More

    ವೈಜ್ಞಾನಿಕ ಮನೋಭಾವನೆ,ತಾರ್ಕಿಕ ಚಿಂತನೆಗೆ ಸಹಕಾರಿ

    ಚಿತ್ರದುರ್ಗ: ನಗರದ ವಿದ್ಯಾವಿಕಾಸ ವಿದ್ಯಾಸಂಸ್ಥೆಯಲ್ಲಿ ಮಂಗಳವಾರ ವಿಜ್ಞಾನ ವಸ್ತು ಪ್ರದರ್ಶನ ಏರ್ಪಡಿಸಲಾಗಿತ್ತು. ಈ ವೇಳೆ ಮಾತನಾಡಿದ ಅಂತರ್ಜಲ ತಜ್ಞ ಡಾ.ಎನ್.ಜೆ.ದೇವರಾಜರೆಡ್ಡಿ ಅವರು, ನೀರಿನ ಸದ್ಬಳಕೆ ಕುರಿತು ಉಪನ್ಯಾಸ ನೀಡಿದರು. ವಿದ್ಯಾರ್ಥಿಗಳ ಸಿದ್ಧಪಡಿಸಿದ ವಿಜ್ಞಾನದ ವಿವಿಧ ಮಾದರಿಗಳಿಗೆ ಮೆಚ್ಚುಗೆ ವ್ಯಕ್ತ ಪಡಿಸಿದರು.
    ಸಂಸ್ಥೆ ನಿರ್ದೇಶಕ ಎಸ್.ಎಂ.ಪೃಥ್ವೀಶ್ ಮಾತನಾಡಿ, ವಿದ್ಯಾರ್ಥಿಗಳ ಪ್ರತಿಭಾ ಇಂತಹ ವಸ್ತುಪ್ರದರ್ಶಗಳು ಸಹಕಾರಿಯಾಗುತ್ತವೆ ಎಂದರು. ಸಂಸ್ಥೆ ಕಾರ‌್ಯದರ್ಶಿ ಬಿ.ವಿಜಯ್‌ಕುಮಾರ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ವೈಜ್ಞಾನಿಕ ಮನೋಭಾವನೆ, ತಾರ್ಕಿಕ ಚಿಂತನೆಗೆ ವಿಜ್ಞಾನ ವಸ್ತು ಪ್ರದರ್ಶನ ಸಹಕಾರಿಯಾಗಲಿದೆ ಎಂದರು. ತೀರ್ಪುಗಾರ ಕೆ.ಒ.ನಾಗೇಶ್ ಮಾತನಾಡಿದರು.
    ಸಾರಿಗೆ ಮತ್ತು ಸಂವಹನ, ತ್ಯಾಜ್ಯವಸ್ತುಗಳ ಸದ್ಭಳಕೆ, ಆಹಾರ ಸಂರಕ್ಷಣೆ ಮತ್ತು ಭದ್ರತೆ, ಗಣಿತದ ಮಾದರಿ ರಚನೆ, ಪರ್ಯಾಯ ಸಂಪನ್ಮೂಲ ಗಳ ನಿರ್ವಹಣೆ, ನೀರಿನ ಸರಿಯಾದ ನಿರ್ವಹಣೆ ಮತ್ತು ಆರೋಗ್ಯ ಇತ್ಯಾದಿ ವಿಷಯಗಳಡಿ 6 ರಿಂದ 10ನೇ ತರಗತಿ 210ಕ್ಕೂ ಹೆಚ್ಚು ವಿದ್ಯಾ ರ್ಥಿಗಳು 103 ಮಾದರಿಗಳನ್ನು ಪ್ರದರ್ಶಿಸಿದರು.
    ತೀರ್ಪುಗಾರರಾದ ವಿ.ಎನ್.ಗೌರೀಶ್,ಮೃತ್ಯುಂಜಯ ,ಶಾಲಾ ಆಡಳಿತಾಧಿಕಾರಿ ಡಾ.ಕೆ.ಎನ್.ಸ್ವಾಮಿ ಮುಖ್ಯಶಿಕ್ಷಕ ಸಿ.ಡಿ.ಸಂಪತ್‌ಕುಮಾರ್,ಪ್ರಾಂಶುಪಾಲ ಪಿ.ಬಸವರಾಜಯ್ಯ ಮತ್ತಿತರರು ಇದ್ದರು. ವಿದ್ಯಾರ್ಥಿನಿ ತೃಷಾ ಪ್ರಾರ್ಥಿಸಿದರು. ಎನ್.ಜಿ.ತಿಪ್ಪೇಸ್ವಾಮಿ ನಿರೂಪಿಸಿದರು, ಮೇಘನಾ ಸ್ವಾಗತಿಸಿ, ಪಿ.ವಿ.ರೇಖಾ ವಂದಿಸಿದರು.


    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts