕ್ ಎಂಬ ಕಾರಣಿಕದ ನುಡಿಯನ್ನು ಶನಿವಾರ ಸಂಜೆ ನುಡಿದರು.

    ಈ ಬಾರಿ ಕರೊನಾ ಹಿನ್ನೆಲೆಯಲ್ಲಿ ಮುಂಚಿತವಾಗಿ ಜನರಿಗೆ ಹಾಗೂ ಭಕ್ತರಿಗೆ ಅವಕಾಶ ನೀಡಿರಲಿಲ್ಲ. ಆದರೂ ಸಹಿತ ಜನರು ಪೊಲೀಸರ ಕಣ್ಣು ತಪ್ಪಿಸಿ ಕಾರಣಿಕ ಕೇಳಲು ಸಾವಿರಾರು ಸಂಖ್ಯೆಯಲ್ಲಿ ಆಗಮಿಸಿದ್ದರು.

    ‘ಗೊರವಯ್ಯ ನುಡಿದ ಈ ನುಡಿಯಿಂದ ಕರೊನಾ ವೈರಸ್ ಕಾಲಕ್ರಮೇಣ ಕಡಿಮೆಯಾಗಿ ಬೂದಿಯಾಗುತ್ತದೆ. ಹದಗೆಟ್ಟಿರುವ ಆರ್ಥಿಕ ಸ್ಥಿತಿ ಸುಧಾರಿಸುತ್ತದೆ. ರಾಷ್ಟ್ರದ ಹಾಗೂ ರಾಜ್ಯದ ಜನತೆ ಸುಖಮಯ ಜೀವನ ನಡೆಸುವಂತಾಗುತ್ತದೆ ಎಂಬುದು ಈ ಭವಿಷ್ಯವಾಣಿಯ ಸಂಕೇತವಾಗಿದೆ. ರಾಜಕೀಯವಾಗಿ ಇತ್ತೀಚೆಗೆ ಸಿಎಂ ಬದಲಾವಣೆ ವ್ಯಾದಿ ರಾಜ್ಯದ ಮುಖ್ಯಮಂತ್ರಿಗಳನ್ನು ಕಾಡುತ್ತಿತ್ತು. ಈಗ ಕಾರಣಿಕ ಭವಿಷ್ಯದ ವಾಣಿಯಂತೆ ವ್ಯಾದಿ ಬೂದಿಯಾಗಿ ಸರ್ಕಾರ ನೆಮ್ಮದಿಯಿಂದ ಆಡಳಿತ ನಡೆಸುತ್ತದೆ. ರಾಜ್ಯದಲ್ಲಿ ರೈತರ ಜೀವನದಲ್ಲಿ ಅತಿವೃಷ್ಟಿಯಿಂದಾಗಿ ಸಾವು-ನೋವು, ಬೆಳೆಗಳು ಹಾಳಾಗಿವೆ. ಮುಂದೆ ರೈತರು ಸುಖಮಯ ಜೀವನ ನಡೆಸುವಂತಾಗುತ್ತದೆ’ ಎಂದು ದೇವಸ್ಥಾನದ ಪ್ರಧಾನ ಆರ್ಚಕ ಸಂತೋಷಭಟ್ಟ ಪೂಜಾರ ಕಾರಣಿಕದ ನುಡಿಯನ್ನು ವಿಶ್ಲೇಷಿಸಿದರು.

    ಕಳೆದ ವರ್ಷ ‘ಘಟಸರ್ಪ ಕಂಗಾಲ್ ಆದಿತಲೇ ಪರಾಕ್’ ದೈವವಾಣಿ ಸೂಚಿಸಿ ಕರೊನಾ ಎಂಬ ಮಹಾಮಾರಿ ದೇಶದಲ್ಲಿ ತಾಂಡವಾಡುವ ಮುನ್ಸೂಚನೆಯನ್ನು ಭವಿಷ್ಯವಾಣಿ ನೀಡಿತ್ತು ಎಂದು ಜನರು ವಿಶ್ಲೇಷಿಸಿದರು.

    ಜಿಪಂ ಅಧ್ಯಕ್ಷ ಏಕನಾಥ ಭಾನುವಳ್ಳಿ, ತಾಪಂ ಸದಸ್ಯ ಭರಮ್ಮಪ್ಪ ಉರ್ವಿು, ದೇವಸ್ಥಾನ ಸಮಿತಿ ಅಧ್ಯಕ್ಷ ಎಂ.ಎಂ. ಸತಗಿ, ಭಂಡಾರದ ಗುರು ಮಲ್ಲಪ್ಪಯ್ಯ ಒಡೆಯರ್, ನಿಂಗಪ್ಪ ಮುದ್ದಿ, ದೇವಪ್ಪ ವಾಸರದ, ರಾಜಣ್ಣ ವರಗಿರಿ, ಹನುಮಂತಪ್ಪ ನಾಯರ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts