More

    ವೃತ್ತಿ ಜತೆಗೆ ಆರೋಗ್ಯಕ್ಕೂ ಇರಲಿ ಆದ್ಯತೆ

    ಬೆಳಗಾವಿ: ಓದುಗರ ಕೈಗೆ ದಿನವೂ ಒಂದಿಲ್ಲೊಂದು ಹೊಸತನದ ಮೂಲಕ ಪತ್ರಿಕೆ ತಲುಪುವಲ್ಲಿ ಪತ್ರಕರ್ತರ ಪಾತ್ರ ಮಹತ್ವದ್ದಾಗಿರುತ್ತದೆ. ಅದಕ್ಕಾಗಿ ಒತ್ತಡದ ್ತ ಬದುಕಿನಲ್ಲೂ ತಮ್ಮ ಹಾಗೂ ಕುಟುಂಬದವರ ಆರೋಗ್ಯದ ಕಾಳಜಿ ವಹಿಸಬೇಕು ಎಂದು ವಿಜಯಾ ಆಸ್ಪತ್ರೆಯ ಡಾ.ವಿಜಯ ಪಾಟೀಲ ಹೇಳಿದರು.

    ಶನಿವಾರ ಬೆಳಗಾವಿ ಪತ್ರಕರ್ತರ ಸಂಘದಿಂದ ಪತ್ರಿಕಾ ವರದಿಗಾರರು ಹಾಗೂ ಛಾಯಾಗ್ರಾಹಕರಿಗೆ ಉಚಿತ ಆರೋಗ್ಯ ತಪಾಸಣೆ ನಡೆಸಿ, ಬಳಿಕ ಮಾತನಾಡಿದ ಅವರು, ಬಹುತೇಕ ಇಡೀ ದಿನವನ್ನು ಧಾವಂತದಲ್ಲೇ ಕಳೆಯುವವವರು ಉಳಿದವರಿಗಿಂತಲೂ ನಿದ್ದೆಗೆ ಹೆಚ್ಚಿನ ಸಮಯ ಮೀಸಲಿಡಬೇಕು. ಅಂದಾಗ ಮಾತ್ರ ಸದೃಢ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯ ಎಂದು ಸಲಹೆ ನೀಡಿದರು.

    50 ವರ್ಷ ಮೇಲ್ಪಟ್ಟವರು ಆಹಾರ ಪದ್ಧತಿಯಲ್ಲಿ ಎಣ್ಣೆ, ತುಪ್ಪ, ಸಕ್ಕರೆ ಬದಲಾವಣೆ ಮಾಡಿಕೊಳ್ಳುವುದು ಸೂಕ್ತ. ಸಕ್ಕರೆ ಬಳಸುವ ಬದಲು ಬೆಲ್ಲದ ಪದಾರ್ಥ ಉಪಯೋಗಿಸಿ, ಹೆಚ್ಚಿನ ಪ್ರಮಾಣದಲ್ಲಿ ಊಟದಲ್ಲಿ ಹಸಿ ತರಕಾರಿ ಬಳಕೆ, ಕನಿಷ್ಠ ನಾಲ್ಕು ಲೀಟರ್ ನೀರು ಸೇವನೆ ಮಾಡಬೇಕು. ನಿತ್ಯ ನಾಲ್ಕು ಕಿಲೋಮೀಟರ್ ನಡಿಗೆ ಇಂದಿನ ತುರ್ತು ಅಗತ್ಯವಾಗಿದ್ದು, ಸಮೀಪದಲ್ಲಿರುವ ಸ್ಥಳಗಳಿಗೆ ತೆರಳುವಾಗ ಸಾಧ್ಯವಾದಷ್ಟು ಮಟ್ಟಿಗೆ ವಾಹನಗಳನ್ನು ಅವಲಂಬಿಸದೆ, ನಡೆದು ಹೋಗುವ ಜತೆಗೆ ನಿಯಮಿತವಾಗಿ ವ್ಯಾಯಾಮ ಮಾಡಬೇಕು ಎಂದರು. ಬೆಳಗಾವಿ ಪತ್ರಕರ್ತರ ಸಂಘದ ಅಧ್ಯಕ್ಷ ಮಹೇಶ ವಿಜಾಪುರ ಮಾತನಾಡಿ, ಆರೋಗ್ಯ ತಪಾಸಣೆ ಜತೆಗೆ ಆರೋಗ್ಯ ಕಾಪಾಡಿಕೊಳ್ಳಲು ಸಾಕಷ್ಟು ವಿಷಯಗಳನ್ನು ತಿಳಿಸಿಕೊಡುವ ಕೆಲಸ ಡಾ.ವಿಜಯ ಪಾಟೀಲ ಅವರು ಮಾಡಿದ್ದು, ವೈದ್ಯರ ಸಲಹೆಯಂತೆ ಸಹೋದ್ಯೋಗಿಗಳು ಜೀವನಶೈಲಿ ಬದಲಾಯಿಸಿಕೊಂಡು ಹಾಗೂ ನಿಯಮಿತ ವ್ಯಾಯಾಮ ಮಾಡಬೇಕಿದೆ ಎಂದು ಅಭಿಪ್ರಾಯಪಟ್ಟರು.

    ಅದಕ್ಕೂ ಮುನ್ನ ಬೆಳಗಾವಿ ಪತ್ರಿಕಾ ವರದಿಗಾರರು, ಛಾಯಾಗ್ರಾಹಕರಿಗೆ ರಕ್ತ ತಪಾಸಣೆ, ಇಸಿಜಿ ಸೇರಿ ಇನ್ನಿತರ ತಪಾಸಣೆ ಮಾಡಿ, ಸೂಕ್ತ ಸಲಹೆ ನೀಡಲಾಯಿತು. ವಿಜಯಾ ಆಸ್ಪತ್ರೆಯ ವೀರೇಶ ಹಿರೇಮಠ, ಪತ್ರಕರ್ತರಾದ ಸುರೇಶ ನೇರ್ಲಿ, ನಾಗರಾಜ, ರವಿ ಉಪ್ಪಾರ, ಜಗದೀಶ ಹೊಂಬಳಿ, ರವಿ ಗೋಸಾವಿ, ಅರುಣ ಯಳ್ಳೂರಕರ, ಸುನೀಲ ಪಾಟೀಲ, ಅಶೋಕ ಮುದ್ದಣ್ಣವರ, ರಾಜಶೇಖರಯ್ಯ ಹಿರೇಮಠ, ಶಿವರಾಯ ಏಳುಕೋಟಿ, ಪ್ರಶಾಂತ ಮಲಗಾವಿ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts